ರಕ್ತದಾನ ಮಾಡುವುದರಿಂದ ರಕ್ತದ ಹನಿ ಮತ್ತೊಬ್ಬರ ಜೀವನಕ್ಕೆ ಆಸರೆಯಾಗುತ್ತದೆ

ರಕ್ತದಾನ  ಮಾಡುವುದರಿಂದ ರಕ್ತದ ಹನಿ ಮತ್ತೊಬ್ಬರ ಜೀವನಕ್ಕೆ ಆಸರೆಯಾಗುತ್ತದೆ A drop of blood can save another's life

ದೇವರಹಿಪ್ಪರಗಿ 08: ನಾವು ಮಾಡುವ ರಕ್ತದಾನವು ಕೆಲವೇ ನಿಮಿಷಗಳದ್ದಾದರೂ ಕೂಡಾ ಅದು ಬೇರೆಯವರಿಗೆ ಜೀವಿತಾವಧಿ ಹಾಗೂ ಜೀವದಾನವಿದ್ದಂತೆ.ನಾವು ನೀಡುವ ರಕ್ತದ ಹನಿ ಮತ್ತೊಬ್ಬರ ಜೀವನಕ್ಕೆ ಆಸರೆಯಾಗುತ್ತದೆ.ರಕ್ತದಾನವು ಶ್ರೇಷ್ಟದಾನವಾಗಿದ್ದು ನಾವೆಲ್ಲರೂ ಪುಣ್ಯದ ಕಾರ್ಯವನ್ನು ಮಾಡೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಅವರು ಹೇಳಿದರು. ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಈದ್ ಮಿಲಾದ್ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತವಾಗಿ ಭಾವೈಕ್ಯತೆಯ ಸಂಕೇತವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ,ವಿಜಯಪುರದ ಬ್ಲಡ್ ಬ್ಯಾಂಕ್,ಎಐಎಂಡಿಎಫ್ ಹಾಗೂ ಮುಳಸಾವಳಗಿಯ ನವಜೀವನ ರಕ್ತದಾನಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಳಸಾವಳಗಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ ಎಸ್ ಬಿರಾದಾರ ಅವರು ಮಾತನಾಡುತ್ತಾ ಮಾನವನ ರಕ್ತವು ಅಮೃತಕ್ಕೆ ಸಮಾನವಾಗಿದ್ದು,ರಕ್ತದಾನ ಮಾಡುವುದರಿಂದ ನಮ್ಮಲ್ಲಿ ಹೊಸ ರಕ್ತ ಕಣಗಳು ಉತ್ಪಾದನೆ ಆಗುತ್ತವೆ. 

ದೇಹದಲ್ಲಿ ಕೊಬ್ಬಿನ ಅಂಶವು ಕಡಿಮೆಯಾಗುತ್ತದೆ.ಇದೊಂದು ಸಮಾಜೋಪಯೋಗಿ ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಹೇಳಿದರು.ಸ್ವಪ್ರೇರಣೆಯಿಂದ ನಲವತ್ತು ಜನರು ರಕ್ತದಾನವನ್ನು ಮಾಡಿದರು.ಅವರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.ಮಾಜಿ ಗ್ರಾಪಂ ಸದಸ್ಯ ಸಿದ್ದಪ್ಪ ನಾಗರಳ್ಳಿ ಹಾಗೂ ಸ್ಥಳೀಯ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಜಾವೀದ್ ಮಕಾನದಾರ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ,ಡಾ.ನ್ಯಾಮದೇವ,ಮಲಕು ಸುರಗಿಹಳ್ಳಿ, ಡಾ.ಸಾಹೇಬಗೌಡ ಪಟ್ಟಣ,ಮಲಕಪ್ಪ ನಾಯ್ಕೋಡಿ,ನಬಿರಸೂಲ್ ಕೊರಬು,ಜಾಕೀರ ಮುಜಾವರ,ಈರಣ್ಣ ನರೂಣಿ,ಸಾಯಬಣ್ಣ ಸೊನ್ನಳ್ಳಿ,ಶಿವಶರಣ ದಳವಾಯಿ,ವಿಜಯಕುಮಾರ ತಳವಾರ,ಮತಾಬ್ ಆಹೇರಿ,ದಾವಲಸಾಬ ಗಂಗೂರ,ದಾವೂದ್ ಇನಾಮದಾರ,ಶಾಕೀರಾ ಹೆಬ್ಬಾಳ,ಸುನಂದಾ ಸೊನ್ನಳ್ಳಿ,ಅರವಿಂದ ನಾಯ್ಕೋಡಿ,ದಶರಥ ನಾಯ್ಕೋಡಿ,ನೂರ ಮಕಾನದಾರ,ಸಮೀರ ಮುಜಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಫೋಟೋ 8ಡಿಎಚಪಿ2