ಎ. ಬಿ. ಪಾಟೀಲ ಜನ್ಮದಿನ: ಉಚಿತ ಆರೋಗ್ಯ ತಪಾಸಣೆ
A. B. Patil Birthday: Free Health Checkup
ಸಂಕೇಶ್ವರ 10: ಮಾಜಿ ಸಚಿವರು ಹಾಗೂ ಎಸ್ಡಿವಿಎಸ್ ಸಂಘದ ಅಧ್ಯಕ್ಷ ಎ. ಬಿ. ಪಾಟೀಲ್ ಅವರ 73ನೇ ಜನ್ಮದಿನದ ಅಂಗವಾಗಿ, ಎಸ್ಡಿವಿಎಸ್ ಸಂಘದ ಅನ್ನಪೂರ್ಣ ನರ್ಸಿಂಗ್ ಕಾಲೇಜು, ಸಂಕೇಶ್ವರದ ವತಿಯಿಂದ ಸಿಲ್ವರ್ಡೇಲ್ ಇವೆಂಟೈಡ್ ವೃದ್ಧಾಶ್ರಮ, ಸಂಕೇಶ್ವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಹಣ್ಣಿನ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜೊತೆಗೆ ಎಸ್ಡಿವಿಎಸ್ ಸಂಘದ ಎಲ್ಲಾ ಬೋಧಕ ಮತ್ತು ಇತರ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಮುದಾಯ ಆರೋಗ್ಯ ಕೇಂದ್ರ, ಸಂಕೇಶ್ವರದ ಸಹಯೋಗದಲ್ಲಿ ನಡೆಸಲಾಯಿತು.
ಸಂಘದ ಉಪಾಧ್ಯಕ್ಷ ಕಾಶೀನಾಥ ಶಿರಕೊಳಿ, ಸದಸ್ಯರು ಬಾಳಾಸಾಹೇಬ ವೈರಾಗಿ ಹಾಗೂ ವಿಶ್ವನಾಥ ತೋಡಕರ್, ಆಡಳಿತಾಧಿಕಾರಿ ಡಾ. ಬಿ. ಎ. ಪುಜಾರಿ ಹಾಗೂ ಪ್ರಾಂಶುಪಾಲ ಡಾ. ಬಸವರಾಜ ಎಸ್. ಹುಕ್ಕೇರಿ ಉಪಸ್ಥಿತರಿದ್ದರು. ಶಿಬಿರದಲ್ಲಿ 500ಕ್ಕೂ ಹೆಚ್ಚು ಬೋಧಕ ಮತ್ತು ಇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಲಾಭ ಪಡೆದರು.
ಶಿಬಿರದಲ್ಲಿ ತಪಾಸಣೆ, ದೇಹದ ತೂಕ ಹಾಗೂ ದೇಹದ ತೂಕ ಸೂಚ್ಯಂಕ (ಃಒಋ), ರಕ್ತದೊತ್ತಡ, ರಕ್ತದ ಸಕ್ಕರೆ ಪ್ರಮಾಣ ಹಾಗೂ ರಕ್ತದ ಗುಂಪು ತಪಾಸಣೆಗಳನ್ನು ನಡೆಸಲಾಯಿತು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶಿಬಿರದ ಆಯೋಜನೆ ಹಾಗೂ ಸಹಾಯ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಶಿಬಿರವು ಉತ್ತಮ ಪ್ರತಿಕ್ರಿಯೆ ಪಡೆಯುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಮುದಾಯದಲ್ಲಿ ಆರೋಗ್ಯ ಜಾಗೃತಿ ಮೂಡಿಸಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 