ಜು.10ರಂದು ಸಾಯಿ ಮಂದಿರದ 7ನೇ ವಾರ್ಷಿಕೋತ್ಸವ
7th anniversary of Sai Mandir on July 10th
ಕುಕನೂರು 04: ಪಟ್ಟಣದ ಗವಿಶ್ರೀ ನಗರದ ಶಿರಿಡಿ ಸಾಯಿ ಸೇವಾಶ್ರಮ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮಾ ಜು.10ರ ಗುರುವಾರದಂದು ಸಾಯಿ ಮಂದಿರದ 7ನೇ ವಾರ್ಷಿಕೋತ್ಸವದ ನಿಮಿತ್ಯ ವಿಶೇಷ ಪೂಜೆ ಮತ್ತು ಪ್ರಸಾದ ಸೇವೆ ಆಯೋಜಿಸಲಾಗಿದೆ ಎಂದು ಸೇವಾ ಟ್ರಸ್ಟ್ ತಿಳಿಸಿದೆ.ಅಂದು ಬೆಳಿಗ್ಗೆ 5.15 ಕ್ಕೆ ಶ್ರೀ ಶಿರಡಿ ಸಾಯಿಬಾಬಾರವರಿಗೆ ಕಾಕಡಾರತಿ, 6ಗಂಟೆಗೆ ಸುಪ್ರಭಾತ, 7 ಗಂಟೆಗೆ ವಿಷೇಶ ಅಭಿಷೇಕ,8ಗಂಟೆಗೆ ಬಾಬಾ ಅವರ ವಿರಾಟಸಾಯಿ ಸ್ತೋತ್ರ ಪಠಣ ಮತ್ತು ದೈನಂದಿನ ಪ್ರಾರ್ಥನೆ ಜರುಗುವುದು.10 ಗಂಟೆಗೆ ಸಾಯಿ ಭಕ್ತರಿಂದ ಗುರುಪೂರ್ಣಿಮೆಯ ವಿಶೇಷ ಬಾಬಾ ಅವರ ಭಜನೆಯ ಹಾಡುಗಳು ಹಾಗೂ ಪೂಜ್ಯ ಗುರುದೇವರು ಅಮ್ಮುಲ ಸಾಂಬಶಿವರಾವ್ ರವರು ರಚಿಸಿದ ಅಮ್ಮುಲ ಶಿರಡಿ ಸಾಯಿ ತತ್ವ ಬೋಧಾಮೃತಂ ಪುಸ್ತಕಗಳಿಂದ ಸತ್ಸಂಗ ಪ್ರಸಂಗಗಳು ನಡೆಯುವುದು.ಮಧ್ಯಾಹ್ನ 12ಗಂಟೆಗೆ ಮಧ್ಯಾಹ್ನದ ಆರತಿ.12.30 ಕ್ಕೆ ಸಾಯಿ ಚರಿತೆ. ನಂತರ ಮಧ್ಯಾಹ್ನ 1 ರಿಂದ ಪ್ರಸಾದ ವಿತರಣೆ ನಡೆಯುವುದು. ಸಾಯಂಕಾಲ 6.15 ಕ್ಕೆ ಆರತಿ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಅಮ್ಮುಲ ಸಾಂಬ ಶಿವರಾವ್ ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 