ತಡವಲಗಾದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ
79th Independence Day celebrations in Tadawalaga
ಇಂಡಿ 15: ತಾಲೂಕಿನ ತಡವಲಗಾ ಗ್ರಾಮದ ವಿವಿಧಡ 79ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ತಡವಲಗಾ ಗ್ರಾಮ ಪಂಚಾಯಿತಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ನಂತರ ತಡವಲಗಾ ಮರುಳಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಡವಲಗಾ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುನಂದಾ ವಾಲಿಕಾರ ಅವರು ಮಕ್ಕಳು ದೇಶ ಅಭಿಮಾನ ಉತ್ತಮ ಸಂಸ್ಕಾರಯುತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗದಲ್ಲಿ ತೊಡಗಿ ತಂದೆ ತಾಯಿ ರುಣ ಮುಟ್ಟಿಸಬೇಕು. ಅದರಂತೆ ಹೆಣ್ಣು ಮಕ್ಕಳು ಕೂಡಾ ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಅದರಂತೆ ತಡವಲಗಾ ಗ್ರಾಮ ಮರುಳಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಕಲಿತ ವಿಧ್ಯಾರ್ಥಿನಿ ಒಬ್ಬಳು ಅಗ್ನಿ ವೀರ ಸೇನಾನಿಯಾಗಿ ಪಶ್ಚಿಮ ಬಂಗಾಳದಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ ಅವಳ ಧೈರ್ಯ ಹಾಗೂ ಸಾಧನೆ ಮುಂದಿನ ಮಕ್ಕಳಿಗೆ ದಾರಿ ದೀಪ ಹಾಗೂ ಶಾಲೆ ಜೀವಂತ ದೇವಾಲಯ ಶಾಲೆಯ ಆವರಣದಲ್ಲಿ ಎಲ್ಲರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ದಿವ್ಯ ಸಾನ್ನಿಧ್ಯವನ್ನು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದ ಅವರು ವಿದ್ಯಾರ್ಥಿಗಳು ದೇವರ ಸಮಾನ ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ನಿರ್ಮಾಣ ಪ್ರಜೆಗಳು ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.
ಚಂದ್ರಶೇಖರ ರೂಗಿ, ರಮೇಶ ಹೊಸಮನಿ, ಅಶೋಕ ಮಿರ್ಜಿ, ನಾಗಪ್ಪ ಮಕಣಿ, ಮಾಜಿ ಸೈನಿಕರಾದ ದವಲಸಾಬ್ ಬಾಗವಾನ, ಉಸ್ಮಾನ್ ಕಸ್ಸಾಬ, ರವಿ ಹೊಸಮನಿ, ಸಂತೋಷ್ ಸಾರಾವಾಡ, ವಿಠೋಬಾ ವಿಜಯಪೂರ, ಶೇಖರ ಕಳವಂತ ಹಾಗೂ ವಿವಿಧ ಶಾಲೆಗಳ ಮುಖ್ಯ ಗುರುಗಳಾದ ಎಸ್ ಬಿ ನಾರಯಣಕರ ಆರ್ ಎಸ್ ದೊಡ್ಡಮನಿ, ಎ ಎನ್ ರಾಠೋಡ, ಜಿ ಸಿ ಗೌರ್ ಎಸ್ ಎಸ್ ಬಜೇಂತ್ರಿ ಹಾಗೂ ಗುರುಗಳು ಗುರುಮಾತೆಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಪ್ರಹ್ಲಾದ್ ಬಗಲಿ ಅವರು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 