ವನ್ನೂರ ಗ್ರಾಮಕ್ಕೆ ಎ ಸಿ ಪ್ರಭಾವತಿ ಪಕೀರಪೂರ ಭೇಟಿ
A.C. Prabhavati Pakirpur visits Vannura village
ನೇಸರಗಿ, 30 : ಸಮೀಪದ ವನ್ನೂರ ಗ್ರಾಮಕ್ಕೆ ಬೈಲಹೊಂಗಲ ಉಪವಿಭಾಗಧಿಕಾರಿಗಳಾದ ಪ್ರಭಾವತಿ ಫಕೀರಪೂರ ಅವರು ಗ್ರಾಮದ ಪರಿಶಿಷ್ಟ ಜಾತಿ ಕಾಲನಿ ಗೆ ಭೇಟಿ ನೀಡಿ ಎಸ್ ಸಿ ಜನಾಂಗದವರ ಕುಂದು ಕೋರತೆಗಳನ್ನು ಆಲಿಸಿದರು ಹಾಗೂ ಎಸ್ ಸಿ ಕಾಲನಿಯ ಅಂಗನವಾಡಿ, ಕಾಲನಿ ಜನರ ನೀರಿನ ಸೌಕರ್ಯ, ಮೂಲಭೂತ ಸೌಕರ್ಯಗಳ ಕುರಿತು ಕಾಲನಿ ಜನರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ ಕುಂದು ಕೊರತೆಗಳನ್ನು ಅಳಿಸಿದರು.
ಗ್ರಾಮಕ್ಕೆ ಬೇಟಿ ನೀಡಿ ಮಾತನಾಡಿ ಇಲ್ಲಿನ ಜನರಿಗೆ ಸರ್ಕಾರದಿಂದ ಅನೇಕ ಸವಲತ್ತು ದೊರಕುತಿದ್ದು ಅದರ ಪ್ರಯೋಜನ ಪಡೆಯಲು ಜನಾಂಗದ ಜನರಿಗೆ ತಿಳಿಸಿದರು. ದಲಿತ ಮುಖಂಡ ಮನೋಜ ಕೆಳಗೇರಿ ಎ ಸಿ ಅವರಿಗೆ ಇಲ್ಲಿನ ಮಹಿಳೆಯರಿಗೆ ಶೌಚಾಲಯ ಸಮಸ್ಯ ಇದ್ದು ಅದರ ಅನುಕೂಲ ಕಲ್ಪಿಸಲು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಲ್ಲೂರ, ಗ್ರಾಮ ಲೆಕ್ಕಧಿಕಾರಿ ಬಸವರಾಜ ಕೆರಕನವರ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ ಕೆಳಗೇರಿ, ಶ್ರೀಮತಿ ಮಧುಮತಿ ಕೆಳಗೇರಿ ಹಾಗೂ ಊರಿನ ಪ್ರಮುಖರು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 