ಮೈಸೂರಿನ ನಂಜನಗೂಡಿನಲ್ಲಿ 8 ಕೊರೋನಾ ಪ್ರಕರಣ, ಸೋಂಕಿತರ ಸಂಖ್ಯೆ 277ಕ್ಕೇರಿಕೆ

ಬೆಂಗಳೂರು, ಏ 15, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೈಸೂರಿನ ನಂಜನಗೂಡು ಒಂದಲ್ಲೇ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಲಬುರಗಿಯ 1 ವರ್ಷದ ಮಗುವಿಗೆ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 17 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೃತರ ಸಂಖ್ಯೆ 11ಕ್ಕೇರಿಕೆಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೇರಿಕೆಯಾಗಿದೆ. ಮೈಸೂರಿನ ನಂಜನಗೂಡಿನಲ್ಲೇ 8 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ನಂಜನಗೂಡಿನ 41, 30, 27,35,26,35,32 ವರ್ಷದ ವ್ಯಕ್ತಿಗಳಿಗೆ ಸೋಂಕು ತಗಲಿದೆ. ಜೊತೆಗೆ,ಕಲಬುರಗಿಯ ಒಂದು ವರ್ಷದ ಇನ್ ಫ್ಲ್ಯುಯೆನ್ಸಾ ಲೈಕ್ ಇಲ್ ನೆಸ್ ಎಂಬ ರೋಗಕ್ಕೆ ತುತ್ತಾಗಿದೆ. ಬಿಬಿಎಂಪಿ ವ್ಯಾಪ್ತಿಯ 59 ವರ್ಷದ ವೃದ್ಧ, ಬಾಗಲಕೋಟೆಯ 52 ವರ್ಷದ ವ್ಯಕ್ತಿ, ಬಾಗಲಕೋಟೆ ಜಮಖಂಡಿಯ 39 ವರ್ಷದ ವ್ಯಕ್ತಿ,  ಮೈಸೂರಿನ 28, 72 ವರ್ಷದ ವ್ಯಕ್ತಿ, ವಿಜಯಪುರದ 38 ವರ್ಷದ ಮಹಿಳೆ ಮತ್ತು 25 ವರ್ಷದ ವ್ಯಕ್ತಿ ಮತ್ತು ಬೆಂಗಳೂರು ನಗರದ 32 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದ 65 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ವ್ಯಕ್ತಿಯಲ್ಲಿ ಎನ್ 1ಎನ್1, ಅತಿಯಾದ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.