ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?

ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್  ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? A broken stretcher in a hearse: Citizens scramble to transport the body: Doesn't the municipality ha

ಸಂಕೇಶ್ವರ : ತಾಲ್ಲೂಕು ಎಲ್ಲ ಅರ್ಹತೆ ಇರುವ ಸಂಕೇಶ್ವರ ಪುರಸಭೆಯಲ್ಲಿ ಕೋಟಿ ಗಂಟಲೇ ದುಡ್ಡು ವಹಿವಾಟು ಇದ್ದರೂ ಇದ್ದರೂ ಪುರಸಭೆಗೆ ಸೇರಿದ ಶವ ಸಾಗಿಸುವ ವಾಹನ ಸ್ಟ್ರೆಚರ್ ಹರಿದು ಮೂರಾಬಟ್ಟಿ ಆಗಿದ್ದು, ಆ ಸ್ಟ್ರೆಚರ್ ಒಳಗಿನಿಂದ ಶವಗಳು ಜಾರಿ ಕೆಳಗೆ ಬಿಳುವ ಪರಿಸ್ಥಿತಿ ಇದ್ದರೂ ಒಂದು ಸ್ಟ್ರೆಚರ್ ಖರೀದಿಸಲು ಆಗದೆ ಇರುವದು ನಾಚಿಗೇಡಿತನದ ವಿಷಯವಾಗಿದೆ.

    ಕಳೆದ ಐದು ತಿಂಗಳಿಂದ ಪೌರ ಕಾರ್ಮಿಕರ ವೇತನ ನೀಡದೆ ಸುದ್ದಿಯಾಗಿದ್ದ ಸಂಕೇಶ್ವರ ಪುರಸಭೆಗೆ ಬಡತನ ಆವರಿಸಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲು ಕಾಡತೊಡಗಿದೆ. ಇದಕ್ಕೆ ಕಾರಣ ಪುರಸಭೆಯ ಶವ ಸಾಗಿಸುವ ವಾಹನದಲ್ಲಿ ಶವ ಸಾಗಿಸುವ ಸ್ಟ್ರೆಚರ್ ಅರ್ಧ ಭಾಗ ಕಿತ್ತು ಹೋಗಿದ್ದರೂ ಅದನ್ನು ಖರೀದಿ ಮಾಡದ ಪುರಸಭೆ ಅಧಿಕಾರಿಗಳ ನಡೆಯ ವಿರುದ್ದ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ. 

     ಸಂಕೇಶ್ವರ ಪುರಸಭೆಯಲ್ಲಿನ ಶವ ಸಾಗಿಸುವ ವಾಹನದಲ್ಲಿ ಸ್ಟ್ರೆಚರ್ ಹಾಳಾಗಿ ಅರ್ಧ ಭಾಗ ಕಿತ್ತು ಹೋಗಿದ್ದು, ದಿ. 18ರಂದು ಶವ ಹಾಕಿ ಸಾಗುಸುತ್ತಿದ್ದಾಗ ಸ್ಟ್ರೆಚರ್ ಹರಿದು ಶವ ಕೆಳಗೆ ಬಿಳುತಿದ್ದಾಗ ನಾಗರಿಕರು ಶವವನ್ನು ಹಿಡಿದು ಕೈಯಲ್ಲಿ ತೆಗೆದುಕೊಂಡು ಸಾಗಿದ ಘಟನೆ ವರದಿಯಾಗಿದೆ.

   ಮನುಷ್ಯ ಜೀವಂತ ಇದ್ದಾಗ ಎಷ್ಟು ಬೆಲೆ ನೀಡುತ್ತಾರೆ ಅದೇ ರೀತಿ ಮನುಷ್ಯ ಸತ್ತಾಗ ಕೂಡಾ ಅವರ ಶವಕ್ಕು ಕೂಡಾ ಬೆಲೆ ನೀಡಬೇಕಾಗಿರುವದು ಎಲ್ಲರ ಕರ್ತವ್ಯ ವಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಶವ ಸಾಗಿಸುವ ಸ್ಟ್ರೆಚರ್ ಕಿತ್ತು ಹಾಳಾಗಿದ್ದರೂ ಹೊಸದೊಂದು ಸ್ಟ್ರೆಚರ್ ಖರೀದಿಸಲು ಆಗಿಲ್ಲ ಅಂದರೆ ಇವರ ಕೈಯಿಂದ ಸಂಕೇಶ್ವರ ಅಭಿವೃದ್ಧಿ ಹೇಗೆ ಸಾದ್ಯ ಎನ್ನುವ ಮಾತು ಈಗ ಜನರ ಯಕ್ಷ ಪ್ರಶ್ಬೆಯಾಗಿದೆ. 

   ಸಂಕೇಶ್ವರ ಪುರಸಭೆ ಯಲ್ಲಿ ಶವ ಸಾಗಿಸಲು ಇರುವದು ಒಂದೇ ಒಂದು ವಾಹನ ಆ ವಾಹನ ಅವಸ್ಥೆ ಹೀಗಾಗಿದೆ ಎಂದು ಇನ್ನೊಂದು ವಾಹನಗಳು ಬರಲು ಹೇಗೆ ಸಾದ್ಯ ಎನ್ನುವದು ಸಾರ್ವಜನಿಕ ರ ಪ್ರಶ್ನೆ ಯಾಗಿದೆ.