ಉತ್ತರ ಕನ್ನಡ ಜಿಲ್ಲೆಯಲ್ಲಿ 966 ಕುಟುಂಬಗಳಿಗೆ ಶೌಚಾಲಯವಿಲ್ಲ ! ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ 245992 ಶೌಚಾಲಯಗಳ ನಿರ್ಮಾಣ ನಾಗರಾಜ್ ಹರಪನಹಳ್ಳಿ
966 families in Uttara Kannada district do not have toilets! 245992 toilets have been constructed in
ಕಾರವಾರ 18 : ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಟುಂಬದ ಮನೆಗಳಿಗೆ ಶೌಚಾಲಯ ನಿರ್ಮಾಣ ಕಾರ್ಯ 2005 ರಿಂದ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ 245992 ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.ಇದೊಂದು ನಿರಂತರ ಪ್ರಕ್ರಿಯೆ. ಕುಟುಂಬಗಳು ಬೆಳೆದಂತೆ, ವಲಸೆ ಹೋದಂತೆ, ಹೊಸ ಹೊಸ ಕಡೆ ನೆಲೆ ನಿಂತಾಗ ಶೌಚಾಲಯ ನಿರ್ಮಾಣ ಯೋಜನೆಯ ಪ್ರಯೋಜನವನ್ನು ದುಡಿಯುವ ವರ್ಗ, ಕಾರ್ಮಿಕರು, ರೈತರು, ಮಹಿಳೆಯರು ಪಡೆಯುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರದ ನೆರವಿನ ಜೊತೆಗೆ ,ಸ್ವತಃ ಹಣ ಹಾಕಿ ಉತ್ತಮ ಗುಣಮಟ್ಟದ ಶೌಚಾಲಯ ವ್ಯವಸ್ಥೆಯನ್ನು ನಾಗರಿಕರು ಮಾಡಿಕೊಂಡಿದ್ದಾರೆ. ಅಂಕೋಲಾದ ಗ್ರಾಮೀಣ ಭಾಗದ ಜನ ಹಾಗೂ ನಗರದ ಬಿಪಿಎಲ್ ಕಾರ್ಡದಾರರು ಸೇರಿ ಒಟ್ಟು 24365 ಮನೆಗಳ ಕುಟುಂಬದ ಮುಖ್ಯಸ್ಥರು ಶೌಚಾಲಯ ನಿರ್ಮಾಣ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಭಟ್ಕಳ ತಾಲ್ಲೂಕಿನಲ್ಲಿ 25233, ದಾಂಡೇಲಿ 2233, ಹಳಿಯಾಳ 15279 , ಹೊನ್ನಾವರ 30269, ಕಾರವಾರ ತಾಲ್ಲೂಕಿನಲ್ಲಿ 18239, ಕುಮಟಾ ತಾಲ್ಲೂಕಿನಲ್ಲಿ 28936, ಮುಂಡಗೋಡ 16791, ಸಿದ್ದಾಪುರ 21726, ಶಿರಸಿ 30552, ಜೊಯಿಡಾ 13658, ಯಲ್ಲಾಪುರ 19612 ಕುಟುಂಬಗಳು ಶೌಚಾಲಯ ಹೊಂದಿವೆ . ಹೀಗೆ ಒಟ್ಟು ಜಿಲ್ಲೆಯಲ್ಲಿ 2,45,992 ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ.
966 ಕಡ ಶೌಚಾಲಯ ಸೌಲಭ್ಯ ಇಲ್ಲ : ಸ್ವಚ್ಚ ಭಾರತ ಮಿಷನ್ ಅಡಿ ಗ್ರಾಮೀಣಭಾಗದಲ್ಲಿ ವಯಕ್ತಿಕ ಗೃಹ ಶೌಚಾಲಯ ನಿರ್ಮಾಣ ಮಾಡಿಕೊಡಲಾಗುತ್ತಿದ್ದು, ಜಿಲ್ಲೆಯ 966 ಮನೆಗಳಿಗೆ ಶೌಚಾಲಯ ಸೌಲಭ್ಯ ಇಲ್ಲ. ಇದೀಗ 5085 ಶೌಚಾಲಯ ಇಲ್ಲದ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಇವುಗಳಲ್ಲಿ 4931 ಕುಟುಂಬಕ್ಕೆ ವಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಇದೆ ಎಂದು ಜಿಲ್ಲಾ ಪಂಚಾಯತ ಮಾಹಿತಿ ನೀಡಿದೆ. ತಾಲ್ಲೂಕವಾರು ಶೌಚಾಲಯ ಕೊರತೆ: ಅಂಕೋಲಾದಲ್ಲಿ 192 , ಭಟ್ಕಳ 1417, ದಾಂಡೇಲಿ 83, ಹಳಿಯಾಳ 198 , ಹೊನ್ನಾವರ 475, ಕಾರವಾರ 71, ಕುಮಟಾ 611, ಮುಂಡಗೋಡ 956, ಸಿದ್ದಾಪುರ 78, ಶಿರಸಿ 596, ಜೊಯಿಡಾ 203, ಯಲ್ಲಾಪುರ 205 ಕುಟುಂಬ ಗಳಿಗೆ ಶೌಚಾಲಯ ಇಲ್ಲ. ಹೀಗೆ ಒಟ್ಟು ಜಿಲ್ಲೆಯಲ್ಲಿ 5085 ಮನೆಗಳಿಗೆ ಶೌಚಾಲಯ ಬೇಕಾಗಿದೆ.ಇದರಲ್ಲಿ 4119 ಕಡೆ ಶೌಚಾಲಯ ನಿರ್ಮಾಣ ವಿವಿಧ ಹಂತದಲ್ಲಿ ಇದೆ. 966 ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಕೊರತೆ ಇದೆ. ವಲಸೆ ಬಂದವರು ಹಾಗೂ ಒಂದೇ ಕುಟುಂಬದಲ್ಲಿ ಮಕ್ಕಳ ಮದುವೆ ನಂತರ ವಿಭಜನೆಯಾದಾಗ ವಾಸದ ಮನೆ ಇದ್ದರೂ, ಶೌಚಾಲಯ ಇಲ್ಲದ ಸಮಸ್ಯೆ ಇದೆ. ..
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 