ಜೀವ ವಿಮಾ ಶಾಖೆಯಲ್ಲಿ 70ನೇ ವಿಮಾ ಸಪ್ತಾಹ ಆಚರಣೆ
70th Insurance Week Celebration at the Life Insurance Branch
ಬ್ಯಾಡಗಿ, ಸೆ.3: ಪಟ್ಟಣದ ಜೀವ ವಿಮಾ ಶಾಖೆಯ ವತಿಯಿಂದ 70ನೇ ವಿಮಾ ಸಪ್ತಾಹದ ಅಂಗವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಖಾಧಿಕಾರಿ ವಿರೇಂದ್ರ ತೇಲಿ ಮಾತನಾಡಿ, ಜೀವ ವಿಮೆ ಕೇವಲ ಉಳಿತಾಯದ ಸಾಧನವಲ್ಲ. ಕುಟುಂಬದ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಮಹತ್ವದ ವ್ಯವಸ್ಥೆಯಾಗಿದೆ.
ಪ್ರತಿಯೊಬ್ಬರೂ ತಮ್ಮ ಆದಾಯಕ್ಕೆ ಅನುಗುಣವಾಗಿ ಸೂಕ್ತ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯದ ಅನಿಶ್ಚಿತತೆಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದರು. ವಿಮಾ ಸಪ್ತಾಹದ ಅಂಗವಾಗಿ ಗ್ರಾಹಕರಿಗೆ ವಿವಿಧ ವಿಮಾ ಯೋಜನೆಗಳು, ಉಳಿತಾಯ, ಪಿಂಚಣಿ ಹಾಗೂ ಕುಟುಂಬದ ಆರ್ಥಿಕ ಸುರಕ್ಷತೆ ಕುರಿತು ಮಾಹಿತಿ ನೀಡಲಾಯಿತು.
ಹಿರಿಯ ವಿಮಾ ಪ್ರತಿನಿಧಿ ನಾಗೇಶ ಗುಟ್ಟಲ ಮಾತನಾಡಿ, ಎಲ್ಐಸಿ ದೇಶದ ಪ್ರಮುಖ ವಿಮಾ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಡಿಜಿಟಲ್ ಯುಗದಲ್ಲಿಯೂ ಪಾಲಿಸಿದಾರರ ವಿಶ್ವಾಸ ಮತ್ತು ಉತ್ತಮ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದೆ ಎಂದರು.
ನೀಲಪ್ಪ ಕೊಳೇರ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಎಲ್ಐಸಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಜನರ ