ಕೊರಗುತ್ತಿರುವ ಕನ್ನಡ, ಸೊರಗುತ್ತಿರುವ ಸಾಹಿತ್ಯ, ಕಣ್ಮುಚ್ಚಿ ಕುಳಿತ ಸರ್ಕಾರ ಕನ್ನಡ ಅಭಿವೃದ್ಧಿಗೆ ಕಾಸು ಕೊಡದ ಸರ್ಕಾರ
A languishing Kannada, a languishing literature, a government that turns a blind eye, a government t
ಹಾರೂಗೇರಿ, 01 : ಕನ್ನಡವನ್ನು ಬೆಳೆಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದರೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘಟನೆಗಳಿಗೆ ಅನುದಾನದ ಪೂರೈಕೆಯನ್ನು ನಿಲ್ಲಿಸಿರುವುದರಿಂದ ರಾಜ್ಯದಲ್ಲಿ ಕನ್ನಡದ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದ್ದು, ಕನ್ನಡ ನಾಡಿನಲ್ಲಿ ಕನ್ನಡದ ಶಕ್ತಿ ಕುಂದುತ್ತಿರುವುದು ದುರ್ದೈವದ ಸಂಗತಿ.
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ವಹಿಸಿದ ಪಾತ್ರ ಬಹು ದೊಡ್ಡದು, ಕನ್ನಡ ಸಾಹಿತ್ಯ ಇವತ್ತು ಇಡೀ ದೇಶದಲ್ಲಿಯೇ ಮಾನ್ಯತೆಯನ್ನು ಪಡೆದುಕೊಳ್ಳುವ ಸಾಹಿತ್ಯವಾಗಿದ್ದರೂ, ಸಾಹಿತಿಗಳಿಗೆ, ಕಲಾವಿದರಿಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೊಡಬೇಕಾದ ಅನುದಾನವನ್ನು ಸರ್ಕಾರ ನಿಲ್ಲಿಸುತ್ತಿರುವುದರಿಂದ ಕರ್ನಾಟಕದಲ್ಲೇ ಕನ್ನಡ ಕೊರಗುತ್ತಿದ್ದು, ಸಾಹಿತ್ಯಾಸಕ್ತಿ ಸೊರಗುತ್ತಿದೆ.
ಅಧಿಕಾರ ದುರ್ಬಳಕೆ, ಹಣಕಾಸು ದುರುಪಯೋಗ ಕಸಾಪ ರಾಜ್ಯಾಧ್ಯಕ್ಷರ ಮೇಲಿನ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಆ ಕಾರಣಗಳಿಂದ ಕನ್ನಡ ಕೆಲಸಗಳಿಗೆ ಬಿಡುಗಡೆ ಮಾಡುವ ಅನುದಾನವನ್ನು ಸರ್ಕಾರ ತಡೆ ಹಿಡಿದಿದೆ ಎಂದು ನುಣುಚಿಕೊಳ್ಳುತ್ತಿದ್ದು, ಆದರೆ ಇಚೇಗೆ ಸರ್ಕಾರ ಪರ್ಯಾಯವಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಸಬೂಬು ಬಿಡಿ, ಅನುದಾನ ಕೊಡಿ ಎಂದು ಕನ್ನಡಾಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ರಾಜ್ಯಾದ್ಯಂತ ನಡೆಯುತ್ತಿರುವ ತಾಲೂಕು ಹಾಗೂ ಜಿಲ್ಲಾ ಸಮ್ಮೇಳನಗಳು ಕನ್ನಡಿಗರಷ್ಟೇ ಅಲ್ಲ, ನೆರೆ ರಾಜ್ಯಗಳ ಕನ್ನಡಿಗರಲ್ಲಿಯೂ ಕನ್ನಡ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿದೆ. ಕನ್ನಡ ಶಬ್ದಕೋಶ ಬೆಳೆಸುವುದರ ಜೊತೆಗೆ ಗೋಷ್ಠಿಗಳು, ಹಳಗನ್ನಡ, ಕವಿತೆ, ಹನಿಗವನ, ಸಾಹಿತ್ಯ, ಕಥೆ, ಕಾದಂಬರಿಗಳ ಕನ್ನಡ ಪುಸ್ತಕಗಳ ಬಿಡುಗಡೆ, ಬರವಣಿಗೆ, ಕಾಲಗತದಲ್ಲಿ ಹುದುಗಿ ಹೋಗಿರುವ ಕನ್ನಡ ಸಾಹಿತ್ಯ ಮತ್ತು ಚರಿತ್ರೆಯನ್ನು ಜನಮಾನಸದಲ್ಲಿ ಮುಟ್ಟಿಸುವ ಕಾರ್ಯ ಮಾಡುವಲ್ಲಿ ಸಮ್ಮೇಳನಗಳು ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲದೇ ಹೊಸಹೊಸ ಸಾಹಿತ್ಯ ಸಿಗುತ್ತದೆ ಮತ್ತು ಸಾಹಿತಿಗಳು, ಕವಿಗಳು ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತಾರೆ.
