ಧಾರವಾಡ 14: ಧಾರವಾಡ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ವಾಷರ್ಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವು ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತ್ತ. ಪುರುಷ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ಎಂ.ಡಿ.ಮಸ್ತಾನ ಹಾಗೂ ಮಹಿಳಾ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ಅನಿತಾ ಸಿಂಗ್ ಪಡೆದುಕೊಂಡರು.
ವಾಷರ್ಿಕ ಕ್ರೀಡಾಕೂಟ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವತರ್ಿಕಾ ಕಟಿಯಾರ ಅವರು ಪ್ರಶಸ್ತಿ ವಿಜೇತ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪಾರಿತೋಷಕ ಹಾಗೂ ಬಹುಮಾನವನ್ನು ವಿತರಿಸಿದರು. ಉಪಪೊಲೀಸ್ ವರಿಷ್ಠಾಧಿಕಾರಿ ರವಿ ನಾಯ್ಕ ಇದ್ದರು.
ಫಲಿತಾಂಶ ಪಟ್ಟಿ:
ಪುರುಷರ ವಿಭಾಗ 100 ಮೀ ಓಟದಲ್ಲಿ ಭದ್ರಾ ತಂಡದ ಎಂ.ಡಿ. ಮಸ್ತಾನ ಪ್ರಥಮ, ಶಿವಾನಂದ ಬದ್ನಿಗಟ್ಟಿ ದ್ವಿತೀಯ, ಕೃಷ್ಣಾ ತಂಡದ ಮಾರುತಿ ಕುಂಬಾರ ತೃತೀಯ ಸ್ಥಾನ ಪಡೆದಿದ್ದಾರೆ.
200 ಮೀ ಓಟದಲ್ಲಿ ಭದ್ರಾ ತಂಡದ ಎಂ.ಡಿ. ಮಸ್ತಾನ ಪ್ರಥಮ, ಶಿವಾನಂದ ಬದ್ನಿಗಟ್ಟಿ ದ್ವಿತೀಯ, ವಿಶಾಲ ಯು. ಬಳ್ಳಾರಿ ತೃತೀಯ ಸ್ಥಾನ ಪಡೆದಿದ್ದಾರೆ.
400 ಮೀ ಓಟದಲ್ಲಿ ಭದ್ರಾ ತಂಡದ ಎಂ.ಡಿ. ಮಸ್ತಾನ ಪ್ರಥಮ, ಕೃಷ್ಣಾ ತಂಡದ ಹುಲಿಯಪ್ಪ ಕುರುಬರ ದ್ವಿತೀಯ, ತುಂಗಾ ತಂಡದ ಪಿ.ಪಿ. ದಡಕೆ ತೃತೀಯ ಸ್ಥಾನ ಪಡೆದಿದ್ದಾರೆ.
800 ಮೀ ಓಟದಲ್ಲಿ ಭದ್ರಾ ತಂಡದ ಎಂ.ಡಿ. ಮಸ್ತಾನ ಪ್ರಥಮ, ತುಂಗಾ ತಂಡದ ಪಿ.ಪಿ. ದಡಕೆ ದ್ವಿತೀಯ, ಕೃಷ್ಣಾ ತಂಡದ ಮಾರುತಿ ಕುಂಬಾರ ತೃತೀಯ ಸ್ಥಾನ ಪಡೆದಿದ್ದಾರೆ.
ಉದ್ದ ಜಿಗಿತದಲ್ಲಿ: ಭದ್ರಾ ತಂಡದ ಡಿ.ಕೆ.ಲಮಾಣಿ ಪ್ರಥಮ, ಎಂ.ಡಿ. ಮಸ್ತಾನ ದ್ವಿತೀಯ ರಾಘವೇಂದ್ರ ನಾಯ್ಕರ ತೃತೀಯ ಸ್ಥಾನ ಪಡೆದಿದ್ದಾರೆ.
ಗುಂಡು ಎಸೆತದಲ್ಲಿ: ಎಸ್.ಎಸ್. ತೋರೋಜಿ ಪ್ರಥಮ, ಭದ್ರಾ ತಂಡದ ಎ.ಜಿ. ಸಂಶಿ ದ್ವಿತೀಯ, ಕೃಷ್ಣಾ ತಂಡದ ಎಸ್.ಆರ್. ಹೊಸಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.
ಎತ್ತರ ಜಿಗಿತದಲ್ಲಿ: ದೇವರಾಜ ಜಿ.ಬಿ. ಪ್ರಥಮ, ತಂಡದ ಹುಲಿಯಪ್ಪ ಕುರುಬರ ದ್ವಿತೀಯ, ನಾಗರಾಜ ಹಂಚಿನಾಳ ತೃತೀಯ ಸ್ಥಾನ ಪಡೆದಿದ್ದಾರೆ.
ಶೂಟಿಂಗ್ ವಿಭಾಗದಲ್ಲಿ: ಭದ್ರಾ ತಂಡದ ಎಂ.ಆರ್.ಪಠಾಣ ಪ್ರಥಮ, ತುಂಗಾ ತಂಡದ ಕೆ.ಹೆಚ್.ಕಾಂಬ್ಳೆ ದ್ವಿತೀಯ, ಆರ್.ಎಂ. ನರಗುಂದ ತೃತೀಯ ಸ್ಥಾನ ಪಡೆದಿದ್ದಾರೆ.
ಶೂಟಿಂಗ್ ವಾಹನ ಚಾಲಕರಿಗಾಗಿ ಎಂ.ಹೆಚ್.ಡವಳೇಶ್ವರ ಪ್ರಥಮ, ಬಿ.ಬಿ. ಪೊಲೀಸ್ ದ್ವಿತೀಯ, ಎಂ.ಎ. ಪಿಶೆ ತೃತೀಯ ಸ್ಥಾನ ಪಡೆದಿದ್ದಾರೆ.