ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ
A grand welcome for a retired soldier
ಇಂಡಿ 01: ತಮ್ಮ ಜೀವನದ ಅಮೂಲ್ಯ 24 ವರ್ಷಗಳ ಕಾಲ ತಾಯಿ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರೂರಿಗೆ ಮರಳುತ್ತಿರುವ ಇಂಡಿ ತಾಲೂಕಿನ ಲೋಣಿ ಕೆ.ಡಿ ಗ್ರಾಮದ ಸತೀಶ ಗುರವ ಅವರನ್ನು ಇಂಡಿ ನಗರದ ಸಾರ್ವಜನಿಕರು ಬಸವೇಶ್ವರ ವೃತ್ತದಲ್ಲಿ ಬರಮಾಡಿಕೊಂಡು ಹೃದಯಸ್ಪರ್ಶಿಯಾಗಿ ಸತ್ಕರಿಸಿ ಗೌರವಿಸಿದರು.
ನಗರದಲ್ಲಿ ಸಂಭ್ರಮವೋ ಸಂಭ್ರಮ, ಅದ್ದೂರಿ ಮೆರವಣಿಗೆ, ಇದು ಯಾವ ಸಿನಿಮಾ ಸ್ಟಾರ್‌ಗೆ ಸಿಕ್ಕ ಸ್ವಾಗತ ಅಲ್ಲ, ಯುದ್ಧಭೂಮಿಯಲ್ಲಿ 24 ವರ್ಷದಿಂದ ಸೇವೆ ಸಲ್ಲಿಸಿದ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಸಿಕ್ಕಿತು. ಯೋಧನಾಗಿ ಕಳೆದ 24 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡಿ ತಮ್ಮ ಸ್ವಗ್ರಾಮಕ್ಕೆ ಬಂದಾಗ ಸ್ಥಳೀಯರು ಭವ್ಯ ಸ್ವಾಗತ ಕೋರಿ ವೀರ ಯೋಧನನ್ನು ಬರಮಾಡಿಕೊಂಡರು.ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ವಿಶ್ವಗುರು ಬಸವಣ್ಣನವರ ವೃತ್ತದಲ್ಲಿ ಆಗಮಿಸಿದ ಯೋಧನಿಗೆ ಹೂ ಮಾಲೆ ಹಾಕಿ ಸ್ವಾಗತ ಕೋರಿದರು.
ಬಾಳು ಮುಳಜಿ ಶಿರಶ್ಯಾಡ, ಧನರಾಜ ಮುಜಗೂಂಡ, ರಾಮಸಿಂಗ ಕನ್ನೊಳ್ಳಿ, ರವಿಗೌಡ ಪಾಟೀಲ, ಭೀಮನಗೌಡ ಪಾಟೀಲ (ತಡವಲಗಾ), ಸಿದ್ದಪ್ಪ ಗುನ್ನಾಪೂರ, ಆನಂದ ಕಾಂಬಳೆ, ಜಗದೀಶ ಬಗಲಿ, ವಿಲಾಸ ಉಮರ್ಜಿ, ಈರಣ್ಣ ಮುಜಗೂಂಡ, ಆನಂದ ಗಣಾಚಾರಿ, ಸಂಗಮೇಶ ಗುರವ ಸೇರಿದಂತೆ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 