ಶಿವರಾತ್ರಿ ಪ್ರಯುಕ್ತ ಹನುಮಸಾಗರದಲ್ಲಿ 90ನೇ ತ್ರಿಮೂರ್ತಿ ಶಿವ ಜಯಂತಿ ಆಚರಣೆ
90th Trimurti Shiva Jayanti celebrated at Hanumasagar on the occasion of Shivaratri
ಹನುಮಸಾಗರ 17: “ಓಂ ಶಾಂತಿ ಎಂಬುದು ಕೇವಲ ಉಚ್ಚಾರಣೆಯ ಪದವಲ್ಲ; ಅದು ಆತ್ಮಶಾಂತಿ, ಮನಶ್ಶಾಂತಿ ಮತ್ತು ವಿಶ್ವಶಾಂತಿಯ ಸಂಕೇತವಾಗಿದೆ ಓಂ ಶಾಂತಿ ಸಂಚಾಲಕಿ ಉಮಾದೇವಿ ಹೇಳಿದರು.
ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಪಂಚಲಿಂಗೇಶ್ವರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಇಂದಿನ ವೇಗದ ಬದುಕಿನಲ್ಲಿ ಮಾನವರು ಹೊರಗಿನ ಸುಖವನ್ನು ಹುಡುಕುತ್ತಾ ಒಳಗಿನ ಶಾಂತಿಯನ್ನು ಮರೆತಿದ್ದಾರೆ. ಧ್ಯಾನ, ಸದಾಚಾರ ಮತ್ತು ಆತ್ಮಜ್ಞಾನದಿಂದ ಜೀವನದಲ್ಲಿ ನಿಜವಾದ ಶಾಂತಿ ದೊರೆಯುತ್ತದೆ. ಮಹಾಶಿವರಾತ್ರಿ ದಿನವು ಅಹಂಕಾರ ತ್ಯಜಿಸಿ ಪರಮಾತ್ಮನೊಂದಿಗೆ ಆತ್ಮಸಂಬಂಧ ಬೆಳೆಸುವ ಪವಿತ್ರ ಕ್ಷಣವಾಗಿದ್ದು, ಪ್ರತಿಯೊಬ್ಬರೂ ಓಂ ಶಾಂತಿ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯತೆ ವೃದ್ಧಿಸುತ್ತದೆ,” ಎಂದರು.
ಪಂಚಲಿಂಗೇಶ್ವರ ರಥಯಾತ್ರೆಯು ತೆರೆದ ವಾಹನದಲ್ಲಿ ದೇವಾಂಗ ಸಮುದಾಯದವರಿಂದ ಮೋಟಿಗೇರಿಸಿ ರೂಣಿ ಕಿರಿಶಿದ್ಧೇಶ್ವರ ಮಠ, ರಾಘವೇಂದ್ರ ಮಠ, ಜಾಗೀರ್ದಾರ್ ಓಣಿ ಮಾರ್ಗವಾಗಿ ಬನಶಂಕರಿ ದೇವಸ್ಥಾನ ತಲುಪಿತು. ಈ ವೇಳೆ ಓಂ ಶಾಂತಿ ಸದಸ್ಯರು ಶಿವರಾತ್ರಿಯ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಸಂದೇಶಗಳನ್ನು ಹರಡಿದರು. ಸುಮಂಗಳರಿಂದ ಕುಂಭ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಉಮ್ಮಕ್ಕ, ಬಸವರಾಜ ಸಿನ್ನೂರ, ಮೋಹನ ಸಿನ್ನೂರ, ವಿಶಾಲ ಸಿನ್ನೂರ, ಮಂಜುನಾಥ ಸಿನ್ನೂರ, ಸಂಗಮಕ್ಕ ಅಮ್ಮಣ್ಣವರ, ಸಾವಿತ್ರಿ ಸಿನ್ನೂರ, ಕಸ್ತೂರಿ ಸಿನ್ನೂರ, ಸುನಂದಾ ಸಿನ್ನೂರ, ಶಾಂತಕ್ಕ ಸಿನ್ನೂರ, ರೂಪಾ ಯರಗಲ್ಲ, ಪ್ರೇಮಾ ಶಿಲವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 