ಮಂಗಳಮುಖಿಯರ ಬದುಕಿಗೊಂದು ಘನತೆಯ ಭಾಷ್ಯ: ಪ್ರಾಣಿ ರಕ್ಷಣೆಗಾಗಿ ಎಸ್‌.ಡಿ. ಸಿಂಚನಾ ಅವರ ಶ್ಲಾಘನೀಯ ಹೆಜ್ಜೆ - ಕೃಷ್ಣಾ ಹಡಪದ

ಮಂಗಳಮುಖಿಯರ ಬದುಕಿಗೊಂದು ಘನತೆಯ ಭಾಷ್ಯ: ಪ್ರಾಣಿ ರಕ್ಷಣೆಗಾಗಿ ಎಸ್‌.ಡಿ. ಸಿಂಚನಾ ಅವರ ಶ್ಲಾಘನೀಯ ಹೆಜ್ಜೆ - ಕೃಷ್ಣಾ ಹಡಪದ  A dignified commentary on the lives of the Martians: S.D. Sinchana's commendable step for animal pro

        ಗದಗ 07: ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಅವರು ಕೇವಲ ಸಹಾಯ ಪಡೆಯುವವರಲ್ಲ, ಸಮಾಜಕ್ಕೆ ಸಹಾಯ ನೀಡುವ ಶಕ್ತಿಯಾಗಿ ಹೊರಹೊಮ್ಮಬಲ್ಲರು ಎಂಬುದನ್ನು ಗದಗಿನ ಎಸ್‌.ಡಿ. ಸಿಂಚನಾ ಅವರು ಇಂದು ಸಾಬೀತುಪಡಿಸಿದ್ದಾರೆ, ರಾತ್ರಿ ಸಮಯದಲ್ಲಿ ಬೀದಿಗಳಲ್ಲಿ ಅಲೆಯುವ ಗೋವುಗಳು ಮತ್ತು ನಾಯಿಗಳು ವಾಹನ ಸವಾರರ ಕಣ್ಣಿಗೆ ಕಾಣಿಸದೆ ಅಪಘಾತಕ್ಕೀಡಾಗಿ ಪ್ರಾಣ ಬಿಡುತ್ತಿವೆ. ಈ ಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸಿರುವ ಸಿಂಚನಾ ಅವರು, ತಮ್ಮ ಜನ್ಮದಿನದ ಅಂಗವಾಗಿ ಪ್ರಾಣಿಗಳ ಕುತ್ತಿಗೆಗೆ ’ರಿಫ್ಲೆಕ್ಟಿವ್ ಡಿಜಿಟಲ್ ರೇಡಿಯಂ ಬೆಲ್ಟ್‌’ ಅಳವಡಿಸುವ ಅಭಿಯಾನ ಕೈಗೊಂಡಿದ್ದಾರೆ.     

   ವಾಹನಗಳ ಬೆಳಕು ಬಿದ್ದಾಗ ಹೊಳೆಯುವ ಈ ಬೆಲ್ಟ್‌, ಪ್ರಾಣಿಗಳ ಜೀವ ಉಳಿಸುವುದರ ಜೊತೆಗೆ ವಾಹನ ಸವಾರರ ಜೀವಕ್ಕೂ ರಕ್ಷಣೆ ನೀಡುತ್ತದೆ. ಈ ಯೋಜನೆ ಕೇವಲ ಒಂದು ದಿನದ ಆಚರಣೆಯಾಗದೆ, ಸರ್ಕಾರವೇ ಇದನ್ನು ರಾಜ್ಯಾದ್ಯಂತ ಜಾರಿಗೆ ತರುವಂತಾಗಬೇಕು" ಎಂದು ವಿಶಿಷ್ಟ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಎಸ್‌.ಡಿ. ಸಿಂಚನಾ ಅವರು ಸರಕಾರಕ್ಕೆ ಆಗ್ರಹವಾಗಿದೆ     ಎಸ್‌.ಡಿ. ಸಿಂಚನಾ ಅವರು ಭಿಕ್ಷಾಟನೆಯಂತಹ ಚಟುವಟಿಕೆಗಳಿಂದ ದೂರವಿದ್ದು, ಸ್ವತಃ ಕಂಪ್ಯೂಟರ್ ಜ್ಞಾನ ಪಡೆದು ಸ್ವಯಂ ಉದ್ಯೋಗದ ಹಾದಿ ಹಿಡಿದಿದ್ದಾರೆ. ಬಿಡುವಿನ ವೇಳೆಯಲ್ಲಿ ತಮ್ಮ ಅಕ್ಕನ ತರಕಾರಿ ಅಂಗಡಿಯಲ್ಲೂ ವ್ಯಾಪಾರ ಮಾಡುತ್ತಾ ಕಾಯಕವೇ ಕೈಲಾಸ ಎಂಬಂತೆ ಬದುಕುತ್ತಿದ್ದಾರೆ.

ಅವರು ’ನಮ್ಮ ಬಳಗ’ ಎಂಬ ಸಂಘಟನೆಯ ಮೂಲಕ ಬಡವರಿಗೆ ರೇಷನ್ ಕಿಟ್ ನೀಡುವುದು ಸೇರಿದಂತೆ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಸಾರ್ವಜನಿಕರಿಗೆಲ್ಲ ಹೆಮ್ಮೆಯ ವಿಷಯವಾಗಿದೆ      ಮಂಗಳಮುಖಿಯರೆಂದರೆ ಕೇವಲ ಚಪ್ಪಾಳೆ ತಟ್ಟಿ ಹಣ ಕೇಳುವವರು ಎಂಬ ವಾತಾವರಣ ಮುಕ್ತವಾಗಬೇಕು. ಅವರಲ್ಲೂ ಅಪಾರವಾದ ಮಾನವೀಯತೆ ಮತ್ತು ಸೇವೆಯ ಗುಣವಿದೆ. ಎಸ್‌.ಡಿ ಸಿಂಚನಾ ಅವರಂತಹ ವ್ಯಕ್ತಿತ್ವಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾನತೆ ಸಾಧ್ಯ. ಅವರು ಸಮಾಜಕ್ಕೆ ಹೊರೆಯಾಗದೆ, ಸಮಾಜದ ಕಷ್ಟಕ್ಕೆ ಹೆಗಲು ಕೊಡುವ ಶಕ್ತಿಯಾಗಿದ್ದಾರೆ.   

  ಇಂತಹ ಮಾದರಿ ಬದಲಾವಣೆಯನ್ನು ನಾವೆಲ್ಲರೂ ಸ್ವಾಗತಿಸಬೇಕು ಮತ್ತು ಪ್ರೋತ್ಸಾಹಿಸಬೇಕು"  ಗೋವುಗಳ ಮತ್ತು ಮೂಕ ಪ್ರಾಣಿಗಳ ರಕ್ಷಣೆಗಾಗಿ ಎಸ್‌.ಡಿ ಸಿಂಚನಾ ಅವರು ಹಾಕಿಕೊಟ್ಟ ಈ ಹಾದಿಯಲ್ಲಿ ನಾವೂ ಕೈಜೋಡಿಸೋಣ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್‌. ಹಡಪದ ತಿಳಿಸಿದ್ದಾರೆ.