76ನೇ ದಿನ ಕ್ವಿಟ್ ಬಲ್ಡೋಟಾ ಕಾರ್ಖಾನೆ ವಿರೋಧಿ ಧರಣಿ ಯಶಸ್ವಿ
76th day of Quit Baldota factory protest successful
ಕೊಪ್ಪಳ 14 : ನಗರಸಭೆ ಮುಂದುಗಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ್ ಸುಮಿ, ಎಕ್ಸ್ ಇಂಡಿಯಾ, ತನುಷ್, ದೃವದೇಶ ಸೇರಿದಂತೆ ಅನೇಕ ಪರಿಸರ ಮಾರಕ ಕಾರ್ಖಾನೆ ವಿರೋಧಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ 76 ದಿನ ಪೂರೈಸಿತು.
ಕ್ವಿಟ್ ಬಲ್ಡೋಟಾ ಹೆಸರಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ಬಲ್ಡೋಟಾ ಅಲ್ಲದೇ ಮಾಲಿನ್ಯಕಾರಕ ಇತರೆ ಕಾರ್ಖಾನೆಗಳ ವಿಸ್ತರಣೆ ನಿಲ್ಲಿಸುವದು, ನದಿಗೆ ಬಿಡುತ್ತಿರುವ ಮಾಲಿನ್ಯವನ್ನು ತಡೆಯುವದು, ಬಲ್ಡೋಟಾ ವಶಪಡಿಸಿಕೊಮಡ ಭೂಮಿಯನ್ನು ಮರಳಿ ರೈತರಿಗೆ ಕೊಡುವದು ಸೇರಿದಂತೆ ವಿವಿಧ ಬೇಡಿಕೆಗಳ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಪುರ ಪ್ರಮುಖರು, ಬಾಧಿತ ಹಳ್ಳಿಗಳ ರೈತರನ್ನು ಮತ್ತು ಇದುವರೆಗೆ ಬೆಂಬಲಕ್ಕೆ ಬಂದ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆಯಲು ಯೋಜನೆ ಇದ್ದು, ಜಾತ್ರೆ ನಂತರ ಈ ಸಭೆ ನಡೆಸಲಾಗುತ್ತದೆ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯರು ಬಿ.ಜಿ. ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ನಿವೃತ್ತ ನ್ಯಾಯಾಂಗ ಇಲಾಖೆ ಅಧಿಕಾರಿ, ಜಿ. ಬಿ. ಪಾಟೀಲ್, ಮಂಜುನಾಥ ಜಿ. ಗೊಂಡಬಾಳ, ಗಂಗಾಧರ ಖಾನಾಪುರ, ಪ್ರಕಾಶಕ ಡಿ.ಎಂ. ಬಡಿಗೇರ, ರವಿ ಕಾಂತನವರ, ಮಹಾದೇವಪ್ಪ ಎಸ್. ಮಾವಿನಮಡು, ಗಂಗಮ್ಮ ಕುರುಗೋಡು, ಪಾಪುಸಾಬ ಮುಲ್ಲಾ, ಹನುಮಂತಪ್ಪ ಚಿಕೇನಕೊಪ್ಪ, ರಾಜ್ಯ ರೈತ ಸಂಘದ ಅಂದಪ್ಪ ಹುರಳಿ ಪಾಲ್ಗೊಂಡರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 