ಕಳೆದುಹೋದ 8 ಸ್ಮಾರ್ಟಪೋನ್ಗಳು ಪತ್ತೆ; ವಾರಸುದಾರರಿಗೆ ಹಸ್ತಾಂತರ
8 lost smartphones traced; handed over to their owners
ಮುಂಡಗೋಡ 07: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಮುಂಡಗೋಡ ಪೊಲೀಸ್ ಠಾಣೆಗೆ ವಾರ್ಷಿಕ ತಪಾಸಣೆ ನಿಮಿತ್ತ ಭೇಟಿ ನೀಡಿ ಠಾಣೆಯ ಆಡಳಿತಾತ್ಮಕ ದಾಖಲೆಗಳು ಹಾಗೂ ಪ್ರಕರಣಗಳ ಕಡತಗಳನ್ನು ಪರೀಶೀಲಿಸಿದರು. ಈ ವೇಳೆ ಸಾರ್ವಜನಿಕರು ವಿವಿಧೆಡೆ ಕಳೆದುಕೊಂಡಿದ್ದ 8 ಸ್ಮಾರ್ಟ್ಫೋನ್ಗಳನ್ನು ಸಿಇಐಆರ್ ತಂತ್ರಜ್ಞಾನ ಹಾಗೂ ಪೊಲೀಸರ ನಿರಂತರ ಪ್ರಯತ್ನದಿಂದ ಪತ್ತೆ ಹಚ್ಚಲಾಗಿದ್ದು, ಪತ್ತೆಯಾದ ಮೊಬೈಲ್ಗಳನ್ನು ಎಸ್ಪಿ ದೀಪನ್ ಅವರು ಮೂಲ ವಾರಸುದಾರರಿಗೆ ಹಸ್ತಾಂತರಿಸಿದರು.
ಮೊಬೈಲ್ ಗಳನ್ನು ಮರಳಿ ಪಡೆದ ಸಾರ್ವಜನಿಕರು ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿಯ ಸಂಕೇತವಾಗಿ ಎಸ್ಪಿ ದೀಪನ್ ಅವರು ಠಾಣೆ ಆವರಣದಲ್ಲಿ ಸಸಿ ನೆಟ್ಟು, ಠಾಣೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಹಾಗೂ ಹಸಿರಾಗಿಡುವಂತೆ ಸಿಬ್ಬಂದಿಗೆ ಕರೆ ನೀಡಿದರು. ಡಿವೈಎಸ್ಪಿ ಗೀತಾ ಪಾಟೀಲ, ಸಿಪಿಐ ರಮೇಶ್ ಹಾನಪೂರ, ಪಿಎಸ್‌ಐ ಮಂಜುನಾಥ ಗೌಡರ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 