ಪಟ್ಟಣಕುಡಿ ಎಸ್ಸಿ-ಎಸ್‌ಟಿ ಕಾಲನಿಗಳ ಅಭಿವೃದ್ಧಿಗೆ 75 ಲಕ್ಷ ಅನುದಾನ

ಪಟ್ಟಣಕುಡಿ ಎಸ್ಸಿ-ಎಸ್‌ಟಿ ಕಾಲನಿಗಳ ಅಭಿವೃದ್ಧಿಗೆ 75 ಲಕ್ಷ ಅನುದಾನ 75 lakh grant for the development of SC-ST colonies in Pattanakudi

ಚಿಕ್ಕೋಡಿ 25 : ತಾಲೂಕಿನ ಪಟ್ಟಣಕುಡಿ ಗ್ರಾಮದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಒಟ್ಟು ರೂ. 75 ಲಕ್ಷಗಳ ಅನುದಾನ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ಗ್ರಾಮಸ್ಥರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾಧರ ಕಾಗೆ, ನಮ್ಮ ನಾಯಕರಾದ ಪ್ರಕಾಶ ಬಾ. ಹುಕ್ಕೇರಿ (ವಿಧಾನ ಪರಿಷತ್ ಸದಸ್ಯರು ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳು) ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಅವರಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ ಕಾಲನಿಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೆವು.

ನಮ್ಮ ಮನವಿಗೆ ಸ್ಪಂದಿಸಿ ಎಸ್ಸಿ ಕಾಲನಿಗೆ ರೂ. 25 ಲಕ್ಷ ಹಾಗೂ ಎಸ್ಟಿ ಕಾಲನಿಗೆ ರೂ. 50 ಲಕ್ಷಗಳ ಅನುದಾನ ಮಂಜೂರು ಮಾಡಲಾಗಿದೆ. ಈ ಮೂಲಕ ಒಟ್ಟು ರೂ. 75 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ ಡಿಗ್ರೆ, ರಾಜು ಮುಲ್ಲಾ, ಲಕನ ಪರಿಟ, ಶಾನಬಾಜ್ ಮುಲ್ಲಾ, ಅನೀಲ ಮಾಳಿ, ರೋಹಿತ್ ಕಾಗೆ, ರಾಜು ಕುರಣೆ, ಅಣ್ಣಪ್ಪಾ ಬೇರಡ, ಅಣ್ಣಪ್ಪಾ ನಾಯಿಕ, ಅಪ್ಪಯ್ಯಾ ಟಾಕಳೆ, ಬಾಬಾಲಾಲ್ ಖಾನಾಪೂರೆ, ಅಪ್ಪಾಸಾಬ ಧನಗರ, ಶಿವಪ್ಪಾ ಕುರಣೆ, ದೇವಲ್ ನಾಯಿಕ, ಬಾಳು ಕುರಣೆ,

ಸಿದ್ದು ನಾಯಿಕ, ಪರಶುರಾಮ ದೇಸಾಯಿ, ಸಂದೀಪ್ ಕುರಣೆ, ರವಿ ಕುರಣೆ, ಯುನೂಸ್ ಗಳತಗೆ, ಸಂಜು ನಾಯಿಕ, ಅಕ್ಬರ್ ತಹಶೀಲ್ದಾರ್, ಸದಾಶಿವ ಖವಟಕೊಪ್ಪ, ಅಲ್ಲಾಬಕ್ಷ ಖಾನಾಪೂರೆ, ಗಂಗಾರಾಮ ಕಾಗೆ, ಅಜೀತ್ ಕಾಂಬಳೆ, ಅಪ್ಪಾ ಕಾಂಬಳೆ, ಲಕ್ಷ್ಮಣ ನವಲೆ, ವಿಶಾಲ್ ಭಾಕವೆ, ಶ್ರೀರಂಗ ಕಾಂಬಳೆ, ಸಚಿನ್ ದೇಶಮಾನೆ, ಸೌರಭ ಡಿಗ್ರೆ, ಕಾಕಾಸಾಬ ಕಾಂಬಳೆ, ಸುರೇಶ್ ಕಾಂಬಳೆ, ಪೋಪಟ್ ಕಾಂಬಳೆ, ಸೂರ್ಯಕಾಂತ ಕಾಂಬಳೆ ಸೇರಿದಂತೆ ಗ್ರಾಮಸ್ಥರು, ಸಹಕಾರ ಸಂಘಗಳ ಅಧ್ಯಕ್ಷರು-ಉಪಾಧ್ಯಕ್ಷರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ರಾಮನಗೌಡ ಪಾಟೀಲ, ರಾಜಕುಮಾರ ಬಾಗಲಕೋಟೆ ಹಾಗೂ ಗುತ್ತಿಗೆದಾರ ಈರ​‍್ಪ ಮಲಕಾಪೂರೆ, ರಾಜು ಹಕಾರೆ ಉಪಸ್ಥಿತರಿದ್ದರು.