ಧರ್ಮಸ್ಥಳ ಕ್ಷೇತ್ರದ ಡಾ. ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ನಿಂಧನೆ ಮಾಡುವವರ ವಿರುದ್ಧ ಆಗಸ್ಟ 12 ರಂದು ರಾಯಬಾಗ ಪಟ್ಟಣದಲ್ಲಿ ಬೃಹತ್ ಹೋರಾಟ
A massive protest will be held in Rayabaga town on August 12 against those who are defaming the fami
ಧರ್ಮಸ್ಥಳ ಕ್ಷೇತ್ರದ ಡಾ. ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ನಿಂಧನೆ ಮಾಡುವವರ ವಿರುದ್ಧ ಆಗಸ್ಟ 12 ರಂದು ರಾಯಬಾಗ ಪಟ್ಟಣದಲ್ಲಿ ಬೃಹತ್ ಹೋರಾಟ
ರಾಯಬಾಗ 10; ಜೈನ್ ಸಮಾಜದ ನಿಂಧನೆ ದಿನದಿಂದ ದಿನಕ್ಮೆ ಹೆಚ್ಚುತ್ತಿದೆ. ನಿಂದನೆ ಮಾಡುತ್ತಿರುವವರ ವಿರುದ್ಧ ಎಲ್ಲ ಜೈನರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಹಾಗಾಗಿ ಧರ್ಮಸ್ಥಳ ಕ್ಷೇತ್ರದ ಡಾ. ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ನಿಂಧನೆ ಮಾಡುವವರ ವಿರುದ್ಧ ಆಗಸ್ಟ 12 ರಂದು ಬೆಳಿಗ್ಗೆ 9 ಗಂಟೆಗೆ ರಾಯಬಾಗ ಪಟ್ಟಣದಲ್ಲಿ ಬೃಹತ್ ಹೋರಾಟ ಮಾಡಲಾವುಗುವುದೆಂದು 108 ಡಾ. ಶ್ರೀ ಸಿದ್ದಸೇನ ಮುನಿಮಹರಾಜರ ಹೇಳಿದರು. ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿರುವ ಸುರೇಂದ್ರ ದೇವೆಂದ್ರ ಕಾಗವಾಡೆ ಸಮುದಾಯ ಭವನದಲ್ಲಿ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ಅಪಪ್ರಚಾರ, ಶ್ರೀ ಕ್ಷೇತ್ರ ನಾಂದನಿ ಜೈನ್ ಮಠದ ಆನೆ ಮರಳಿ ತರಲು ಸೇರಿದಂತೆ ವಿವಿಧ ಬೇಡಿಕೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಂಗಳವಾರ ದಿ. 12 ರಂದು ರಾಯಬಾಗ ಪಟ್ಟಣದಲ್ಲಿ ಜೈನ ಶ್ರಾವಕ ಶ್ರಾವಕಿಯರು ಭಾಗವಹಿಸಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಗೀರೀಶ್ ಮಟ್ಟಣ್ಣವರ ಜೈನ್ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಹೋರಾಟ ಮಾಡಬೇಕಿದೆ. ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾದದ್ದು, ಹೆಗ್ಗಡೆಯವರ ಕುಟುಂಬದವರ ಮೇಲೆ ಅವಹೇಳನಕಾರಿ ಪದಗಳನ್ನು ಬಳಸುತ್ತಿದ್ದಾರೆ. ಕೇವಲ ಮಟ್ಟಣವರ ಅಲ್ಲ ಮಹೇಶ ತಿಮರೊಡ್ಡಿ ಅವರ ಮೇಲೆ ಕೇಸ್ ಹಾಕಿ ಕಾನೂನು ಹೋರಾಟ ಮಾಡಬೇಕಿದೆ ಎಂದರು.