ಕಳೆದ 10 ವರ್ಷಗಳಿಂದ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿತ್ತು, ಜಿಲ್ಲಾ ಕಸಾಪ ಸಮ್ಮೇಳನಕ್ಕೆ 5 ಲಕ್ಷರೂ. ನಿರ್ವಹಣೆಗೆ 2 ಕಂತುಗಳಲ್ಲಿ 50 ಸಾವಿರ ಮತ್ತು ತಾಲೂಕು ಸಮ್ಮೇಳನಗಳಿಗೆ ಲಕ್ಷರೂ. ನಿರ್ವಹಣೆಗೆ 15 ಸಾವಿರ ಕಾಸು ಕೊಡುತ್ತಿತ್ತು. ಜೊತೆಗೆ ಸ್ಥಳೀಯರ ಸಹಕಾರದಿಂದ ವಂತಿಗೆಯನ್ನು ಪಡೆದುಕೊಂಡು ಬಹಳ ವಿಜೃಂಭನೆಯಿಂದ, ಓಚಿತ್ಯಪೂರ್ಣ, ವೈಶಿಷ್ಠ್ಯವಾಗಿ ಸಮ್ಮೇಳನಗಳನ್ನು ಮಾಡುತ್ತಿದ್ದರು. ಅನುದಾನ ನಿಲ್ಲಿಸಿರುವುದರಿಂದ ಸಾಹಿತ್ಯ ಸಮ್ಮೇಳನಗಳೇ ನಿಂತು ಹೋಗುವ ಹಂತಕ್ಕೆ ಬಂದಿವೆ.
ಕಳೆದೆರಡು ವರ್ಷಗಳಲ್ಲಿ ಸ್ಥಳೀಯರು, ಕನ್ನಡ ಪ್ರೇಮಿಗಳು, ಕನ್ನಡಪರ ಸಂಘಟನೆಗಳು, ಆಸಕ್ತರು ಸ್ವಂತ ಖರ್ಚಿನಿಂದ, ಸಾರ್ವಜನಿಕರಿಂದ ವಂತಿಗೆ ಸಂಗ್ರಹದ ಮೂಲಕ ಕನ್ನಡದ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ಯಾವುದೇ ಸಹಾಯ, ಅನುದಾನ ಹಾಗೂ ಪ್ರೇರಣೆ ಇಲ್ಲದಿರುವುದರಿಂದ ಇವತ್ತು ಆ ಚಟುವಟಿಕೆಗಳಿಂದ ಹಿಂದೆ ಸರಿಯುವ ಸನ್ನಿವೇಶ ಎದುರಾಗುತ್ತಿದೆ. ಇದೆಂತ ದುರ್ದೈವದ ಸಂಗತಿ.
ಈ ಹಿಂದಿನ ಸರ್ಕಾರ ಕೊಡುತ್ತ ಬಂದಿರುವ ಅನುದಾನವನ್ನು ಈ ಸರ್ಕಾರ ಮುಂದುವರೆಸಬೇಕು. ಕನ್ನಡ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಕನ್ನಡದ ಹೆಸರಿನಲ್ಲಿ, ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ಪಕ್ಷಗಳು ಕನ್ನಡವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಕನ್ನಡವನ್ನು ಉಳಿಸಿ, ಬೆಳೆಸುವ ಹಂಬಲ ಜನಸಾಮಾನ್ಯರಿಗಿಂತ ಜನಪ್ರತಿನಿಧಿಗಳಿಗೆ ಹೆಚ್ಚಿರಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಉಳಿಗಾಲವಿಲ್ಲ. ಕನ್ನಡ ಕೆಲಸಗಳಿಗೆ ಹಿಂಜರಿಕೆ ಮನೋಭಾವ ತಾಳದೇ ಮೊಟ್ಟ ಮೊದಲು ಗಡಿ ಪ್ರದೇಶದ ಕನ್ನಡ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಅದಕ್ಕಾಗಿ ಸರ್ಕಾರ ಶೀಘ್ರವಾಗಿ ಗಮನ ಹರಿಸಿ ಅನುದಾನ ನೀಡುವ ಮೂಲಕ ಕನ್ನಡ ಸಂಘಟನೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ.
* ಕನ್ನಡ ಚಟುವಟಿಕೆಗಳಿಗೆ ಸರ್ಕಾರ ಕಳೆದ ವರ್ಷ ಕಡಿಮೆ ಅನುದಾನ ನೀಡಿದ್ದು, ಅದನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ವರ್ಷ ಸಿಬ್ಬಂದಿಗಳ ಸಂಬಳಕ್ಕಾಗಿ ಒಂದು ಕೋಟಿರೂ. ಬಿಟ್ಟರೆ, ಸಮ್ಮೇಳನ ಹಾಗೂ ಕನ್ನಡ ಚಟುವಟಿಕೆಗಳಿಗಾಗಿ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. - ಪಾರ್ಶ್ವನಾಥ ಹಿ ವ್ಯವಸ್ಥಾಪಕರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು)
* ರಾಜ್ಯದ ಗಡಿಭಾಗ ಬೆಳಗಾವಿಯಲ್ಲಿ ವಿಭಜನೆ, ಕರಾಳದಿನ ಸೇರಿದಂತೆ ಇನ್ನೀತರ ಕನ್ನಡ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು, ಕನಿಷ್ಠ ಗಡಿ ಜಿಲ್ಲೆಗಳಿಗಾದರೂ ಸರ್ಕಾರ ಅನುದಾನ ನೀಡಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕು. ಗಡಿ ಗಟ್ಟಿಯಾದರೆ ಮಾತ್ರ ಕನ್ನಡ ಗಟ್ಟಿಯಾಗಲು ಸಾಧ್ಯವಿದೆ. ಸಮ್ಮೇಳನಗಳನ್ನು ಆಯೋಜಿಸುವುದರ ಮೂಲಕವಾದರೂ ಕನ್ನಡವನ್ನು ಬೆಳೆಸಬೇಕಿದೆ. ಗಡಿಭಾಗದ ಸಮ್ಮೇಳನಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಹಿ ಮಂಗಲಾ ಮೆಟಗುಡ್ಡ ಹಿ ಕಸಾಪ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷೆ )
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 