ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾಂಗ್ರೆಸ್ ಕಾರ್ಯಕರ್ತರ ಸಭೆ A meeting of Congress workers

ಬ್ಯಾಡಗಿ 22: ಸುಳ್ಳು ಹೇಳಿಕೊಂಡೇ ಜನತೆಯನ್ನು ಯಾಮಾರಿಸುವ  ಬಿಜೆಪಿ ಪಕ್ಷಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಮಾಡುವ, ಮಾಡಿದಂತೆ ಹೇಳುವ ಕಾಂಗ್ರೆಸ್ ಪಕ್ಷ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ್ ಶಿವಣ್ಣನವರ ತಿಳಿಸಿದರು. ತಾಲೂಕಿನ ಕಾಗಿನೆಲೆ ಗ್ರಾಮದ ಕನಕ ಕಲಾಭವನದಲ್ಲಿ ಬ್ಯಾಡಗಿ ಮತ್ತು ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

“ರಾಜ್ಯದ ಜನತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಅಭಿವೃದ್ಧಿಗೆ ಒತ್ತು ನೀಡದೆ ಜಾತಿ ಧರ್ಮಗಳ ಮಧ್ಯೆ ಗಲಾಟೆಗಳಿಗೆ ಸೀಮಿತವಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಹಾಳುಮಾಡದೆ ಮನೆ ಮನೆಗೆ ಸೌಲಭ್ಯ ಒದಗಿಸಿದೆ. ಕಾಂಗ್ರೆಸ್ ಪಕ್ಷವು ಬಡವರ ದಲಿತರ ಮಹಿಳೆಯರ ಪರವಾಗಿದ್ದು, ಮುಂದೆ ಬರುವ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯತಿ. ನಗರ ಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾವು ಕಾಂಗ್ರೆಸ್ ಪಕ್ಷದ ಮೇಲೆ ಇರಬೇಕಾಗಿದೆ” ಎಂದರು.“           ತಾಲೂಕಿನಲ್ಲಿ ಈಗಾಗಲೇ ಮಾದರಿ ತಾಲೂಕುಆಗುವಂತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಲೆನಾಡ ಭಾಗದಲ್ಲಿ ನಾವು ನಮ್ಮ ಸರ್ಕಾರ ಬಂದಾಗ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಬ್ಯಾಡಗಿ ಮತ್ತು ತಿಳುವಳಿ ರಸ್ತೆ ನಿರ್ಮಾಣ . ಹಿರೇಹಳ್ಳಿಯಲ್ಲಿ ಸರ್ಕಾರಿ ಕಾಲೇಜುಗಳು .ನೂರಾರು ಕೋಟಿ ಅನುದಾನ ನೀಡಲಾಗಿದೆ .ಈ ಭಾಗದಲ್ಲಿ ಪಶು ಚಿಕಿತ್ಸಾಲಯ ಆಸ್ಪತ್ರೆ. ಕಾಲೇಜು, ಮುರಾರ್ಜಿ ದೇಸಾಯಿ. ಅಲ್ಪಸಂಖ್ಯಾತರ ಹಾಗೂ ಕಾರ್ಮಿಕರ ಮಕ್ಕಳಿಗೆ ವಸತಿ ನಿಲಯಗಳು. ಸೆರಿದಂತೆ ರಸ್ತೆ ಸೇರಿದಂತೆ ಅಭಿವೃದ್ಧಿಗೆ ಕೆಲಸ ಮಾಡಲಾಗಿದೆ. ನಿಮ್ಮ ಋಣ ನಮ್ಮ ಮೇಲಿದೆ ಅದನ್ನು ತೀರಿಸುವ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.  

“ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದ ತನ್ನದೇ ಸಾಧನೆಗಳನ್ನು ದೇಶಕ್ಕೆ ಕೊಡುಗೆ ಕೊಟ್ಟಿದೆ. ಜೆಡಿಎಸ್ ಮತ್ತು ಬಿಜೆಪಿಯವರನ್ನು ಪ್ರಶ್ನೆ ಮಾಡಬೇಕು, ಜನರನ್ನು ಯಾಮಾರಿಸಿದ್ದು ಆಗಿದೆ. ಅವರ ಆಟ ಚುನಾವಣೆಯಲ್ಲಿ ನಡೆಯುವುದಿಲ್ಲವೆಂದು  ಜನರನ್ನು ಮತ್ತೊಮ್ಮೆ ಯಾಮಾರಿಸಲು ಹೊರಟಿದ್ದಾರೆ. ಜನ ಸ್ವಾಭಿಮಾನದಿಂದ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳೆಯರಿಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಎಲ್ಲಾ ವರ್ಗದ ಕುಟುಂಬದವರಿಗೂ ಯೋಜನೆಗಳನ್ನು  ಮುಟ್ಟಿಸುವ ಕೆಲಸ ಮಾಡಿದೆ ಕ್ಷೇತ್ರದ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿಯವರು ಕಾಂಗ್ರೆಸ್ ಪಕ್ಷ ಏನು ಕೆಲಸ ಮಾಡಿದೆ ಎಂದು ಕೇಳುತ್ತಾರೆ ಆದರೆ ಇಂದು ಜಾತ್ಯತೀತವಾಗಿ ಪಕ್ಷಾತೀತವಾಗಿ ಪ್ರತಿಯೊಬ್ಬ ಬಡ ಕುಟುಂಬದವರಿಗೆ ಗ್ಯಾರಂಟಿ ಯೋಜನೆ ಮೂಲಕ ಅವರ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ.  

