ಕಾಯಕ ನಿಷ್ಟೇಯಿಂದ ಸಾರ್ಥಕ ಜೀವನ ಸಾಧ್ಯ
A fulfilling life is possible only through hard work
ಶಿಗ್ಗಾವಿ 17: ಕಾಯಕ ನಿಷ್ಟೇಯಿಂದ ಸಾರ್ಥಕ ಜೀವನ ಸಾಧ್ಯ ಎಂದು ಗುರು ಸಿದ್ಧರಾಮೇಶ್ವರರು ಸಾರಿದ್ದಾರೆ, ಅವರ ತತ್ವ ಆದರ್ಶಗಳನ್ನು ನಾವೇಲ್ಲರೂ ಪಾಲಿಸಬೇಕು ಅಂದಾಗ ಜೀವನ ಪಾವನವಾಗುತ್ತದೆ ಎಂದು ಸಾಹಿತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ತಿಳಿಸಿದರು.
ಪಟ್ಟಣದಲ್ಲಿರುವ ಹಂಚಿನಮನಿ ಆರ್ಕೇಡ್‌ನಲ್ಲಿ ತಾಲೂಕ ಭೋವಿ ಸಮಾಜದ ವತಿಯಿಂದ ಹಮ್ಮಿಕೊಂಡ ಗುರು ಸಿದ್ಧರಾಮೇಶ್ವರರ 583ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಅಲ್ಲಮ ಪ್ರಭುಗಳ ಶಿಷ್ಯರಾಗಿದವರು, ಅವರು ಮಾನವ ಕುಲದ ಬದುಕಿಗೆ ಉತ್ತಮ ಸಂದೇಶ ಸಾರಿದವರು, ಇಂದು ಭೋವಿ ಸಮಾಜ ಕಷ್ಟದಲ್ಲಿದೆ, ಈ ಸಮಾಜ ಮಾದರಿ ಜೀವನ ನಡೆಸುತ್ತಿದೆ, ಸರ್ಕಾರ ಈ ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಭೋವಿ ಸಮಾಜದ ತಾಲೂಕ ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿ ಸಿದ್ದರಾಮೇಶ್ವರು ಒಂದೇ ಸಮೂದಾಯಕ್ಕೆ ಸಿಮಿತರಾದವರಲ್ಲ, ಎಲ್ಲ ಸಮೂದಾಯದವರೂ ಸ್ಮರಿಸುವ ಯೋಗಿಗಳು, ಗುರುಗಳ ಸೇವೆಯನ್ನು ಸತ್ಯದಿಂದ ಆಚರಿಸಬೇಕು, ಅವರ ಮಾರ್ಗದರ್ಶನದಲ್ಲಿ ಮತ್ತು ಅವರ ಹಾದಿಯಲ್ಲಿ ನಾವೇಲ್ಲರೂ ಸಾಗಬೇಕು, ಸಮಾಜದ ಹಲವಾರು ಸಮಸ್ಯೆಗಳನ್ನು ಏದುರಿಸುತ್ತಿದ್ದು ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಮುಖಂಡ ಮಹೇಶ ಕುರಂದವಾಡ ಮಾತನಾಡಿ ಗುರು ಸಿದ್ದರಾಮೇಶ್ವರರು 68 ಸಾವಿರ ಪ್ರವಚನ ಬರೆದಿದ್ದಾರೆ ಅದರಲ್ಲಿ ಇನ್ನೂ ಕೆಲವು ಲಭ್ಯವಾಗಿಲ್ಲ, ಅವರ ತತ್ವ ಸಿದ್ದಾಂತಗಳನ್ನು ಅನುಸರಿಸಿದರೆ ಸಮಾಜ ಮುಂದೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶೇಕಣ್ಣ ಹಾದಿಮನಿ, ರಾಮು ಪೂಜಾರ, ಶೇಟ್ಟೆಪ್ಪ ವಡ್ಡರ, ಧರ್ಮಣ್ಣ ಬಂಡಿವಡ್ಡರ, ಬಸವರಾಜ ವಡ್ಡರ, ದುರುಗಪ್ಪ ವಡ್ಡರ, ನಾಗರಾಜ ವಡ್ಡರ, ಶಿಂಗಪ್ಪ ಶಿವಳ್ಳಿ, ಹನಮಂತಪ್ಪ ಬಡ್ನಿ, ಮಂಜುನಾಥ ಗುಡಗೇರಿ, ಹನಂಮತಪ್ಪ ಬಂಡಿವಡ್ಡರ, ಸೇರಿದಂತೆ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 