ಆ.೨೬ರಂದು ದ್ಯಾಮವ್ವಾ-ದುರ್ಗವ್ವ ದೇವಿಯರ ಅದ್ದೂರಿ ಮೆರವಣಿಗೆ
A grand procession of Dyamavva-Durgavva Devi on August 26
ಗದಗ, ಆ.೨೪: ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ದೂರಿ ಮೆರವಣಿಗೆ ಆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಿ ರಾತ್ರಿ ೮ ಗಂಟೆಯವರೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಕ್ಕಲಗೇರಿ ಓಣಿಯಿಂದ ಮೆರವಣಿಗೆ ಆರಂಭವಾಗಲಿದೆ. ತವರಿನ ಮನೆಯಿಂದ ಗಂಡನ ಮನೆಗೆ ಶ್ರೀ ದೇವಿಯರನ್ನು ಬೀಳ್ಕೊಡುವ ಈ ಅದ್ದೂರಿ ಕಾರ್ಯಕ್ರಮವು ಗಂಜಿ ಬಸವೇಶ್ವರ ಸರ್ಕಲ್, ರಾಚೋಟೇಶ್ವರ ದೇವಸ್ಥಾನ, ಹನುಮಾನ್ ಗರಡಿ, ಚೌಡಿ ಕೂಟ ಹಾಗೂ ಮಾಬುಸುಬಾನಿ ಕಟ್ಟಿಯ ಮಾರ್ಗವಾಗಿ ಕಿಲ್ಲಾ ಓಣಿಯವರೆಗೆ ಸಾಗಲಿದೆ ಎಂದು ವಿವರಿಸಿದರು.
ಆ.೨೬ರಂದು ಕಿರಾಣಿ ಅಂಗಡಿ, ಹೋಟೆಲ್, ಸಲೂನ್ ಸೇರಿದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ದಿನನಿತ್ಯದ ವ್ಯವಹಾರವನ್ನು ಬದಿಗಿಟ್ಟು ಮೆರವಣಿಗೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಮೆರವಣಿಗೆಯಲ್ಲಿ ದೇವಿಯರನ್ನು ಕಣ್ತುಂಬಿಕೊಳ್ಳಲು ಇದು ಸುವರ್ಣಾವಕಾಶವಾಗಿದ್ದು, ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಹಾಗೂ ಭಕ್ತಿಪೂರ್ವಕವಾಗಿ ಬಂದ್ ಆಚರಿಸಬೇಕು ಎಂದು ಮನವಿ ಮಾಡಿದರು.
೧೫ ಟನ್ ಬಂಡಾರದೊAದಿಗೆ ವಿಶೇಷ ಜಾತ್ರೆ
ಪ್ರಸಕ್ತ ವರ್ಷ ವಿಶೇಷವಾಗಿ ಬಂಡಾರದ ಜಾತ್ರೆ ನಡೆಯಲಿದ್ದು, ಭಕ್ತರು ನೀಡಿರುವ ಸುಮಾರು ೧೫ ಟನ್ ಬಂಡಾರದಿAದ ಸಂಭ್ರಮಿಸಲಾಗುವುದು. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಬೇಕು. ಅವಳಿ ನಗರದ ದೇವಸ್ಥಾನಗಳ ಅರ್ಚಕರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಅದ್ದೂರಿ ಮೆರವಣಿಗೆಯಲ್ಲಿ ೧೦೮ ಡೊಳ್ಳುಗಳು, ೫ರಿಂದ ೬ ಸಮ್ಮಾಳ ತಂಡಗಳು, ಆನೆ, ಒಂಟೆ, ಕುದುರೆ, ವಿವಿಧ ವೇಷಧಾರಿಗಳು ಹಾಗೂ ಚಂಡಿ ವಾದ್ಯಗಳೊಂದಿಗೆ ಹಲವು ಕಲಾ ತಂಡಗಳು ಭಾಗವಹಿಸಲಿವೆ.
ಆ.೨೮ರಂದು ಸಾಂಸ್ಕöÈತಿಕ ಕಾರ್ಯಕ್ರಮ
ಕಿಲ್ಲಾ ಓಣಿಯಲ್ಲಿ ಆ.೨೮ರಂದು ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಒಕ್ಕಲಗೇರಿ ಹಾಗೂ ಕಿಲ್ಲಾ ಓಣಿಯ ಬೀಗರೆಲ್ಲರೂ ಸಮಾಗಮಿಸಲಿದ್ದು, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಲಿದೆ.
ನಾಡಿನಾದ್ಯಂತದಿAದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ರಾಜು ಖಾನಪ್ಪನವರ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ್ ವಜ್ರಬಂಡಿ, ವೀರಣ್ಣ ಮೇಟಿ, ನವೀನ ನಾಲವಾಡ, ನರಸಪ್ಪ ತುಕ್ಕಪ್ಪನವರ, ಗಂಗಾಧರ ಮೇಲಗೇರಿ, ಹೇಮಂತ್ ಗಿಡ್ಡಹನುಮಣ್ಣನವರ, ನಾಗರಾಜ ಮೆಣಸಗಿ, ಕಿರಣ ಕಮತರ, ಮಹೇಶ್ ಪಡಗದ, ಬಸವರಾಜ ಮಡಿವಾಳರ, ಸುನಿಲ್ ಮಲ್ಲು, ಮಹಾಂತಶೆಟ್ಟರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 