ನಾವು ಉಳಿಯಬೇಕಾದರೆ ಧರ್ಮ ಅವಶ್ಯಕತೆ ಇದೆ. ಧರ್ಮಕ್ಕೆ ಕಂಠಕ ಬಂದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಿದೆ. ಶಿಖರ್ಜಿ ಉಳುವಿಗಾಗಿ ಹೋರಾಟ ಮಾಡಿದ ಹಾಗೇ ಧರ್ಮಸ್ಥಳ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಯಾವ ತಾಲೂಕು, ಹಳ್ಳಿ, ಜಿಲ್ಲೆಗಳಲ್ಲಿ ಹೋರಾಟಮಾಡಿದರೆ ನಾನು ಬರವುದಕ್ಕೆ ಸಿದ್ಧನಿದ್ದೇನೆ ಎಂದರು.ನಂತರ ಜೈನ್ ಸಮಾಜದ ತಾಲೂಕಾ ಅಧ್ಯಕ್ಷ ಡಿ ಸಿ ಸದಲಗೆ ಮಾತನಾಡಿ, ಧರ್ಮಸ್ಥಳ ಹಿಂದೂ ಧರ್ಮ ಧರ್ಮಾಧಿಕಾರಿ ಜೈನರು ಇವರನ್ನು ಓಡಿಸುವವರ ಹುನ್ನಾರ ನಡೆಯುತ್ತಿದೆ. ಹಿಂದೂ ಧರ್ಮ, ಜೈನ್ ಧರ್ಮ ಉಳಿಸಬೇಕಾದರೆ ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಿದೆ. ಧರ್ಮದರ್ಶಿ ವಿರೇಂದ್ರ ಹೆಗ್ಗಡೆ ಅವರ ಮೇಲೆ ನಿರಂತರ ಟೀಕೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಿದೆ ಎಂದರು.ಶ್ರೀಕಾಂತ ಖೋಂಬಾರೆ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರ ಮೇಲೆ ಸಮತಾ ಭಾವ ಇದ್ದಿದ್ದರಿಂದ ಅವರು ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ಹೆಗ್ಗಡೆಯವರಿಗೆ ಜಯ ಖಚಿತವಗುತ್ತದೆ ಎಂದರು. ಈ ಸಂದರ್ಭದಲ್ಲಿ ಅನೀಶ್ ಪರಮಗೌಡ, ಆರ್ ಬಿ ಖೋತ, ರಾವಸಾಹೇಬ್ ಪಾಟೀಲ,ಸಿದ್ದಪ್ಪ ನಾಗನೂರ, ಶಾಂತಿನಾಥ ಪಾಟೀಲ, ರಾಜೀವ ದೇಸಾಯಿ, ಬಾಹುಬಲಿ, ಅಜೀತ ಶೆಟ್ಟಿ, ವೆಂಕಟೇಶ ಬನವಣೆ ಸೇರಿದಂತೆ ಅನೇಕ ಜೈನ್ ಶ್ರಾವಕ ಶ್ರಾವಕೀಯರು ಉಪಸ್ಥಿತರಿದ್ದರು. ಭರತ ಸಾಜನೆ ನಿರೂಪಿಸಿ, ಸಂಜಯ ಪಾಟೀಲ ವಂದಿಸಿದರು. 10 ರಾಯಬಾಗ 1ಪೋಟೊ ಶಿರ್ಷಿಕೆ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ಅಪಪ್ರಚಾರ, ಶ್ರೀ ಕ್ಷೇತ್ರ ನಾಂದನಿ ಜೈನ್ ಮಠದ ಆನೆ ಮರಳಿ ತರಲು ಸೇರಿದಂತೆ ವಿವಿಧ ಬೇಡಿಕೆ ಕುರಿತು ಪೂರ್ವಭಾವಿ ಸಭೆಯಲ್ಲಿ ಶ್ರೀ ಸಿದ್ಧಸೇನೆ ಮಹಾರಾಜರ ಮಾತನಾಡುತ್ತಿರುವುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 