ಆಯುರ್ವೇದ ರಥಯಾತ್ರೆಗೆ ಭವ್ಯವಾದ ಸ್ವಾಗತ

ಆಯುರ್ವೇದ ರಥಯಾತ್ರೆಗೆ ಭವ್ಯವಾದ ಸ್ವಾಗತ A grand welcome to the Ayurvedic Rath Yatra

ಚಿಕ್ಕೋಡಿ 02: ಆಯುರ್ವೇದ ರಥ ಯಾತ್ರೆಯು 2ನೇ ವಿಶ್ವ ಆರೋಗ್ಯ ಸಮ್ಮೇಳನದ ಅಂಗವಾಗಿ ಬೆಂಗಳೂರಿನಲ್ಲಿ ಪ್ರಾರಂಭವಾಗಿ ದಕ್ಷಿಣ ಭಾರತದ 7 ರಾಜ್ಯಗಳಲ್ಲಿ ಸಂಚರಿಸಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ಕಾಲೇಜಿನ ಪ್ರಾರ್ಚಾಯರಾದ ಡಾ.ಕಿರಣ ಮುತ್ನಾಳಿ ಹೇಳಿದರು.  

ಅವರು ಇಂದು ಬೆಂಗಳೂರಿನಲ್ಲಿ ನಡೆಯುವ 2ನೇ ವಿಶ್ವ ಆಯುರ್ವೇದ ಸಮ್ಮೇಳನದ ಹಿನ್ನೆಲೆ ಪಟ್ಟಣಕ್ಕೆ ಮಂಗಳವಾರ ಸಂಜೆ ಆಗಮಿಸಿದ ಆಯುರ್ವೇದ ರಥಯಾತ್ರೆಗೆ ಚಿಕ್ಕೋಡಿಯ  ಕೆ ಎಲ್ ಇ ಆಯುರ್ವೇದಿಕ್ ಕಾಲೇಜಿನ ಬಳಿ ಭವ್ಯವಾಗಿ ಸ್ವಾಗತಿಸಿ ಮಾತನಾಡುತ್ತಾ ಡಿ. 25ರಿಂದ 28ರ ವರೆಗೆ 2ನೇ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ 60 ವಿಶೇಷತೆಗಳು, 6000 ಪ್ರತಿನಿಧಿಗಳು ಹಾಗೂ ಲಕ್ಷಾಂತರ ಸಾರ್ವಜನಿಕ ಭಾಗವಹಿಸಲಿದ್ದಾರೆ ವಿವಿಧ ರೋಗಗಳ ಚಿಕಿತ್ಸೆ ಅನುಕೂಲತೆ ಕುರಿತ ಅಭಿಪ್ರಾಯ ಮಂಡನೆಯಾಗಲಿದೆ. ಅಲ್ಲದೆ ಸಂವಾದ, ಗೋಷ್ಠಿ ಹಾಗೂ ತಾಂತ್ರಿಕ ತರಬೇತಿ ಕಾರ್ಯಗಾರ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.  

ಆಯುರ್ವೇದ ರಥ ಯಾತ್ರೆಯ ಸಂಯೋಜಕರಾದ ಡಾ. ಚಂದು ಮೇಟಿ ಮಾತನಾಡುತ್ತಾ 23 ವರ್ಷದ ಬಳಿಕ ನಡೆಯುತ್ತಿರುವ ದ್ವಿತೀಯ ಸಮ್ಮೇಳನದಲ್ಲಿ ಅಮೆರಿಕ, ಜಪಾನ್ ಸೇರಿ ವಿಶ್ವದ 50ಕ್ಕೂ ಅಧಿಕ ಉಪನ್ಯಾಸಕರು ಹಾಗೂ 6 ಸಾವಿರಕ್ಕೂ ಅಧಿಕ ಆಯುರ್ವೇದ ವೈದ್ಯರು, ಉಪನ್ಯಾಸಕರು ಹಾಗೂ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಇದಕ್ಕೂ ಮೊದಲು ಕಾಲೇಜು ಎದುರು ಆಯುರ್ವೇದ ರಥಯಾತ್ರೆ ಆಗಮಿಸಿದಾಗ ಕಾಲೇಜಿನ ವಿದ್ಯಾರ್ಥಿಗಳು ಜೈಕಾರ ಹಾಕುವ ಮೂಲಕ ಸ್ವಾಗತಿಸಿದರು. 

ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದರು ಕಾರ್ಯಕ್ರಮವನ್ನು ಡಾ. ಸೂರಜ ಕುಂಬಾರ ಸ್ವಾಗತಿಸಿದರು, ಡಾ. ಸುಧೀಂದ್ರ ಹೊನವಾಡ ವಂದಿಸಿದರು.