ಬೇನಕನಕೊಂಡ ಗ್ರಾಮದಲ್ಲಿ ವಿಜೃಂಭಿಸಿದ ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಸಂಜೆ

ಬೇನಕನಕೊಂಡ ಗ್ರಾಮದಲ್ಲಿ ವಿಜೃಂಭಿಸಿದ ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಸಂಜೆ   A cultural evening in Benakanakonda village

ರಾಣೇಬೆನ್ನೂರ 18: ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ, ನಮ್ಮ ನೈಜ ಮತ್ತು ನಿಜ ಸಂಸ್ಕೃತಿಯ ಸಂಗೀತ ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕಲಾವಿದರು ಮತ್ತು ಕಲಾ ಸಂಸ್ಥೆಗಳು ಪ್ರಾಯೋಜಕತ್ವ ಅಳವಡಿಸಿಕೊಂಡು ನೈಜ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗುತ್ತಿರುವುದು ಶ್ಲಾಘನೀಯ  ಕಾರ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಬಸಪ್ಪ ಎಫ್‌.ಬಿದರಿ ಹೇಳಿದರು. 

ಅವರು ತಾಲೂಕಿನ ಬೆನಕನಕೊಂಡ ಗ್ರಾಮದ ಕಲಾ ರಂಗಮಂದಿರದಲ್ಲಿ ಡಾ, ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 81ನೇ ಪುಣ್ಯಸ್ಮರ ಣೋತ್ಸವದ ನಿಮಿತ್ತ ಶ್ರೀ ಅನುಪಲ್ಲವಿ ಸಂಗೀತ ಕಲಾ ಸಂಸ್ಥೆಯು, ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಬೆನಕನಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶಿ.ಅಸುಂಡಿ ಅವರು, ಗ್ರಾಮೀಣ ಕಲೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ, ಮಾನವೀಯ ಸಂಬಂಧಗಳನ್ನು, ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವ ಸಂಸ್ಕೃತಿ ನಮ್ಮದಾಗಿದೆ ಅಲ್ಲದೆ ಇತಿಹಾಸದ ಪರಂಪರೆಯಲ್ಲಿ ಸಾಗಿ ಬಂದಿರುವ ಕಲೆ ಮತ್ತು ಕಲಾವಿದರು ಉಳಿಯಬೇಕಾಗಿದೆ ಅದಕ್ಕಾಗಿ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದರು.      

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಂಜಪ್ಪ  ಆನ್ವೇರಿ, ನಿಂಗನಗೌಡ ಸಂಗನಗೌಡ್ರು, ಹೆಚ್‌. ಜಿ. ನಿಟ್ಟೂರ, ಎಸ್‌.ಕೆ. ಪೂಜಾರ, ಸುರೇಶಪ್ಪ ಗರಡಿಮನಿ, ರಂಗ ಕಲಾವಿದ ಮಲಕಯ್ಯ ಕೇರೋಡಿಮಠ. ರಾಜ್ಯ ಪ್ರ.ಪುರಸ್ಕೃತ ರೇವಣಪ್ಪ ಮೇಗಳಮನಿ ಅನುಪಲ್ಲವಿ ಸಂಗೀತ ಸಂಸ್ಥೆಯ ಅಧ್ಯಕ್ಷ ರುದ್ರೇಶ್ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು. ಮೂರು ತಾಸುಗಳ ಕಾಲ ನಡೆದ ಕನ್ನಡ ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಸಂಜೆಯಲ್ಲಿ ರಮೇಶ ಮಲ್ಲಾಡದ ವಚನ ಗಾಯನ. ಗೌತಮ್ ಸಾವಕ್ಕನವರ, ಸಾಕ್ಸೋ ಫೋನ್‌. ಪೂರ್ಣಿಮಾ ಚಿತ್ರಗಾರ, ಭಾವಗೀತೆ ಕುಶಾಲ್ ಚಿತ್ರಾಗಾರ, ಭಕ್ತಿ ಗೀತೆಗಳು.  ವಿರೂಪಾಕ್ಷ ಕೆ.ಕೆ.ಜಾನಪದ. ಉಮೇಶ ಚಲವಾದಿ, ಸುಗಮ ಸಂಗೀತ. ಕರೇಗೌಡ ಗುರುಲಿಂಗಪ್ಪಗೌಡ್ರು, ರಂಗಗೀತೆಗಳು. ಶಿವಾನಂದಪ್ಪ ಕಿವುಡಣ್ಣನವರ, ಶಿವರಾಜ ಚಿನಕಾಳಿ  ತತ್ವಪದಗಳು. ಮಾತಂಗೆಶ್ವರಿ ಭಜನಾ ಸಂಘ, ಭಜನೆ. ಮತ್ತಿತರರ  ಕಲಾವಿದರು ತಮ್ಮ ಕಲೆಗಳ ಮೂಲಕ ಗ್ರಾಮೀಣ ನಾಗರಿಕರ ಗಮನ ಸೆಳೆದವು.