ಶರಣರ ಚಿಂತನೆಗಳ ತಿಳುವಳಿಕೆ ಮೂಡಿಸುವ ವಚನ ಹಾಗೂ ಪ್ರಬಂದ ಸ್ಪರ್ಧೆ

ಶರಣರ ಚಿಂತನೆಗಳ ತಿಳುವಳಿಕೆ ಮೂಡಿಸುವ ವಚನ ಹಾಗೂ ಪ್ರಬಂದ ಸ್ಪರ್ಧೆ A competition of vachana and prabanda to create awareness about the thoughts of the Sharanas

            ಹುಬ್ಬಳ್ಳಿ 18 :ಹುಬ್ಬಳ್ಳಿಯ ಬಸವಕೇಂದ್ರವು ಬಸವ ಫೌಂಡೇಶನ್ ವತಿಯಿಂದ ಶಾಲಾಮಕ್ಕಳಲ್ಲಿ ಶರಣರ ವಚನಗಳಲ್ಲಿ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಮತ್ತು ಅವರ ಚಿಂತನೆಗಳ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಪ್ರತಿವರ್ಷವು ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ, ನಿಬಂಧ ಸ್ಪರ್ಧೆಯನ್ನು ಏರಿ​‍್ಡಸುತ್ತಾ ಬಂದಿದೆ.  ಬಸವಕೇಂದ್ರದ ಅಧ್ಯಕ್ಷ ಪ್ರೊಜಿ.ಬಿ.ಹಳ್ಳಾಳ ಹಾಗೂ ಬಸವ ಫೌಂಢೇಶನ್ ಕಾರ್ಯದರ್ಶಿ ಡಾ. ಪ್ರಸಾದರೂಡಗಿಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ನೊಂದಾಯಿಸಿದ ವಿದ್ಯಾರ್ಥಿಗಳು ಗೋಕುಲ ರಸ್ತೆಯ ಮುರಾರ್ಜಿ ನಗರದ ಬಸವಕೇಂದ್ರದ ವಿ.ಎಮ್‌.ಕೊಟಗಿ ಬಸವಸಂಸ್ಕೃತಿ ಶಾಲೆಯಲ್ಲಿ ದಿನಾಂಕ: 30-11-2025 ರವಿವಾರ, ಬೆಳಿಗ್ಗೆ 10 ಗಂಟೆಗೆ ಸರಿಯಾದ ಸಮಯಕ್ಕೆ ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಬಸವ ಪರಿಸರ ಸಂರಕ್ಷಣಾಸಮಿತಿ ಕಾರ್ಯದರ್ಶಿ, ಗ್ರಂಥಪಾಲಕ ಡಾ.ಸುರೇಶಡಿ. ಹೊರಕೇರಿ ಅವರು ವಿನಂತಿಸಿದ್ದಾರೆ.  

               ಈ ವರ್ಷವು ಪ್ರಾಥಮಿಕ  1ರಿಂದ 4 ನೇತರಗತಿಯ ವಿದ್ಯಾರ್ಥಿಗಳು ಶರಣರ ವಚನಗಳನ್ನು ಹೆಚ್ಚುಹೆಚ್ಚು ಕಂಠಪಾಠ ಮಾಡಿ ಸ್ಪಷ್ಟವಾಗಿ ಹೇಳುವುದು ಹಾಗೂ ಹಾಡುವುದು. 5 ರಿಂದ 7 ನೇತರಗತಿಯ ವಿದ್ಯಾರ್ಥಿಗಳು ಹೆಚ್ಚುಹೆಚ್ಚು ವಚನಗಳನ್ನು ಸ್ಪಷ್ಠವಾಗಿ ಹಾಡುವುದು, ಹೇಳುವುದರ ಜೊತೆಗೆಅವುಗಳ ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸುವುದು.  8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಖೃತಿಕ ನಾಯಕ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರಿ​‍್ಡಸಲಾಗಿದೆ.  ಈ ಎಲ್ಲಾಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದ್ದು,ಒಂದುಗಂಟೆ ಕಾಲಾವಕಾಶ,ಹಾಳೆಗಳನ್ನು ಪೂರೈಸಲಾಗುವುದು, ವಿಷಯ ಚಿಂತನೆ ಹಾಗೂ ಸುಂದರ ಬರಹವನ್ನೂ ಗಮನಿಸಲಾಗುವುದು, ಬರೆಯಲು ಉಪಯೋಗಿಸುವ ಪ್ಯಾಡ್ ಅಥವಾ ಕಾರ್ಡಬೋರ್ಡನ್ನು ತರಬೇಕು,  ವಿದ್ಯಾರ್ಥಿಗಳು ಅವರಶಾಲೆಯ ಮುಖ್ಯಗುರುಗಳು, ಪ್ರಾಚಾರ್ಯರ ಮುಖಾಂತರ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.ಈ ಎಲ್ಲಾ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದುರೂಪದ ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448115594 ಸಂಪರ್ಕಿಸಬೇಕು ಎಂದುಡಾ. ಸುರೇಶಡಿ. ಹೊರಕೇರಿತಿಳಿಸಿದ್ದಾರೆ.            

            ಒಂದೊಂದು ವಿಭಾಗಕ್ಕೆ ಪ್ರತಿಶಾಲೆಯಿಂದ ಎರಡು ಮಕ್ಕಳನ್ನು ಆಯ್ಕೆಮಾಡಿ ಅಥವಾಮಕ್ಕಳು ಶಾಲಾ ಮುಖ್ಯಸ್ಥರನ್ನು ಭೇಟಿ ಮಾಡಿ ಪರವಾನಗಿ ಪಡೆದುಕೊಂಡು ಶಾಲೆಯ ಮುಖ್ಯಸ್ಥರ ಶೀಲು,ಸಹಿಯೊಂದಿಗೆ, ಶಾಲೆಯ ಮಕ್ಕಳ ಹೆಸರುಗಳನ್ನು ಪ್ರೊಜಿ.ಬಿ.ಹಳ್ಳಾಳ, ಅಧ್ಯಕ್ಷರು, ಬಸವಕೇಂದ್ರ, ಬ್ರೈಟ್ ಬಿಜಿನೆಸ್ ಸ್ಕೂಲ್  ರವಿನಗರಕ್ರಾಸ್, ಅಕ್ಷಯ ಪಾರ್ಕ ಎದುರಿಗೆ, ಗೋಕುಲರಸ್ತೆ, ಹುಬ್ಬಳ್ಳಿ 580030 ಈ ವಿಳಾಸಕ್ಕೆಮಂಗಳವಾರ 25-11-2025ರ ಒಳಗೆ ತಲುಪಿಸಬೇಕಾಗಿ ವಿನಂತಿಸಲಾಗಿದೆ.