ಸಂಗೀತ ಮಾತ್ರಿಕ ಖ್ಯಾತ ಗಾಯಕ ಗುರುಕಿರಣ ರಿಂದ ಸಾಂಸ್ಕೃತಿಕ ಕಾರ್ಯಕ್ರಮ
A cultural program by the musical wizard and renowned singer Gurukiran
ಲೋಕದರ್ಶನ ವರದಿ
ಹೂವಿನಹಡಗಲಿ 22: ತಾಲೂಕಿನ ಸೋಗಿ ಗ್ರಾಮದಲ್ಲಿ ಶ್ರೀ ಸ್ನೇಹ ಯುವಕ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 30ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಹಾಗೂ ಸೋಗಿ ಗ್ರಾಮದ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸೋಮವಾರ ಆಯೋಜಿಸಲಾದ "ಡಾ. ಗುರುಕಿರಣ್ ಲೈವ್ ಕಾನ್ಸರ್ಟ್ ಮ್ಯೂಸಿಕಲ್ ನೈಟ್" ಕಾರ್ಯಕ್ರಮವನ್ನು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಕೃಷ್ಣನಾಯಕ ಗಣೇಶ ಹಬ್ಬದ ಆಚರಣೆ ಮತ್ತು ವಿಸರ್ಜನೆಯ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ.
ಹಬ್ಬದ ಸಂಭ್ರಮವು ಯಾರಿಗೂ ತೊಂದರೆ ನೀಡದಂತೆ, ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಬಾರದಂತೆ ಆಚರಿಸಿ ಎಂದರು.ಇದಕ್ಕೂ ಮೊದಲು ಶಾಸಕರಿಗೆ ಗ್ರಾಮದಲ್ಲಿ ಹೂವಿನಹಾರ ಮೂಲಕ ಭವ್ಯ ಸ್ವಾಗತಿಸಲಾಯಿತು. ಗುರುಕಿರಣ್ ಹಾಗೂ ಸಂಗಡಿಗರು ಸೇರಿದಂತೆ ಅವರ ತಂಡದ ಸಹ-ಕಲಾವಿದರು ವೇದಿಕೆಯ ಮೇಲೆ ಭಕ್ತಿಗೀತೆಗಳನ್ನು ಹಾಡಿ, ನೆರೆದಿದ್ದ ಭಾರಿ ಜನಸ್ತೋಮವನ್ನು ರಂಜಿಸಿದ್ದಾರೆ. ಹಬ್ಬದ ಲೈವ್ ಮ್ಯೂಸಿಕ್ ಪ್ರದರ್ಶನ ಹಾಗೂ ನೃತ್ಯದ ವಾತಾವರಣದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ ರೆಡ್ಡಿ,
ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಮಂಜುನಾಥ್ ಜೈನ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೀರಾಬಾಯಿ, ಜಿಲ್ಲಾ ಉಪಾಧ್ಯಕ್ಷರಾದ ಹಣ್ಣಿ ಶಶಿಧರ್, ಜಿಲ್ಲಾ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಈ ಟಿ ಲಿಂಗರಾಜ್, ಮಂಡಲ ಅಧ್ಯಕ್ಷರಾದ ಪೂಜಾರ್ ಮಲ್ಲಿಕಾರ್ಜುನ, ಕೆ.ಬಿ ವೀರಭದ್ರ್ಪ ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್, ಮೋಹನ್ ರೆಡ್ಡಿ ಅಧ್ಯಕ್ಷರು ವಿ.ವಿ. ಸಂಘ, ಗಡ್ಡಿ ಬಸವರಾಜ್, ಶ್ರೀಮತಿ ಕೆ.ಬಿ. ನಳಿನ ಮಾಜಿ ಜಿಲ್ಲಾ, ಮಾಜಿ ಪುರಸಭೆ ಅಧ್ಯಕ್ಷರಾದ ವಾರದಗೌಸ್ ಮೋದ್ದೀನ್, ಮಾಜಿ ಪುರಸಭೆ ಸದಸ್ಯರಾದ ಸೊಪ್ಪಿನ ಮಂಜಣ್ಣ, ಸಂತೋಷ್ ಜೈನ್, ಶ್ರೀ ಚಂದ ನಾಯಕ್, ವಕೀಲರಾದ ನರೇಂದ್ರ ಇದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 