ಸಿಡ್ನಿ, ಡಿ 21 ಆಸ್ಟ್ರೇಲಿಯಾ
ರಾಜಧಾನಿ ಸಿಡ್ನಿ ಸುತ್ತ ವ್ಯಾಪಿಸಿರುವ ಕಾಡ್ಗಿಚ್ಚನ್ನು ನಂದಿಸುವ ಕೆಲಸದಲ್ಲಿ ತೊಡಗಿದ್ದ ಇಬ್ಬರು
ಹವ್ಯಾಸಿ ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ.ಕಾಡ್ಗಿಚ್ಚಿನಿಂದಾಗಿ ಈವರೆಗೆ 8 ಜನರು ಮೃತಪಟ್ಟಿದ್ದಾರೆ
ಹಾಗೂ 700ಕ್ಕೂ ಅಧಿಕ ಮನೆಗಳು ಸುಟ್ಟುಹೋಗಿವೆ. ಸುಮಾರು 30 ಲಕ್ಷ ಎಕರೆ ಅರಣ್ಯ ನಾಶವಾಗಿದೆ ಎಂದು
ಅಧಿಕಾರಿಗಳು ತಿಳಿಸಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ
ಅಮೆರಿಕದ ಹವಾಯಿ ದ್ವೀಪದ ಪ್ರವಾಸದಲ್ಲಿರುವ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಪ್ರವಾಸ ಮೊಟಕು ಮಾಡಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ.