ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಬಿಡುಗಡೆಗೆ ಮತ್ತು ಟೆಂಡರ್ ಹಗರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಬಿಡುಗಡೆಗೆ ಮತ್ತು ಟೆಂಡರ್ ಹಗರಣ ನ್ಯಾಯಾಂಗ ತನಿಖೆಗೆ  ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ.   A massive protest march was held demanding the release of scholarships for the children of construct

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಬಿಡುಗಡೆಗೆ ಮತ್ತು ಟೆಂಡರ್ ಹಗರಣ ನ್ಯಾಯಾಂಗ ತನಿಖೆಗೆ  ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ.   

  ಕೊಪ್ಪಳ 03 : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಸೇರಿದಂತೆ ಇತರೆ ಸಹಾಯಧನ ತಕ್ಷಣ ಬಿಡುಗಡೆ ಮಾಡಲು ಮತ್ತು ವಿವಿಧ ಕಿಟ್ ಗಳ ಟೆಂಡರ್ ಹಗರಣ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ.(ಐ.ಎಫ್‌.ಟಿ.ಯು)ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಮಂಗಳವಾರ ಕಟ್ಟಡ ಕಾರ್ಮಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಚಿ.ಗರಗ ಅವರ ಮೂಲಕ ಮನವಿ ಸಲ್ಲಿಸಿದರು.  ನಗರದ ಈಶ್ವರ ಗುಡಿ ಪರಿಸರದ ಕಾವ್ಯಾನಂದ ಪಾರ್ಕ್‌ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಶೋಕ ವೃತ್ತ ಬಳಸಿಕೊಂಡು ಕನಕದಾಸ ವೃತ್ತಕ್ಕೆ ತೆರಳಿ ಪ್ರತಿಭಟನಾ ಸಭೆ ನಡೆಸಿ ಸಲ್ಲಿಸಿದ ಮನವಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ  ಬಾರ್ ಬೆಂಡಿಂಗ್‌. ರಾಡ್ ಬೆಂಡಿಂಗ್‌. ಕಾರ​‍್ೆಂಟರ್‌. ಪೇಂಟರ್‌. ಎಲೆಕ್ಟ್ರಿಕಲ್‌. ಪ್ಲಂಬಿಂಗ್‌. ವೆಲ್ಡಿಂಗ್‌. ಟೈಲ್ಸ್‌.ಶಾಲಾ ಸಾಮಗ್ರಿಗಳ ಕಿಟ್‌ಗಳು, ಮುಂತಾದ ಕಿಟ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್‌ಗಳು,ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಹೆಸರಿನಲ್ಲಿ ಬೆವರು ಸುರಿಸಿ ದುಡಿದ ಸೆಸ್ ಹಣವನ್ನು ಮನಸೋಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧವಾಗಿ ಮಂಡಳಿಯು ದುಂದುವೆಚ್ಚ ಮಾಡುತ್ತಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್‌.ಟಿ.ಯು) ಕೊಪ್ಪಳ ಜಿಲ್ಲಾ ಘಟಕದ ನೇತೃತ್ವದ ಕಟ್ಟಡ ಕಾರ್ಮಿಕರ ಸಂಘಟನೆ ಒತ್ತಾಯಿಸುತ್ತದೆ.   

      ಕೆಲ ವರ್ಷಗಳಿಂದ ಬಾಕಿ ಇರುವ ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ನ್ಯಾಯಾಲಯದ ಆಶಯದಂತೆ ತಕ್ಷಣವೇ ಬಿಡುಗಡೆ ಮಾಡಬೇಕು,   ಈಗಾಗಲೇ ಖಾಸಗಿಯವರಿಂದ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿ ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು. ಈಗಾಗಲೇ 60 ವರ್ಷ ತುಂಬಿರುವ ಫಲಾನುಭವಿಗಳಿಗೆ ಪಿಂಚಣಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಮಾಡಬಾರದು, 60 ವರ್ಷ ತುಂಬಿದ ನಂತರ ಯಾವಾಗಬೇಕಾದರೂ ಅರ್ಜಿ ಸಲ್ಲಿಸಿದರೂ ಹಿಂಬಾಕಿ ಪಿಂಚಣಿ ನೀಡಬೇಕು. ಪಿಂಚಣಿಯನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಬೇಕು.5 ವರ್ಷಗಳ ಸೇವೆ ಪೂರೈಸಿದ ಫಲಾನುಭವಿಗೆ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ಸಹಾಯಧನ ನೀಡಬೇಕು.  

ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕಟ್ಟಡ ಕಾರ್ಮಿಕರ ನಕಲಿ ಕಾರ್ಡ್‌ ಗಳನ್ನು ತಕ್ಷಣ ರದ್ದುಪಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಅಭಯಾನ ನಡೆಸಬೇಕು, ಕಟ್ಟಡ ಕಾರ್ಮಿಕರು ಮಂಡಳಿಯ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಅರ್ಜಿ ಸಲ್ಲಿಸಲಾಗದ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.1996ರ ಮೂಲ ಕಾಯ್ದೆ ಪ್ರಕಾರ ಸೆಸ್‌ನ್ನು ಶೇ 1 ರಿಂದ ಶೇ.2ಕ್ಕೆ ಹೆಚ್ಚಿಸಬೇಕು. ಈಗಿರುವ ಸೆಸ್ ಸಂಗ್ರಹ ಮಾನದಂಡವನ್ನು ಇನ್ನು ಬಿಗಿಗೊಳಿಸಬೇಕು.ಖಾಸಗಿ ಸೆಸ್ ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು.ಮದುವೆ ಸಹಾಯಧನ 60 ಸಾವಿರದಿಂದ ಎರಡು ಲಕ್ಷಕ್ಕೆ ಹೆಚ್ಚಿಸಬೇಕು.ಕರ್ನಾಟಕ ವೈದ್ಯಕೀಯ ಹಾಜರಾತಿ ನಿಯಮಗಳ ಅನ್ವಯ ನಿಗದಿತ ಆಸ್ಪತ್ರೆಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಮುಂಗಡ ಹಣ ಪಾವತಿಸಲು ಒತ್ತಾಯಿಸದೆ ಒಳ ರೋಗಿಯಾಗಿ ಸೇರಿಸಿಕೊಳ್ಳುವಂತೆ ಆದೇಶಿಸಿ ಮತ್ತು ಪೂರ್ಣ ಪ್ರಮಾಣದ ಚಿಕಿತ್ಸಾ ವೆಚ್ಚವನ್ನು ಮಂಡಳಿ ಪಾವತಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರು 60 ವರ್ಷದೊಳಗೆ ತೀರಿಕೊಂಡರೆ ಅವರ ಹೆಂಡತಿಗೆ ಪಿಂಚಣಿ ಸೌಲಭ್ಯ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.   

  ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್‌.ಟಿ.ಯು) ರಾಜ್ಯ ನಾಯಕರಾದ ಅಬ್ದುಲ್ ಗಫಾರ್ ಪೀರಝಾದೆ. ಹಿರಿಯ ಹೋರಾಟಗಾರರಾದ ಜೆ. ಭಾರದ್ವಾಜ್‌.ಜಿಲ್ಲಾ ಘಟಕದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್‌. ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ, ಭಾಗ್ಯನಗರದ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಗಾಳೆಪ್ಪ ಮುಂಗೋಲಿ.ದೇವಪ್ಪ ಕಟ್ಟಿಮನಿ. ಗಂಗಾವತಿ ಅಧ್ಯಕ್ಷ ಚಾಂದ್ ಪಾಶಾ. ಉಪಾಧ್ಯಕ್ಷ ಹನುಮಂತ ಚೌಡಪ್ಪ. ಪ್ರಧಾನ ಕಾರ್ಯದರ್ಶಿ ಮಹೆಬೂಬ್ ಸಾಬ್ ಲಾಠಿ. ಇಬ್ರಾಹಿಮ್ ಮೇಸ್ತ್ರಿ.ಈರಮ್ಮ ಬಂಡಿ. ಗೌರಮ್ಮ.ಮಖಬೂಲ್ ರಾಯಚೂರು.ಶಿವಪ್ಪ ಹಡಪದ್‌.ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಝಾಕ್ ಪೇಂಟರ್‌. ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ. ಖಜಾಂಚಿ ಆಸೀಫ್ ಕಿಲ್ಲೆದಾರ್‌. ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಬಸವರಾಜ್ ಗೋಪಶಾನಿ. ದಾವಲ್ ಸಾಬ್ ಹಾವೇರಿ. ಹನುಮಂತ ಮುಗಳಿ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಮುದುಕಪ್ಪ ಹೊಸಮನಿ. ಸುಂಕಪ್ಪ ಮಿಸಿ. ಪ್ರಕಾಶ್ ದೇವರಮನಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.