ವೀರಗಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಸಜ್ಜಾದ ಭಕ್ತ ಸಮೂಹ
A group of devotees ready for the Sri Veerabhadreshwara Rathtsava at Veeragalli
ಶಿಗ್ಗಾವಿ 01 : ಪಟ್ಟಣದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.?ಧಾರ್ಮಿಕ ವಿಧಿವಿಧಾನಗಳು:ಮಾರ್ಚ್ 27 ರಂದು ಈಗಾಗಲೇ 'ಕಳಸಾರೋಹಣ' ಹಾಗೂ ಗ್ರಾಮದೇವಿಗೆ 'ಉಡಿ ತುಂಬುವ' ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ.
ಜಾತ್ರೆಯ ಮುಂದಿನ ಪ್ರಮುಖ ವಿಧಿವಿಧಾನಗಳು ಈ ಕೆಳಗಿನಂತಿವೆ: ಏಪ್ರಿಲ್ 02 ರಂದು ರಥೋತ್ಸವದ ದಿನ: ದವನದ ಹುಣ್ಣಿಮೆಯ ಅಂಗವಾಗಿ ಮುಂಜಾನೆ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪೂಜೆ ಹಾಗೂ ಮಹಾಮಂಗಳಾರತಿ ಜರುಗಲಿದೆ. ಮಧ್ಯಾಹ್ನ 1:00 ಗಂಟೆಯಿಂದ ಮಹಾಪ್ರಸಾದ ವ್ಯವಸ್ಥೆ ಇರಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ 8ಗಂಟೆಗೆ ಗುಗ್ಗಳ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ 4:00 ಗಂಟೆಗೆ: ಭಕ್ತರ ಜಯಘೋಷಗಳ ನಡುವೆ ಶ್ರೀ ವೀರಭದ್ರೇಶ್ವರ ರಥೋತ್ಸವ ಚಾಲನೆಗೊಳ್ಳಲಿದೆ. 5ಗಂಟೆಗೆ ದೀವಟಗೆ ಸೇವೆ ನೆರವೇರಲಿದೆ. ?ಏಪ್ರಿಲ್ 03 ರಂದು ಸಾಯಂಕಾಲ 4:00 ಗಂಟೆಗೆ ಸಾಂಪ್ರದಾಯಿಕ ಕಡುಬಿನ ಕಾಳಗ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.ರಥೋತ್ಸವದ ?ದಿವ್ಯ ಸಾನಿಧ್ಯ:ಈ ಮಹೋತ್ಸವವು ಗಂಜೀಗಟ್ಟಿ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶಿಗ್ಗಾವಿ ಸಂಗನಬಸವ ಮಹಾಸ್ವಾಮಿಗಳು ,
ಗೋಟಗೋಡಿಕೊಪ್ಪ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹಾಗೂ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಕ್ಷೇತ್ರ ಹಿರೇಮನವಳ್ಳಿ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ. ವೇ.ಮೂ. ಮಲ್ಲಿಕಾರ್ಜುನ ಸ್ವಾಮಿಗಳು ಹಿರೇಮಠ ಇವರಿಂದ ವೈದಿಕ ಸೇವೆಗಳು ನೆರವೇರಲಿವೆ.ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಹಳ್ಳಿಯ ಸದ್ಭಕ್ತರು, ರಾಜಕೀಯ ಮುಖಂಡರು ಹಾಗೂ ಗಣ್ಯಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ವೀರಗಲ್ಲಿಯ ಸದ್ಭಕ್ತ ಮಂಡಳಿ ಕೋರಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 