ನಮ್ಮ ಸರ್ಕಾರ ಗುಡ್ಡದ ಮಲ್ಲಾಪುರ ಪೈಪ್ ಲೈನ್ ಮೂಲಕ ಕೆರೆಗಳ ಜೋಡಣೆ ಮಾಡಲು 115 ಕೋಟಿ ಅನುದಾನ ವನ್ನು ಮೊದಲ ಹಂತವಾಗಿ 50 ಕೋಟಿ ಹಣವನ್ನು ನೀಡಲಾಗಿದ್ದು.  ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಿಗೆ ಹದನಾಲ್ಕು ಕೋಟಿ ಬಿಡುಗಡೆ ಮಾಡಿಸಲಾಗಿದೆ ಮುಂದಿನ ದಿನಗಳಲ್ಲಿ ಕಾಗಿನೆಲೆ ಗ್ರಾಮದ ಪೊಲೀಸ್ ಸ್ಟೇಷನ್ ನಿಂದ ಕಾಶೆಂಬಿಯವರೆಗೆ ಹಾಗೂ ಕನಕದಾಸ ಸರ್ಕಲ್ ಇಂದ ಕುಮ್ಮೂರು ಕ್ರಾಸ್ ವರೆಗೆ ಮತ್ತು ಮೊಟ್ಟೆ ಬೆನ್ನೂರಿನಿಂದ.  ಬ್ಯಾಡಗಿಯವರಿಗೆ ದ್ವೀಪತ ರಸ್ತೆ ನಿರ್ವಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ.  

ಮತ್ತು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನೀಡಿರುವ ಗ್ಯಾರಂಟಿ ಕಾರ್ಯಕ್ರಮಗಳು ಬಡವರ ಬದುಕು ಉತ್ತಮಗೊಳಿಸುವುದಕ್ಕೆ ಕಾರಣವಾಗಿವೆ ಮಹಿಳೆಯರಿಗೆ ನೀಡಿರುವ 2 ಸಾವಿರ ಹಣ ಉಚಿತ ಬಸ್ ಪ್ರಯಾಣ ಇಡೀ ರಾಜ್ಯದ ಆರ್ಥಿಕ ಚೇತರಿಕೆಗೆ ಕಾರಣವಾಗಿದೆ ಕೇಂದ್ರ ಸರ್ಕಾರವೇ ರಾಜ್ಯದ ಆರ್ಥಿಕ ಸಾಧನೆಗೆ ಮೆಚ್ಚಿ ಪ್ರಶಸ್ತಿ ನೀಡಿದೆ ರಾಜ್ಯದ ತಲಾ ಆದಾಯ ಇತರೆ ಎಲ್ಲ ರಾಜ್ಯಕ್ಕಿಂತ ಹೆಚ್ಚಾಗಿದೆ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಸ್ಥಿತಿ ತಳ ಮುಟ್ಟಿದೆ ಎನ್ನುವ ಬಿಜೆಪಿ ರಾಜ್ಯ ಮುಖಂಡರ ಆರೋಪಕ್ಕೆ ಕೇಂದ್ರವೇ ಉತ್ತರ ನೀಡಿದೆ ಮಾತ್ರವಲ್ಲದೆ ದೆಹಲಿ ಬಿಹಾರ ಚುನಾವಣೆಗಳಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದೆ. 

ಎಲ್ಲ ವಿಷಯ ಕುರಿತು ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ನೀಡುವ ಕೆಲಸ ಕಾರ್ಯಕರ್ತರು ಮಾಡಬೇಕಾಗಿದೆ ಪ್ರತಿಯೊಂದು ಗ್ರಾಮಗಳ ಸರ್ವಾಂಗಿನ ಅಭಿವೃದ್ಧಿಗೆ ಮತ್ತು ತಾಲೂಕಿನ ತಾಲೂಕನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯುವ ಕೆಲಸವನ್ನು ನಾನು ಮಾಡುತ್ತೇನೆ ಮತ್ತು ಇದಕ್ಕೆಲ್ಲಾ  ನಿಮ್ಮ ಸಹಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಇಷ್ಟೆಲ್ಲ ಕೆಲಸಗಳು ನಿಮ್ಮ ಮಾರ್ಗದರ್ಶನದಿಂದ ಆಗಿವೆ ಎಂದು ಹೇಳಿದರು.  

