ಎ.ಬಿ. ಪಾಟೀಲರಿಗೆ ಸತ್ಕಾರ ಸಮಾರಂಭ- ಸುಭಾಷ ಕಾಸರಕರ
A.B. Patil's reception ceremony - Subhash Kasarakar
ಲೋಕದರ್ಶನ ವರದಿ
ಸಂಕೇಶ್ವರ 31: ಮಾಜಿ ಸಚಿವ ಎ.ಬಿ. ಪಾಟೀಲರ ಪ್ರಯತ್ನ ಹಾಗೂ ಮಾಜಿ ಸಂಸದ ರಮೇಶ ಕತ್ತಿಯವರ ಸಹಕಾರದಿಂದ ರಾಜ್ಯ ಸರ್ಕಾರದಿಂದ ದಿ. ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತಚ್ಛಕ್ತಿ ಸಹಕಾರಿ ಸಂಘಕ್ಕೆ ನಾಮನಿರ್ದೇಶಕರಾಗಿ ಸುಭಾಷ ಕಾಸರಕರ, ಆಯ್ಕೆಗೊಂಡಿದ್ದಾರೆ, ನಗರದಲ್ಲಿ ಎಲ್ಲ ಸಮಾಜದ ಬಾಂಧವರು ಸುಭಾಷ ಕಾಸರಕರ ಇವರನ್ನು ಎಲ್ಲೆಲ್ಲಿ ನೋಡಿದಲ್ಲಿ ಸತ್ಕಾರ ಸಮಾರಂಭ ಹಾಗೂ ಹೂಗುಚ್ಛೆ ನೀಡಿ ಸತ್ಕರಿಸುತ್ತಿದ್ದಾರೆ, ಇಂದು ಎಸ್.ಡಿ.ವ್ಹಿ.ಎಸ್. ಸಂಘದಲ್ಲಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲರಿಗೆ ದೊಡ್ಡ ಗಾತ್ರದ ಹೂಮಾಲೆ, ಶಾಲು, ಕಲರ ಪೇಟಾ ಮತ್ತು ಬೆಳ್ಳಿಯ ಢಾಲವನ್ನು ನೀಡಿ ಸುಭಾಷ ಕಾಸರಕರ ಹಾಗೂ ಎ.ಬಿ.ಪಾಟೀಲರ ಅನಯಾಯಿಗಳು ಸೇರಿಕೊಂಡು ಇವರನ್ನು ಇಂದು ಸತ್ಕರಿಸಿದರು.
ಈ ಸಮಾರಂಭದಲ್ಲಿ ಚಿದಾನಂದ ಕರ್ದನ್ನವರ, ಪಿಂಟೂ ಕೋಳಿ, ಕುಮಾರ ಕಬ್ಬೂರಿ, ಎಂ. ಬಿ. ಘಸ್ತಿ, ಪ್ರಕಾಶ ಇಟೇಕರ, ಅಲ್ತಾಫ ಶಾಯನ್ನವರ, ನ್ಯಾಯವಾದಿ ಪುಟ್ಟು ನೇಸರಿ, ಬಂಡು ಸೂರ್ಯವಂಶಿ ಹಾಗೂ ಮೊದಲಾದ ಎ.ಬಿ. ಪಾಟೀಲರ ಬಳಗವು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಮರಾಠಾ ಸಮಾಜದ ಅಧ್ಯಕ್ಷ ಅಪ್ಪಾ ಮೋರೆಯವರು ದಿ. ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘಕ್ಕೆ ನಮ್ಮ ಸಮಾಜದ ಯುವ ನಾಯಕ ಸುಭಾಷ ಕಾಸರಕರ ಇವರನ್ನು ನೇಮನೂಕ ಮಾಡಿದ್ದಕ್ಕೆ ಮಾಜಿ ಸಚಿವ ಎ.ಬಿ. ಪಾಟೀಲರಿಗೆ ಧನ್ಯವಾದಗಳನ್ನು ಹೇಳಿದರು,
ಇನ್ನೊರ್ವ ಎಂ.ಬಿ. ಘಸ್ತಿಯವರು ಮಾತನಾಡುತ್ತಾ ಕಳೆದ 35 ವರ್ಷಗಳಿಂದ ಈ ಸಮಾಜವು ಯಾವುದೇ ಸರ್ಕಾರದ ಹುದ್ದೆಗಳಿಂದ ವಂಚಿತರಾಗಿದ್ದು ಸುಭಾಷ ಕಾಸರಕರ ಇವರ ವ್ಯಕ್ತಿತ್ವ ಜನತೆಯ ಸಂಪರ್ಕ ಇವರ ಕಾಯಕ ಮತ್ತು ಇವರ ಗುಣಗಳನ್ನು ಅಳಿದು ತೂಗಿ ಇವರನ್ನು ಆಯ್ಕೆ ಮಾಡಿದ್ದಕ್ಕೆ ಎ.ಬಿ. ಪಾಟೀಲರಿಗೆ ಧನ್ಯವಾದಗಳನ್ನು ಹೇಳಿದರು, ಮುಂದುವರೆದು ಮಾತನಾಡುತ್ತಾ ರೈತರ ನಾಡಿ ಮಿಡಿತವಾದ ಸರಿಯಾಗಿ ವಿದ್ಯುತ ಪೂರೈಸಿ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಹೋಗಬೇಕೆಂದು ಸುಭಾಷ ಕಾಸರಕರ ಇವರಿಗೆ ಎಂ.ಬಿ. ಘಸ್ತಿಯವರು ಮನವಿ ಮಾಡಿದರು ಇದೆ ಸಂದರ್ಭದಲ್ಲಿ ಜನಪ್ರೀಯ ಎಸ್.ಡಿ.ವ್ಹಿ.ಎಸ್. ಸಂಘಕ್ಕೆ ನಿರ್ದೇಶಕರಾಗಿ ನೇಮನೂಕ ಮಾಡಿದ್ದಕ್ಕೆ ಸುಭಾಷ ಕಾಸರಕರ ಇವರ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 