ಶಾರದಾ ವಿದ್ಯಾ ಸಂಸ್ಥೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
70th Karnataka Rajyotsava celebration at Sharada Vidya Sanstha
ಶಾರದಾ ವಿದ್ಯಾ ಸಂಸ್ಥೆಯಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
ಗಂಗಾವತಿ 02 : ವಿದ್ಯಾನಗರ ಶಾರದಾ ವಿದ್ಯಾ ಸಂಸ್ಥೆ, ಗೊಟ್ಟಿಪಾಟಿ ವೆಂಕಟರತ್ನಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿದೇವಿಯ ಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಸ್ ಪ್ರಸಾದರವರು ಮಾತನಾಡಿ ಕನ್ನಡಾಂಬೆಯು ಎಲ್ಲಾ ಭಾಷಿಗರಿಗೂ ಜಾತಿ ಮತ ಭೇದವಿಲ್ಲದೆ ಆಶ್ರಯವನ್ನು ನೀಡಿರುತ್ತಾಳೆ ಈ ತಾಯಿಯ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ ಎಂದು ಮನದಾಳದ ಮಾತನ್ನು ಹೇಳಿರುತ್ತಾರೆ.ಸಂಸ್ಥೆಯ ಸದಸ್ಯರಾದ ಗೊಟ್ಟಿಪಾಟಿ ರವಿಕುಮಾರ ರವರು ಮಾತನಾಡಿ ಈ ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ, ಸಂಸ್ಕೃತಿ ಕಲೆ ಸಾಹಿತ್ಯಕ್ಕೆ ಹೆಸರಾಗಿರುವ ಈ ನಮ್ಮ ಕನ್ನಡ ನಾಡು ಮುಂದಿನ ಜನ್ಮದಲ್ಲಿ ಸಹ ಈ ನಾಡಿನಲ್ಲಿ ಜನಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ವಿಶ್ವನಾಥರಾಜು, ಕಾಂತಾರಾವ್, ಕಮ್ಮ ಕೋಟೆಶ್ವರರಾವ, ಎಸ್. ವೆಂಕಟೇಶ್ವರರಾವ, ಟಿ.ವಿ.ಸುಬ್ಬರಾವ್ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ವೈ ಸುದರ್ಶನ್ರಾವ್ ಹಾಗೂ ಶೈಕ್ಷಣಿಕ ಪ್ರಗತಿ ಪರೀಶೀಲಕರಾದ ಪಂಪನಗೌಡ, ಮುಖ್ಯೋಪಾಧ್ಯಾಯನಿ ಉದಯ ಶಿಕ್ಷಕವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 