ಗಾಂಧಿ-150 ಸ್ತಬ್ದಚಿತ್ರಕ್ಕೆ ಬಾಗಲಕೋಟೆಯಲ್ಲಿ ಅದ್ದೂರಿ ಸ್ವಾಗತ

ಯಾಂತ್ರಿಕ ಸಂಸ್ಕೃತಿಯಿಂದ ಮಾನವ ಪ್ರಕೃತಿಯಿಂದ ದೂರ

ಬಾಗಲಕೋಟೆ 17ಕೇವಲ ಶುಷ್ಕ ಬುದ್ದಿವಂತಿಕೆ ದುಡಿಮೆಗಿಂತ ದೈಹಿಕ ದುಡಿಮೆ ಹೆಚ್ಚು ಆರೋಗ್ಯ ನೀಡುತ್ತದೆ. ಆದ್ದರಿಂದ ಕೈಮಗ್ಗ ಮತ್ತು ಕೃಷಿ ಗಾಂಧೀಜಿಗೆ ಆಪ್ತವಾಗಿದ್ದವು ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು

       ಉದ್ಯಾನಗಿರಿಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿಂದು ಗಾಂಧಿ-150 ಸ್ತಬ್ದಚಿತ್ರದಲ್ಲಿರುವ ಗಾಂಧಿ ಪ್ರತಿಮೆಗೆ ಹೂ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಯಾಂತ್ರಿಕ ಸಂಸ್ಕೃತಿಯಿಂದ ಮನುಷ್ಯ ಪ್ರಕೃತಿಯಿಂದ ತನ್ನ ತನದಿಂದ ದೂರ ಆಗುತ್ತಿದ್ದಾನೆ. ಕೈಮಗ್ಗ ಮತ್ತು ಕೃಷಿಗೆ ಹೆಚ್ಚು ಆಪ್ತರಾಗಿದ್ದು, ದೈಹಿಕ ಶ್ರಮದ ಕೆಲಸಗಳ ಬಗ್ಗೆ ಹೆಚ್ಚಿನ ಮಮತೆಯನ್ನು ಗಾಂಧಿ ಹೊಂದಿದ್ದರು. ದೈಹಿಕ ದುಡಿಮೆಗೆ ಮೊದಲನೆ ಸ್ಥಾನಕೊಟ್ಟು ಯಾಂತ್ರಿಕ ಬದುಕಿಗೆ ಎರಡನೇ ಸ್ಥಾನ ನೀಡಬೇಕೆಂದು ತಿಳಿಸಿದ್ದಾರೆ ಎಂದರು.

       ನಮ್ಮ ದೇಶದ ಸ್ವಾತಂತ್ರ್ಯವನ್ನು ಸತ್ಯ ಮತ್ತು ಅಹಿಂಸೆಯ ಮಾರ್ಗದವನ್ನು ಪ್ರತಿಪಾದಿಸಿ ಅದನ್ನು ಅನುಸರಿಸಿದವರು. ಸತ್ಯದ ಹಾದಿಯನ್ನು ಹಿಡಿದು ನುಡಿದಂತೆ ನಡೆಯುತ್ತಿದ್ದರು. ಅವರೊಬ್ಬ ಜನನಾಯಕ ಎನ್ನುವದಕ್ಕಿಂತ ಅವರೊಬ್ಬ ರಾಜಕೀಯ ಸಂತರಾಗಿದ್ದರು. ಗಾಂಧೀಜಿಯವರು ಕೆಲಸದಲ್ಲಿ, ಜಾತಿಯಲ್ಲಿ ಯಾವುದು ಮೇಲು-ಕೀಳು ಎನ್ನುತ್ತಿರಲಿಲ್ಲ. ಅವರ ಅವರ ಜೀವನದ ನಿಲುವುಗಳು, ದ್ಯೆಯಗಳು, ತಾರತಮ್ಯ, ವರ್ಣಬೇಧ ಇದರ ಬಗ್ಗೆ ಅವರ ಮನಸ್ಸಿನಲ್ಲಿ ಗಣಕೀಕೃತವಾಗಲಿಕ್ಕೆ ಸಾಧ್ಯವಾಗಯಿತು. ಇವರೊಬ್ಬ ತಾಯಿ ಹೃದಯದ ವ್ಯಕ್ತಿ ಮತ್ತು ರಾಜಕೀಯ ಸಂತನಾಗಲಿಕ್ಕೆ ಮುಖ್ಯ ಕಾರಣ ಅವರ ತಾಯಿಯಾಗಿದ್ದರು. ಸತ್ಯಾಗ್ರಹವನ್ನು ಕಲಿಸಿಕೊಟ್ಟವರೆ ಅವರ ತಾಯಿ ಎಂದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಮಾತನಾಡಿ ಗಾಂಧಿಜಿಯವರು ಮಂದಗಾಮಿ ಹಾಗೂ ಉಗ್ರಗಾಮಿ ಸಿದ್ದಾಂತಗಳನ್ನು ಬಳಸಿಕೊಂಡು ಸತ್ಯಾಗ್ರಹ ಎಂಬ ಅಸ್ತ್ರವನ್ನು ಜಗತ್ತಿಗೆ ತೋರಿಕೊಟ್ಟವರು. ತಮ್ಮನ್ನು ಮುಟ್ಟದೇ ಇರುವ ಹಾಗೆ ಮಾಡಿದ್ದು ಸತ್ಯಾಗ್ರವಾಗಿತ್ತು. ಬೆಳಗಾವಿ ಅಧಿವೇಶನದ ಸಮಯದಲ್ಲಿ ಗಾಂಧಿಜೀಯವರು ಜಿಲ್ಲೆಗೆ ಆಗಮಿಸಿದ್ದರು ಎಂದರು.

      ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಮಾತನಾಡಿ ಗಾಂಧೀಜಿಯವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದರು. ಭೂಮಿ, ನೀರು, ಆಕಾಶ, ಗಾಳಿ ಹಾಗೂ ಬೆಳಕು ಪಂಚಭೂತಗಳನ್ನು ಗಾಂಧೀಜಿಯವರು ದೇವರ ಕೊಡುಗೆಯೆಂದು ನಂಬಿದ್ದರು. ಭಾರತ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು. ಆಹಾರಕ್ಕಾಗಿ ಬೇರೆ ದೇಶದವರ ಕೈ ಒಡ್ಡಬಾರದೆಂಬ ದ್ಯೆಯ ಗಾಧೀಜಿಯವರದಾಗಿತ್ತು. ರೈತರನಿಗೆ ಉಳಿಮೆಗಾಗಿ ಭೂಮಿ ಇರಬೇಕು. ಕುಟುಂಬದವರು ಕೃಷಿ ಚಟುವಟಿಕೆಗಳಲ್ಲಿ ಕೈ ಜೋಡಿಸಬೇಕು. ಕೃಷಿಯಿಂದ ರೈತನಿಗೆ ಆದಾಯ ಮತ್ತು ಪ್ರತಿಷ್ಠೆ ಬರಬೇಕು ಎಂದು ದ್ಯೆಯ ಗಾಂಧೀಜಿಯವರದಾಗಿತ್ತು ಎಂದರು.

      ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿವಿಯ ಅಧಿಕಾರಿಗಳಾದ ಡಾ.ವೈಕೆ.ಕೋಟಿಕಲ್, ಡಾ.ಎನ್.ಬಸವರಾಜ, ಡಾ.ಆರ್.ಸಿ.ಜಗದೀಶ, ಡಾ.ಎಚ್.ಬಿ.ಪಾಟೀಲ, ಡಾ.ಛಾಯಾ ಪಾಟೀಲ, ಡಾ.ಡಿ.ಆರ್.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕಿ ಎಂ.ಆರ್.ಕಾಮಾಕ್ಷಿ, ಕೃಷಿ ಇಲಾಖೆಯ ಉಪನಿದರ್ೇಶಕ ಕೊಂಗವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

      ಪ್ರಾರಂಭದಲ್ಲಿ ತೋವಿವಿಯ ಮುಖ್ಯದ್ವಾರದಲ್ಲಿ ಗಾಂಧೀ ಸ್ತಬ್ದಚಿತ್ರಕ್ಕೆ ವಿವಿಧ ಜಾನಪದ ಕಲಾತಂಡ ಹಾಗೂ ಮಹಿಳೆಯರು ಕುಂಬ ಹೊತ್ತು ಆರತಿ ಬೆಳಗುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆಯ ಮೂಲಕ ತೋವಿವಿಯ ಮುಖ್ಯಕಟ್ಟದ ಆವರಣಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ತೋವಿವಿಯ ಉಪನ್ಯಾಸಕರು, ವಿದ್ಯಾಥರ್ಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಪಾಲ್ಗೊಂಡಿದ್ದರು.

     ನಂತರ ಸ್ತಬ್ದಚಿತ್ರದವು ಕಾಳಿದಾಸ ಕಾಲೇಜು ಮಾರ್ಗವಾಗಿ ವಿದ್ಯಾಗಿರಿ ಸರ್ಕಲ್ ಮೂಲಕ ನಗರದ ಬವಸೇಶ್ವರ ವೃತ್ತಕ್ಕೆ ಆಗಮಿಸಿದಾಗ ನಗರಸಭೆಯ ಅಧಿಕಾರಿಗಳು ಹಾಗೂ ಪೌರಕಾಮರ್ಿಕರು ಗಾಂಧಿ ಪ್ರತಿಮೆಗೆ ಪುಷ್ಪ ಅಪರ್ಿಸುವ ಮೂಲಕ ಸ್ವಾಗತಿಸಿ ಬೀಳ್ಕೊಡಲಾಯಿತು. ನಂತರ ಸ್ತಬ್ದಚಿತ್ರ ಹುನಗುಂದಕ್ಕೆ ಸಂಚರಿಸುತು.