76 ನೇ ವಾರ್ಷಿಕ ಸರ್ವಸಾಧಾರಣ ಸಭೆ
76th Annual General Meeting
ಅಥಣಿ 18: ನದಿ ಇಂಗಳಗಾಂವ ಗ್ರಾಮದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 20, 83, 788 ಲಾಭ ಗಳಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ವಿಠ್ಠಲ್ ರಾಚಗೌಡ ಹೇಳಿದರು. ಅವರು ಸಂಘದ 76 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಕೃತ ಬ್ಯಾಂಕುಗಳಂತೆ ಠೇವುಗಳಿಗೆ ಆಕರ್ಷಕ ಬಡ್ಡಿ ದರ ಕೊಟ್ಟಿರುವ ಪರಿಣಾಮ 12 ಕೋಟಿಯಷ್ಟು ಠೇವಣಿ ಸಂಗ್ರಹಿಸಲಾಗಿದೆ ಎಂದ ಅವರು ಸಂಘದ ಶೇರು ಬಂಡವಾಳ ಪ್ರಸಕ್ತ ವರ್ಷದಲ್ಲಿ ಅಂದಾಜು 1 ಕೋಟಿ 66 ಲಕ್ಷ 59 ಸಾವಿರಷ್ಟಾಗುವ ಮೂಲಕ ಸಂಘ ಪ್ರಗತಿ ಹೊಂದಿದೆ ಮತ್ತು ಕಳೆದ ವರ್ಷಕ್ಕಿಂತ 15 ಸದಸ್ಯರ ಸಂಖ್ಯೆ ಹೆಚ್ಚಾಗುವ ಮೂಲಕ ವರ್ಷದ ಕೊನೆಗೆ 1857 ಸದಸ್ಯರಿದ್ದಾರೆ ಎಂದರು.
ಸಂಘ ವರದಿ ವರ್ಷದಲ್ಲಿ ಒಟ್ಟು 56 ಕೋಟಿ 66 ಲಕ್ಷ 59 ಸಾವಿರದ 398 ವ್ಯವಹಾರ ಮಾಡಿದ್ದು, ಇದು 76 ವರ್ಷಗಳಲ್ಲಿಯೇ ದಾಖಲೆ ಮಟ್ಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ವ್ಯವಹಾರ ಮಾಡುವ ಮೂಲಕ ಸಹಕಾರಿ ಸಂಘ ಗಟ್ಟಿಯಾಗಿದೆ ಎಂದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಮೋದ ಕುಲಕರ್ಣಿ ಮಾತನಾಡಿ, ನಮ್ಮ ಸಹಕಾರಿ ಸಂಘ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆಯವರ ಮಾರ್ಗದರ್ಶನದಲ್ಲಿ ಮತ್ತು ಸಂಘದ ಅಧ್ಯಕ್ಷ ವಿಠ್ಠಲ್ ರಾಚಗೌಡ ಅಧ್ಯಕ್ಷತೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಸುತ್ತಿದೆ ಎಂದ ಅವರು 2024-25 ನೇ ಸಾಲಿನಲ್ಲಿ ಅಡಿಟ್ ವರ್ಗೀಕರಣದಲ್ಲಿ ’ಅ’ ವರ್ಗದಲ್ಲಿ ಬಂದಿರುವುದು ಸಂತೋಷದ ಸಂಗತಿಯಾಗಿದ್ದು, ಸಂಘದ ಸದಸ್ಯರು ಮೊದಲಿನಂತೆ ಸಂಘದಿಂದ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿಯೇ ಮರು ಪಾವತಿ ಮಾಡಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶೇಖರ ಮೋಕಾಶಿ, ನಿರ್ದೇಶಕ ಮಂಡಳಿಯ ಚಿತ್ರವ್ವಾ ಪಾಟೀಲ, ಸುರೇಖಾ ಅಂಬಿ, ನಾಗಪ್ಪ ಡಾಬೋಳಿ, ಗುರಯ್ಯ ಮಠಪತಿ, ಮಹಾಂತೇಶ ರಾಚಗೌಡರ, ಅಕ್ಬರ್ ನನ್ನೆ, ಅರುಣಕುಮಾರ ಚನಗೌಡರ, ಕಲ್ಲಪ್ಪ ಠಕ್ಕಣ್ಣವರ, ಸಾತಪ್ಪಾ ತಳವಾರ, ಬಸಪ್ಪಾ ಮಾಂಗ, ಶಿವಾನಂದ ಢವಳೇಶ್ವರ ಸೇರಿದಂತೆ ಸಂಘದ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 