ಜೂನ್ 20ರಂದು ಗದಗ ನಗರದಲ್ಲಿ ರಾಜ್ಯ ಮಟ್ಟದ ಸ್ಲಂ ಜನರ ಪ್ರತಿನಿಧಿಗಳ ಬೃಹತ್ ಸಮ್ಮೇಳನ-ಇಮ್ತಿಯಾಜ ಮಾನ್ವಿ

ಜೂನ್ 20ರಂದು ಗದಗ ನಗರದಲ್ಲಿ ರಾಜ್ಯ ಮಟ್ಟದ ಸ್ಲಂ ಜನರ ಪ್ರತಿನಿಧಿಗಳ ಬೃಹತ್ ಸಮ್ಮೇಳನ-ಇಮ್ತಿಯಾಜ ಮಾನ್ವಿ A grand conference of state-level slum people's representatives in Gadag city on June 20-Imtiaz Manv

ಲೋಕದರ್ಶನ ವರದಿ 

ಗದಗ-19, ಸ್ಲಂ ಜನಾಂದೋಲನ-ಕರ್ನಾಟಕದಿಂದ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯ ಸಹಕಾರದಲ್ಲಿ ಇದೇ ದಿನಾಂಕ: 20-06-2026 ರಂದು ಬೆಳ್ಳಿಗೆ-10 ಘಂಟೆಗೆ ರಾಜ್ಯ ಸ್ಲಂ ಜನರ ಪ್ರತಿನಿಧಿಗಳ ಸಮ್ಮೇಳನದ ರಾ​‍್ಯಲಿಯನ್ನು ಗದಗ-ಬೆಟಗೇರಿ ನಗರಸಭೆಯಿಂದ ಪ್ರಾರಂಭಿಸಲಾಗುವುದು. ನಂತರ ನಗರದ ಲಾಯನ್ಸ್‌ ಭವನದಲ್ಲಿ ಸ್ಲಂ ಜನರ ಬೃಹತ್ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಳೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಗತಿಪರ ಚಿಂತಕರು, ರಾಜ್ಯ ಸಮಿತಿ ಸಂಚಾಲಕರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಆದ ಕಾರಣ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು, ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರು ಮತ್ತು ಸಮಿತಿ ಮುಖಂಡರು ತಪ್ಪದೇ ಸಮ್ಮೇಳನ ಹಾಗೂ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಆಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.