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ದಾನಪ್ಪ ಚೂರಿ ಮಾತನಾಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆಲಸಗಳನ್ನು ತರುವಲ್ಲಿ ನಮ್ಮ ಬ್ಯಾಡಗಿ ಕ್ಷೇತ್ರ ವಾಗಿದೆ ಇದೆಲ್ಲಾ ನಮ್ಮ ನೆಚ್ಚಿನ ಶಾಸಕರ ಶ್ರಮದಿಂದ ನಮ್ಮ ಶಾಸಕರು ನಮ್ಮ ತಾಲೂಕಿಗೆ ಶಿಕ್ಷಣ .ಕುಡಿಯುವ ನೀರು ಹಾಗೂ ಎಲ್ಲ ವರ್ಗದವರಿಗೂ ಮೂಲಭೂತ ಸೌಕರ್ಯಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲಿ ತಾಲೂಕಿನ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದರು ಈಗಾಗಲೇ ಪಟ್ಟಣ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ನಗರಸಭೆ ಚುನಾವಣೆಗಳು ಸಮೀಪ ಸುತ್ತಿರುವ ಸಮಯದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆ ಮನೆಗೆ ಹೋಗಿ ನಮ್ಮ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳಿಗೆ ನಾವು ನೀಡುತ್ತಿರುವ ಗ್ಯಾರಂಟಿಗಳು ಬಂದು ತಲುಪುತ್ತಿಲ್ಲವೋ ಎಂದು ವೀಕ್ಷಿಸಿ ಮತ್ತು ನಮ್ಮ ಪಕ್ಷ ಮಾಡಿರುವ ಸಾಧನೆಗಳ ಬಗ್ಗೆ ತಿಳಿಸಿ ನಮ್ಮ ಪಕ್ಷಕ್ಕೆ ಮತ ನೀಡುವಂತೆ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕು ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳು ಹಲವಾರು ಇರುತ್ತವೆ ಅವುಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು. 

ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ್ ಮಾತನಾಡಿ ಮಲೆನಾಡ ಪ್ರದೇಶಕ್ಕೆ ನಮ್ಮ ಶಾಸಕರು ಈಗಾಗಲೇ 15 ಕೋಟಿ ಎಷ್ಟು ವಿವಿಧ ಯೋಜನೆಗಳಿಗೆ ಅನುದಾನವನ್ನು ನೀಡಿದ್ದಾರೆ ಕೇವಲ ಎರಡೇ ವರ್ಷದಲ್ಲಿ ಈ ತರಹದ ಅನುದಾನವನ್ನು ಇಲ್ಲಿಯವರೆಗೆ ಯಾವ ಶಾಸಕರು ತಂದಿರುವುದಿಲ್ಲ ರಾಜ್ಯದಲ್ಲಿ ನಾವು ಚುನಾವಣೆಯಲ್ಲಿ ಪೂರ್ವದಲ್ಲಿ ನೀಡಿದ ಭರವಸೆಯನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಮೂಲಕ ಅದರ ನಡುವೆಯೂ ನಮ್ಮ ಕ್ಷೇತ್ರದಲ್ಲಿ ಬೇಕಾಗುವ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಅನುದಾನವನ್ನು ತರುವಲ್ಲಿ ನಮ್ಮ ಶಾಸಕರು ಹಗಲಿರಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು . 

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತಕೋಟಿ. ಗ್ಯಾರಂಟಿ ತಾಲೂಕು ಅಧ್ಯಕ್ಷ ಶಂಬನಗೌಡ ಪಾಟೀಲ್‌.ಬಸವರಾಜ ಸವಣೂರು. ಸುರೇಶ್ ಗೌಡ ಪಾಟೀಲ್‌. ವೀರೇಶ್ ಮತ್ತಿಹಳ್ಳಿ. ಬೀರ​‍್ಪ ಬಣಕಾರ್‌. ಎಸ್ ಬಿ ಅಂಬಲಿ. ಡಾಕ್ಟರ್ ಸೌಧಾಗರ. ಮಾರುತಿ ಅಚ್ಚಿಗೇರಿ. ಖಾದರ್ ಸಾಬ್ ದೊಡ್ಮನಿ ಅಬ್ದುಲ್ ಮುನಫ್ ಏರಿಸಿಮೆ .ಮಂಜನ ಗೌಡ ಪಾಟೀಲ್‌. ಲಕ್ಷ್ಮಿ ಜಿಂಗಾಡಿ ಪ್ರೇಮಾ ಜೋಗುಳ. ಜಿಲ್ಲಾ ಕೆಡಿಪಿ ಸದಸ್ಯ ಮಂಜೂರ್ ಅಲಿ ಹಕ್ಕಿಮ್‌. ಹಾಗೂ ಗ್ರಾಮಮಟ್ಟದ ಮುಖಂಡರು. ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.