ದಶಕಗಳ ಕನಸು ನೆನೆಗುದಿಗೆ : ಮಿರಜ್-ಹುಬ್ಬಳ್ಳಿ ರೈಲ್ವೆ ಮಾರ್ಗ ಯಾವಾಗ
A dream of decades will come true: When will the Miraj-Hubli railway line be built?
ವರದಿ: ಈರಣ್ಣಾ ಎಚ್. ಹುಲ್ಲೂರ
ಯರಗಟ್ಟಿ: ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಮಿರಜ್ ನಡುವೆ ರೈಲುಗಳ ಸೇವೆಯನ್ನು ಆರಂಭಿಸುವ ಬರುವ ಬಜೆಟ್‌ನಲ್ಲಿ ಘೋಷಿಸಿದಂತೆ ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.
ಸವದತ್ತಿ, ಯರಗಟ್ಟಿ, ಗೋಕಾಕ ನಗರಗಳು ಕೃಷಿ, ವಾಣಿಜ್ಯ, ಶೈಕ್ಷಣಿಕ, ಆರ್ಥಿಕತೆ ಸೇರಿ ಅತ್ಯಂತ ತ್ವರಿತವಾಗಿ ಪ್ರಗತಿ ಹೊಂದುತ್ತಿರುವ ನಗರವಾಗಿ ಹೊರಹೊಮ್ಮುತ್ತಿವೆ. ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಲಕ್ಷಾಂತರ ಪ್ರವಾಸಿಗರು ವಿವಿಧ ಕೆಲಸ ಕಾರ್ಯಗಳಿಗಾಗಿ ಬಸ್ ಮುಖಾಂತರ ಸವದತ್ತಿ, ಯರಗಟ್ಟಿ, ಗೋಕಾಕ ಮಾರ್ಗವಾಗಿ ನೆರೆಯ ಮಹಾರಾಷ್ಟ್ರದ ಮಿರಜ್, ಕೋಲ್ಲಾಪುರ, ಸಾಂಗ್ಲಿ ಮುಂತಾದೆಡೆ ಸಂಚರಿಸುತ್ತಿದ್ದಾರೆ.
ಮಿರಜದಿಂದ ಸವದತ್ತಿ-ಯರಗಟ್ಟಿ ಮಾರ್ಗವಾಗಿ ನೂತನ ರೈಲು ಮಾರ್ಗ ನಿರ್ಮಿಸುವುದರಿಂದ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ, ನವಿಲು ತೀರ್ಥ ಜಲಾಶಯ, ಮುನವಳ್ಳಿಯ ರೇಣುಕಾ ಶುಗರ್ಸ್ ಫ್ಯಾಕ್ಟರಿ, ಗೊಡಚಿ ಶ್ರೀ ವೀರಭದ್ರೇಶ್ವರ, ಸೊಗಲದ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ಯರಗಟ್ಟಿ, ಘಟಪ್ರಭಾ, ಗೋಕಾಕ ಪಾಲ್ಸ್ ಸೇರಿ ಮುಂತಾದ ಐತಿಹಾಸಿಕ ಸ್ಥಳಗಳಿಗೆ ವಿಶೇಷ ಜೀವಕಳೆ ಬರುವುದರ ಜತೆಗೆ ಆರ್ಥಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರ ದೂರದ ಪ್ರಯಾಣ ಅತ್ಯಂತ ಸುಗಮಗೊಳಿಸಿದಂತಾಗುತ್ತದೆ.
ಮಿರಜ್-ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗದ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ಈಗ ಯೋಜನೆ ಮಾನ್ಯ ಮುಖ್ಯಮಂತ್ರಿಗಳ ಮುಖಾಂತರ ರಾಜ್ಯ ರೈಲ್ವೆ ಸಚಿವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುತ್ತೆನೆ. ಈ ಯೋಜನೆಯಿಂದ ಮಹಾರಾಷ್ಟ್ರದಿಂದ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ನಮ್ಮ ಭಾಗದ ರೈತರಿಗೆ ನೆರವಾಗಲಿದೆ.
ವಿಶ್ವಾಸ ವೈದ್ಯ ಶಾಸಕರು ಸವದತ್ತಿ ಯಲ್ಲಮ್ಮ ಮತಕ್ಷೇತ್ರ
2018ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿಯವರಿಗೆ ಹುಬ್ಬಳ್ಳಿ-ಮಿರಜ ನಡುವೆ ನೂತನ ರೈಲ್ವೆ ಮಾರ್ಗ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿ ಸ್ವೀಕರಿಸಿದ ಸುರೇಶ ಅಂಗಡಿಯವರು ಸರ್ವೇ ಮಾಡಿಸುವುದಾಗಿ ಹೇಳಿದರು. ಆದರೆ ಅವರು ಕೋವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಈ ಸರ್ವೆ ಕಾರ್ಯ ನೆನೆಗುದಿಗೆ ಬಿತ್ತು.
ಅಜೀತಕುಮಾರ ದೇಸಾಯಿ
ಮಾಜಿ ಜಿ. ಪಂ. ಸದಸ್ಯ, ಯರಗಟ್ಟಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 