ಯುವಕನ ಮೇಲೆ ಐದು ಜನರ ತಂಡ ಹಲ್ಲೆ
A gang of five people attacked a young man
ಜಮಖಂಡಿ 10: ನಗರದಲ್ಲಿ ಹಾಡುಹಗಲ್ಲೆ ಯುವಕನ ಮೇಲೆ ಐದು ಜನರಿಂದ ಕಬ್ಬಿಣದ ರಾಡಿನಿಂದ ಅಮಾವೀಯತೆಯನ್ನು ಮರೆತು ಹಿಗ್ಗಾ-ಮುಗ್ಗಾ ಹಲ್ಲೆಯನ್ನು ಮಾಡಿರುವ ಘಟನೆ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ.
ಇಲ್ಲಿನ ಬಿ,ಎಲ್,ಡಿ, ಕಾಲೇಜು ಹತ್ತಿರ ನಡೆದ ಯುವಕನ ಮೇಲೆ ಕಬ್ಬಿಣ ರಾಡನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಐದು ಜನರು ಸೇರಿಕೊಂಡು ಹಿಗ್ಗಾ ಮುಗ್ಗಾ ಹಲ್ಲೆ ಮಾಡುವ ಸಮಯದಲ್ಲಿ ಯುವಕ ನನ್ನನು ಬಿಡಿ... ನನ್ನನು .. ಸಾಯಿಸಬೇಡಿ ...ಬಿಡಿ.. ಎಂದು ಹಲ್ಲೆ ಮಾಡುವ ಜನರಲ್ಲಿ ಅಂಗಾಲಾಚಿದರು ಸಹ ಬಿಡದ ಹಲ್ಲೆಕೋರರು ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶಂಭು ಪುಂಡಲೀಕ ಕೋರಿ (25) ಯುವಕನ ಮೇಲೆ ಕಂಕಣವಾಡಿ ಗ್ರಾಮದ ಐದು ಜನರು ಸೇರಿಕೊಂಡು ಕೈಯಲ್ಲಿ ಕಬ್ಬಿಣದ ರಾಡು ಹಾಗೂ ಕಲ್ಲಿನಿಂದ ಹಲ್ಲೆಯನ್ನು ನಡೆಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಂಕಣವಾಡಿ ಗ್ರಾಮದ ನರಸಿಂಹ ಅತ್ತೆಪ್ಪನ್ನವರ, ಈಶ್ವರ ಅತ್ತೆಪ್ಪನ್ನವರ, ಶ್ರೀಶೈಲ ಅತ್ತೆಪ್ಪನ್ನವರ, ಮಲ್ಲಪ್ಪ ಅತ್ತೆಪ್ಪನ್ನವರು, ಬಸು ಅತ್ತೆಪ್ಪನ್ನವರ ಹೀಗೆ ಐದು ಜನರು ಸೇರಿಕೊಂಡು ಅಮಾನವಿಯತೆಯನ್ನು ಮರೆತು ನನ್ನ ಮೇಲೆ ಮಹಿಳೆಯೊಬ್ಬಳಿಗೆ ನಿಂದನೆ ಮಾಡಿದ್ದಾನೆ ಎಂದು ಆಪಾದಿಸಿ. ಕಬ್ಬಿಣದ ರಾಡಿನಿಂದ ಮತ್ತು ಕಲ್ಲಿನಿಂದ ಹಲ್ಲೆಯನ್ನು ನಡೆಸಿದ್ದಾರೆಂದು ಹಲ್ಲೆಗೊಳ್ಳಗಾದ ಯುವಕ ಶಂಭು ಪುಂಡಲೀಕ ಕೋರಿ ತಿಳಿಸಿದ್ದಾನೆ. ನನಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಗಬೇಕೆಂದು ಈ ಕುರಿತು ನಗರದ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದಾನೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 