ಸತತ 31ನೇ ವರ್ಷದ ತಿಂಥಣಿ ಮೌನೇಶ್ವರ ಜಾತ್ರೆಗೆ ಪಾದಯಾತ್ರೆ

ಸತತ 31ನೇ ವರ್ಷದ ತಿಂಥಣಿ ಮೌನೇಶ್ವರ ಜಾತ್ರೆಗೆ ಪಾದಯಾತ್ರೆ A footpath to the 31st consecutive year of Tinthani Mauneshwar Fair

 ದೇವರಹಿಪ್ಪರಗಿ, 31 : ದಕ್ಷಿಣ ಕಾಶಿ ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಹುಣಶ್ಯಾಳ ಗ್ರಾಮದ ಸುಮಾರು 25ಕ್ಕೂ ಹೆಚ್ಚು ಗ್ರಾಮ ದೇವತೆಯ ಭಜನಾ ಮಂಡಳಿ ಸದಸ್ಯರಿಂದ ಸತತ 31 ವರ್ಷಗಳಿಂದ ಸುಮಾರು 75 ಕಿ.ಮೀ ದೂರವಿರುವ ಕೃಷ್ಣಾ ನದಿ ದಂಡೆಯ ಮೇಲಿರುವ ತಿಂಥಣಿ ಮೌನೇಶ್ವರನ ಸನ್ನಿಧಿಗೆ ಶನಿವಾರ ಬೆಳಗ್ಗೆ ಹುಮ್ಮಸ್ಸಿನಲ್ಲಿ ಎರಡು ದಿನಗಳ ಕಾಲ ಭಜನೆ ಹೆಜ್ಜೆ ಹಾಕುವ ಮೂಲಕ ಬೇಕಿನಾಳ ಮಾರ್ಗವಾಗಿ ಮೊದಲ ದಿನ ಪಾದಯಾತ್ರೆ ಕೈಗೊಂಡು ಅಸ್ಕಿ, ಪಿರಾಪುರ, ಕೋಳೂರ ಮೂಲಕ ಹುಣಸಗಿ ಗ್ರಾಮ ದೇವತೆಯ ದೇವಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಬೆಳಿಗ್ಗೆ ಪಾದಯಾತ್ರೆ ಕೈಗೊಳ್ಳುತ್ತಾರೆ. 

ಅಹ್ವಾನ ನೀಡಿದ ಭಕ್ತರ ಮನೆಗೆ ಊಟ, ವಿಶ್ರಾಂತಿ ತೆಗೆದುಕೊಂಡು ಮುಂದಿನ ಊರುಗಳತ್ತ ಕಕ್ಕೇರಿ ಯಿಂದ ತಿಂಥಣಿಗೆ ತಲುಪುವ ಗ್ರಾಮದ ನೂರಾರು ಭಕ್ತ ಸಮೂಹ ಗುರು ಮೌನೇಶ್ವರ ಜಾತ್ರೆಗೆ ಎಲ್ಲರೂ ಕೂಡಿಕೊಂಡು ಭಾವೈಕ್ಯಕತೆ ಸಾಕ್ಷಾತ್ ಸ್ವರೂಪಿಯಾದ ಜಗದ್ಗುರು ಶ್ರೀ ಮೌನೇಶ್ವರನ ಕೃಪೆಗೆ ಪಾತ್ರರಾಗುತ್ತಿದ್ದಾರೆ.ಪಾದಯಾತ್ರೆ ಮಾರ್ಗ : ಶನಿವಾರ ಬೆಳಗ್ಗೆ 8:00 ಯಿಂದ ಹುಣಶ್ಯಾಳ-ಬೆಕಿನಾಳ-ಅಸ್ಕಿ-ಪಿರಾಪೂರ-ಕೊಳೂರ ದಿಂದ ಹುಣಸಿಗಿ ಗ್ರಾಮದಲ್ಲಿ ರಾತ್ರಿ ವಿಶ್ರಾಂತಿ. ರವಿವಾರ ಬೆಳಗ್ಗೆ ಹುಣಸಿಗಿಯಿಂದ ಪರೋಟ ಪಾದಯಾತ್ರೆ ಕಕ್ಕೇರಿ ಮಾರ್ಗವಾಗಿ ತಿಂಥಣಿ ತಲುಪುತ್ತಾರೆ. 

 ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಭೀಮನಗೌಡ ಕೋಟಿಖಾನಿ, ಈರಣ್ಣ ಬಡಿಗೇರ, ಗೋಪಾಲ ನಾಯ್ಕೋಡಿ, ಶ್ರೀಶೈಲ ಬಡಿಗೇರ, ದೇವಿಂದ್ರ​‍್ಪ ತಳವಾರ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.ಬಾಕ್ಸ್‌,,,ಸತತ 31 ವರ್ಷಗಳಿಂದ ತಿಂಥಣಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಗ್ರಾಮ ದೇವತೆಯ ಭಜನಾ ಮಂಡಳಿಯ ಸದಸ್ಯರಿಂದ ಶ್ರೀ ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆಯ ಮೂಲಕ ಹೋಗುತ್ತಿದ್ದೇವೆ. ನನ್ನನ್ನು ಒಳಗೊಂಡಂತೆ ಸುಮಾರು 25ಕ್ಕೂ ಹೆಚ್ಚು ಜನ ಕೂಡಿಕೊಂಡು ಪಾದಯಾತ್ರೆ ಕೈಗೊಂಡಿದ್ದೇವೆ. ನಂತರ ಗ್ರಾಮದ ಮೂಲಕ ನೂರಾರು ಜನ ಭಕ್ತರು ತಮ್ಮದೇ ಆದ ವಾಹನಗಳ ಮೂಲಕ ತಿಂಥಣಿ ಮೌನೇಶ್ವರನ ಸನ್ನಿಧಿಗೆ ಭೇಟಿ ನೀಡಿ ಕೃಪೆಗೆ ಪಾತ್ರರಾಗುತ್ತಿದ್ದಾರೆ.