ಬ.ಸಾಲವಾಡಗಿ ಸಹಕಾರ ಸಂಘದ 83ನೇ ವಾರ್ಷಿಕ ಮಹಾಸಭೆ

ಬ.ಸಾಲವಾಡಗಿ ಸಹಕಾರ ಸಂಘದ 83ನೇ ವಾರ್ಷಿಕ ಮಹಾಸಭೆ  83rd Annual General Meeting of the B. Salavadagi Cooperative Society


ತಾಳಿಕೋಟಿ 17: ಬ.ಸಾಲವಾಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು, ಶೇರುದಾರರ ಸಹಕಾರ ಮತ್ತು ಪ್ರೇರಣೆಯಿಂದ ಪ್ರಸಕ್ತ ಸಾಲಿನಲ್ಲಿ 5.19 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚನ್ನಪ್ಪಗೌಡ ಬ.ಹೊರಗಿನಮನಿ ಹೇಳಿದರು.  ತಾಳಿಕೋಟಿ ತಾಲೂಕಿನ ಬ.ಸಾಲವಾಡಗಿ ಗ್ರಾಮದ ಸಂಘದ ಕಾರ್ಯಾಲಯದ ಆವರಣದಲ್ಲಿ ಸೋಮವಾರ ನಡೆದ ಸಂಘದ 83ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸಂಘವು ಪ್ರಸಕ್ತ ಸಾಲಿನಲ್ಲಿ 1,180 ಶೇರುದಾರ ಸದಸ್ಯರನ್ನು ಹೊಂದಿದ್ದು, 35 ಲಕ್ಷ ಠೇವಣಿ ಸಂಗ್ರಹಿಸಿದೆ. ಶೇರುದಾರರು ತಮ್ಮ ಠೇವಣಿಗಳನ್ನು ಸಂಘದಲ್ಲಿಯೇ ಇಡುವ ಮೂಲಕ ಸಂಘದ ಆರ್ಥಿಕ ಬಲವರ್ಧನೆಗೆ ಸಹಕರಿಸಬೇಕು. ಇದರಿಂದ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಮುಂದಿನಮನಿ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ, ಶೇರುದಾರರು ಕೇಳಿದ ಪ್ರಶ್ನೆಗಳಿಗೆ ಸಮರ​‍್ಕವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು.  

ಇದೇ ಸಂದರ್ಭದಲ್ಲಿ ಅಧ್ಯಕ್ಷ ಚನ್ನಪ್ಪಗೌಡ ಹೊರಗಿನಮನಿ ಅವರನ್ನು ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಂ. ಪೊಲೀಸ್ ಪಾಟೀಲ, ರಾಜುಗೌಡ ಯಾಳಗಿ, ಗುರ​‍್ಪಗೌಡ ಪಾಟೀಲ, ಮಲ್ಲನಗೌಡ ಬಸರಡ್ಡಿ, ಸಂಘದ ಉಪಾಧ್ಯಕ್ಷ ಹೋಬು ರಾಠೋಡ, ನಿರ್ದೇಶಕರು ಹಾಗೂ ಸಿಬ್ಬಂದಿ ಮತ್ತು ಸಂಘದ ಶೇರುದಾರರು ಉಪಸ್ಥಿತರಿದ್ದರು.