ಕಾಗವಾಡದಲ್ಲಿ 79 ನೇ ಸ್ವಾತಂತ್ರೋತ್ಸವ ಸಂಭ್ರಮ

ಕಾಗವಾಡದಲ್ಲಿ 79 ನೇ ಸ್ವಾತಂತ್ರೋತ್ಸವ ಸಂಭ್ರಮ 79th Independence Day celebrations in Kagawad

ಕಾಗವಾಡ, 15 ; ಪಟ್ಟಣದಲ್ಲಿ ಶುಕ್ರವಾರ ದಿ. 15 ರಂದು 79 ನೇ ಸ್ವಾತಂತ್ರೋತ್ಸವದ ನಿಮಿತ್ಯವಾಗಿ ಬೆಳಿಗ್ಗೆ 8 ಗಂಟೆಗೆ ತಹಶೀಲ್ದಾರ ಕಾರ್ಯಾಲದಲ್ಲಿ ಧ್ವಜಾರೋಹಣ ನೆರವೇರಿತು.  

ನಂತರ ತಾಲೂಕಾಡಳಿತ ಮತ್ತು ಪೋಲಿಸ್ ಇಲಾಖೆ, ವಿವಿಧ ಶಾಲಾ ಕಾಲೇಜುಗಳ ವತಿಯಿಂದ ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದ ಮೈದಾನದಲ್ಲಿ ತಹಶೀಲ್ದಾರ ರವೀಂದ್ರ ಹಾದಿಮನಿ ಧ್ವಜಾರೋಹಣ ನೆರವೇರಿಸಿರು. ಈ ವೇಳೆ ಕಾಗವಾಡ ಪೋಲಿಸ್ ಠಾಣೆಯ ಸಿಬ್ಬಂದಿ, ಶಿವಾನಂದ ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಮಾಜಿ ಸೈನಿಕರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಮಾಡಿದರು. 

ಈ ಮಧ್ಯೆ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಇದಕ್ಕೂ ಮೊದಲು ಪಟ್ಟಣದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ, ಪಟ್ಟಣ ಪಂಚಾಯತಿ ಕಾರ್ಯಾಲಾಯ, ಶಾಲಾ ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ, ಪೋಲಿಸ್ ಠಾಣೆಯಲ್ಲಿ ಧ್ವಜಾರೋಹಣ ನೆರವೇರಿತು.  

ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಉಪತಹಶೀಲ್ದಾರ ರಷ್ಮಿ ಜಕಾತಿ, ಅಣ್ಣಾಸಾಬ ಕೋರೆ, ತಾ.ಪಂ. ಎಇಓ ವೀರಣ್ಣಾ ವಾಲಿ, ಬಿಇಓ ಪಾಂಡುರಂಗ ಮದಭಾವಿ, ಸಿಡಿಪಿಓ ಸಂತೋಶಕುಮಾರ ಸದಲಗಿ, ಪಿಎಸ್‌ಐ ರಾಘವೇಂದ್ರ ಖೋತ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ, ಶಿವಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್‌.ಪಿ. ತಳವಾರ, ಶಿರಸ್ತೆದಾರರ ಎಂ.ಆರ್‌. ಪಾಟೀಲ, ವಿಜಯ ಚೌಗುಲೆ, ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ದು, ಒಡೆಯರ, ಗಣೇಶ ಕೋಳೆಕರ ಸೇರಿದಂತೆ ಪಟ್ಟಣದ ಗಣ್ಯರು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ, ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.