ಅಕ್ಷರ ಕಲಿಸಿದ ಉಪನ್ಯಾಸಕರಿಗೆ ಹೃದಯಸ್ಪರ್ಶಿ ಗುರು ವಂದನೆ
A heartfelt tribute to the lecturers who taught the alphabet
ಹೂವಿನ ಹಡಗಲಿ 09: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಅಕ್ಷರ ಕಲಿಸಿದ ಉಪನ್ಯಾಸಕರಿಗೆ ಹೃದಯಸ್ಪರ್ಶಿ ಗುರು ವಂದನೆ ಹಾಗೂ ಗೆಳೆಯರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಜೆ. ವೆಂಕಟೇಶ್ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗುಡಗೂರು ಜಯಣ್ಣ, ಕಾರ್ಯಕ್ರಮದ ಅಧ್ಯಕ್ಷ ಜೆ. ವೆಂಕಟೇಶ್, ಪ್ರಾಚಾರ್ಯ ಸಣ್ಣನೀಲಪ್ಪ ಹಾಗೂ ರಾಜೇಶ್ ವಿ.ಕೆ., ಶಿವಪ್ಪ, ಪ್ರಶಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಸಣ್ಣನೀಲಪ್ಪ ಮಾತನಾಡಿ, ಈ ಬಾರಿ ಹೊಳಲ್ಕೆರೆ ಕಾಲೇಜು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಇದೇ ರೀತಿಯ ಉತ್ತಮ ಫಲಿತಾಂಶವನ್ನು ಮುಂದಿನ ವರ್ಷಗಳಲ್ಲಿಯೂ ನೀರೀಕ್ಷಿಸಲಾಗಿದೆ ಎಂದರು.
“ಗುರುವಂದನೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಅಕ್ಷರ ಕಲಿಸಿದ ಉಪನ್ಯಾಸಕರಿಗೆ ವಿದ್ಯಾರ್ಥಿಗಳು ತೋರುವ ಪ್ರೀತಿ ಮತ್ತು ಗೌರವ ಅವರ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗುತ್ತದೆ,” ಎಂದು ಹೇಳಿದರು.
ಉಪನ್ಯಾಸಕ ರಾಜೇಶ್ ವಿ.ಕೆ. ಮಾತನಾಡಿ, ಕಾಲೇಜಿನ ಪರಿಸರ, ವಿದ್ಯಾರ್ಥಿಗಳ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಕಾಲೇಜು ಮಾದರಿ ಕಾಲೇಜಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸಾಧನೆಯೇ ಉಪನ್ಯಾಸಕರಿಗೆ ಹೂಮಾಲೆ ಇದ್ದಂತೆ. ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ಉಪನ್ಯಾಸಕರಾದ ಪ್ರಶಾಂತ್, ಶಿವಪ್ಪ, ಬಸವರಾಜ ಕೊಂಪಿ, ಸಿದ್ದೇಶ, ಕರಿಬಸಪ್ಪ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜೆ. ವೆಂಕಟೇಶ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದರು.
ವಿದ್ಯಾರ್ಥಿಗಳಾದ ಸಂತೋಷ ಗುಡಗೂರು, ನಂದೀಶ್, ವನಿತಾ, ನಂದಾ, ಹಂಚಿನಾಳ ಗೌರಮ್ಮ, ಹಾರದ ನಂದಿನಿ ಹಾಗೂ ನಿವೇದಿತಾ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 