ಕಂಪ್ಲಿಯಲ್ಲಿ ಅದ್ಧೂರಿಯಾಗಿ ಜರುಗಿದ ಪದಾಯಾತ್ರೆ
A grand march was held in Kampli.
ಲೋಕದರ್ಶನ ವರದಿ
ಕಂಪ್ಲಿಯಲ್ಲಿ ಅದ್ಧೂರಿಯಾಗಿ ಜರುಗಿದ ಪದಾಯಾತ್ರೆ
ಕಂಪ್ಲಿ 04: ಕಂಪ್ಲಿ ಪಟ್ಟಣದ ಮುನಿಸುವ್ರತ್ ಸ್ವಾಮಿಮಂದಿರಕ್ಕೆ ಕಳೆದ ನಾಲ್ಕೈದು ದಿನಗಳಿಂದ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದ ಜೈನ ಸಂತರು,ಸಾಧ್ವಿಗಳು, ಮುನಿಗಳು ಪಟ್ಟಣದ ಜೈನ ಮಂದಿರದಿಂದ ಆಂದ್ರ್ರದೇಶದ ಆದೋನಿ ಸಮೀಪದಲ್ಲಿರುವ ಪೆದ್ದ ತುಂಬಳಮ್ ನಲ್ಲಿರುವ ಪಾರ್ಶ್ವಮಣಿ ದೇವಸ್ಥಾನಕ್ಕೆ ಪಾದಯಾತ್ರೆಯನ್ನು ಆರಂಭಿಸಿದರು.
ಅಲಂಕೃತ ಸಾರೋಟಿನಿಲ್ಲಿ ಜೈನ ಸಮಾಜದ ವಿವಿದ ದೇವರ ಪ್ರತಿಮೆಗಳನ್ನು ಇಟ್ಟು,ಅಲಂಕಾರ ಮಾಡಿ ಮಂಗಳ ವಾದ್ಯ, ವಿವಿಧ ಜಾನಪದ ಕಲಾತಂಡ, ಜೈನ ಸಂಪ್ರದಾಯದ ಹಾಡು ನೃತ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆವಣಿಗೆ ನಡೆಯಿತು. ಜೈನ ಸಂತರು, ಹಾಗೂ ಜೈನ ಮುನಿಗಳು ಮಾತನಾಡಿ, ಒತ್ತಡ ರಹಿತ ಜೀವನ ಸಾಗಿಸಲು ದೇವರು, ಗುರುಗಳ ಮೇಲೆ ಭಕ್ತಿ,ನಂಬಿಕೆ ಅಗತ್ಯ ಪರೋಪಕಾರ ಜೀವನ ಸಾಗಿಸುವಂತೆ ಪ್ರೇರಿಪಿಸಲು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಜೈನ ಸಾಧ್ವಿಗಳು, ಸಂತರು, ಮುನಿಗಳು ಕಂಪ್ಲಿ ಪಟ್ಟಣದ ಶ್ರೀ ಮುನಿಸುವ್ರತ್ ಸ್ವಾಮಿ ಮಂದಿರದಿಂದ ಆಂದ್ರ್ರದೇಶದ ಅದೋನಿ ಸಮೀಪದಲ್ಲಿರುವ ಪೆದ್ದತುಂಬಳಮ್ ಪಾರ್ಶ್ವಮಣಿ ಜೈನ ಮಂದಿರಕ್ಕೆ ಪಾದಯಾತ್ರೆ ತೆರಳುತ್ತಿದ್ದೇವೆ. 9 ದಿನಗಳ ಪಾದಯಾತ್ರೆ ಯನ್ನು ಇಂದು ಆರಂಭಿಸಲಾಗಿದ್ದು,ಪ್ರತಿದಿನ 10 ರಿಂದ 12 ಕಿ.ಮೀ.ಪಾದಯಾತ್ರೆ ನಡೆಸುತ್ತೇವೆ ಎಂದರು. ಮೊದಲ ದಿನ ಪಾದಯಾತ್ರೆಯು ಯಶಸ್ವಿಯಾಗಿ ಕಂಪ್ಲಿ ತಾಲ್ಲೂಕಿನ ಗಡಿ ಗ್ರಾಮವಾದ ಇಟಗಿ ಹೊರವಲಯಕ್ಕೆ ತಲುಪಿದ್ದು, ಅಲ್ಲಿಯೇ ತಂಗಿದ್ದು, ವಿವಿಧ ಪ್ರವಚನ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಎರಡನೆ ದಿನದ ಪಾದಯಾತ್ರೆ ಸಿರಗುಪ್ಪ ತಾಲ್ಲೂಕಿನ ರುದ್ರಪಾದದಲ್ಲಿ ತಂಗಲಿದೆ ಎಂದು ಪಾದಯಾತ್ರೆಯ ಸಂಘಟಕರು ತಿಳಿಸಿದರು. ಪಾದಯಾತ್ರೆಯಲ್ಲಿ ಜೈನ ಗುರುಗಳಾದ ಮನಿಪ್ರಭಾ ಸಾಗರಶ್ರೀ, ಸುಲಫಚನಾಶ್ರೀ, ಮುಕ್ತಿಪ್ರಭಾ ಸಾಗರಜೀ, ಸುಲಕ್ಷಣಾ ಶ್ರೀಜಿ ಸೇರಿದಂತೆ 28ಕ್ಕೂ ಅಧಿಕ ಜೈನ ಸಂತರು, ಮುನಿಗಳು, ಸಾಧ್ವಿಗಳು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಜೈನ ಸಮಾಜದ ಅಧ್ಯಕ್ಷ ಜವೆರಿಲಾಲ್ ಬಾಗ್ರೇಚಾ, ಕಾರ್ಯದರ್ಶಿ ಪಾರಸ್ ಮಲ್ ಹುಂಡಿಯಾ, ಪ್ರಮುಖರಾದ ಶಾಂತಿಲಾಲ್ ಬಾಲಾರ್,ಶಾಂತಿ ಲಾಲ್ ಸಿಂಘ್ವಿ, ಫತೆಕುಮಾರ್ ಭಾಫ್ನಾ, ಕಲಾಪೂರ್ಣ ಯುವಕ ಮಂಡಲ, ಪದ್ಮಾವತಿ ಬಹು ಮಂಡಲ, ನೌಕಾರ್ ಮಾಲೀಕ ಮಂಡಲ್ ಸೇರಿದಂತೆ ಇತರರು ಇದ್ದರು.
ಜ.002: ಕಂಪ್ಲಿ ಪಟ್ಟಣದಲ್ಲಿ ಜೈನ ಸಂತರ, ಸಾಧ್ವಿಗಳ, ಮುನಿಗಳ ಪಾದಯಾತ್ರೆಯು ಅದ್ದೂರಿಯಿಂದ ಜರುಗಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 