ಸಿರಿಯಾ ತೈಲಾಗಾರ ಗುರಿಯಾಗಿಸಿ ಇರಾಕ್ ಮಿಲಿಟರಿ ಗಡಿಯಲ್ಲಿ ಅಪ್ಪಳಿಸಿದ ಯುದ್ಧ ವಿಮಾನ : 8 ಸಾವು

ಡಮಾಸ್ಕಸ್, ಜ 10 :              ಗಡಿ ಸಮೀಪದ ಸಿರಿಯನ್ ನೆಲದಲ್ಲಿ ಇರಾಕ್ನ ಅರೆಸೈನಿಕ ಹಶ್ದ್ ಶಾಬಿ ಯೋಧರ ನೆಲೆಗಳನ್ನು ಗುರಿಯಾಗಿಸಿ ಯುದ್ಧ ವಿಮಾನಗಳು ಅಪ್ಪಳಿಸಿದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದಾರೆ. 

ಹಶ್ದ್ ಶಾಬಿಯದ ಶಸ್ತ್ರಾಸ್ತ್ರ ಡಿಪೋ ಮತ್ತು ಮಿಲಿಟರಿ ವಾಹನಗಳು ದಾಳಿಗೆ ಒಳಗಾದವು ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.    

ಈ ದಾಳಿ ನಡೆದ ಪ್ರದೇಶದಲ್ಲಿ ಇರಾನ್ ಬೆಂಬಲಿತ ಹೋರಾಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದರು ಎಂದು ಬ್ರಿಟನ್ ಮೂಲದ ವೀಕ್ಷಣಾ ಸಂಸ್ಥೆ ತಿಳಿಸಿದೆ. ಅಮೆರಿಕ ಮೈತ್ರಿಗೆ ಡ್ರೋನ್ ಗಳು ಸೇರಿರಬಹುದು ಎಂದೂ ಸಹ ಈ ಸಂಸ್ಥೆ ತಿಳಿಸಿದೆ.   

ಇರಾನ್ನ ಅಲ್-ಕುಡ್ಸ್ ಪಡೆಗಳ ಕಮಾಂಡರ್ ಮತ್ತು ಹಶ್ದ್ ಶಾಬಿ ಪಡೆಗಳ ಮುಖ್ಯಸ್ಥ ಕಾಸ್ಸೆಮ್ ಸೊಲೈಮಾನ್ ಹಾಗೂ ಅಬು-ಮಹ್ದಿ ಅಲ್-ಮುಹಂದಿಸ್ ರನ್ನು ಒಂದು ವಾರದ ಹಿಂದೆ ಅಮೆರಿಕ ಹತ್ಯೆ ಮಾಡಿತ್ತು. 

ಸೊಲೈಮಾನಿ ಮತ್ತು ಅಲ್-ಮುಹಂದಿಗಳ ಹತ್ಯೆಯ ನಂತರ ಇರಾನ್ ಬೆಂಬಲಿತ ಪಡೆಗಳು ಪುನಃ ನಿಯೋಜನೆಗೊಂಡಿವೆ ಎಂದು ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್-ರಹಮಾನ್ ಹೇಳಿದ್ದಾರೆ.