ಗುಣಮಟ್ಟದ ಶಿಕ್ಷಣ ಪಡೆಯಲು ಉತ್ತಮ ವ್ಯವಸ್ಥೆ ಹಾಗೂ ಪರಿಸರ ಅಗತ್ಯ: ಮೀನಾಕ್ಷಿ ಬಣ್ಣದ ಭಾವಿ

ಗುಣಮಟ್ಟದ ಶಿಕ್ಷಣ ಪಡೆಯಲು ಉತ್ತಮ ವ್ಯವಸ್ಥೆ ಹಾಗೂ ಪರಿಸರ ಅಗತ್ಯ: ಮೀನಾಕ್ಷಿ ಬಣ್ಣದ ಭಾವಿ  A good system and environment are essential for receiving quality education: Meenakshi Bannada Bhavi

ಶಾಲೆಗಳಿಗೆ ಉಚಿತ ಡೆಸ್ಕ್‌ ವಿತರಣೆ  

ಕೊಪ್ಪಳ, ಆ.25: ಇಂದಿನ ಮಕ್ಕಳು ನಾಡಿನ ಭಾವಿ ಪ್ರಜೆಗಳಾಗಿದ್ದು, ಅವರ ಭವಿಷ್ಯ ಉಜ್ವಲವಾಗಲು ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಹಾಗೂ ಪರಿಸರವೂ ಅಗತ್ಯ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು.  

ಕ್ಲಬ್ನ ಮನವಿಗೆ ಸ್ಪಂದಿಸಿ, ಕ್ಲಬ್ನ ದತ್ತು ಶಾಲೆಗಳಾದ ಗದಗಲ್ ಹಾಗೂ ಕ್ವಾತ್ರಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಕಿಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ವತಿಯಿಂದ ಉಚಿತ ಡೆಸ್ಕ್ಗಳನ್ನು ನೀಡಲಾಯಿತು. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಡೆಸ್ಕ್‌ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಪರಿಸರ ಹಾಗೂ ಅಗತ್ಯವಾದ ಸೌಲಭ್ಯಗಳು ಲಭ್ಯವಿದ್ದರೆ, ಅವರು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕ್ಲಬ್ನ ಮನವಿಗೆ ಸ್ಪಂದಿಸಿ ಕಿಲೋಸ್ಕರ್ ಕಂಪನಿಯವರು ಎರಡು ದತ್ತು ಶಾಲೆಗಳಿಗೆ ಉಚಿತವಾಗಿ ಡೆಸ್ಕ್ಗಳನ್ನು ನೀಡಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಕ್ಲಬ್ನ ಹಿರಿಯ ಸದಸ್ಯೆ ಡಾ. ರಾಧಾ ಕುಲಕರ್ಣಿ, ಎಡಿಟರ್ ಮಾಲಾ, ಎಐಎಸ್‌ಒ ಲತಾ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶರಣಮ್ಮ ಪಾಟೀಲ, ಪಾರ್ವತಿ ಪಾಟೀಲ, ಶಾರದಾ ಹಾಗೂ ತ್ರಿಶಾಲಾ ಸೇರಿದಂತೆ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.  ಶಾಲೆಗಳಿಗೆ ಡೆಸ್ಕ್ಗಳನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.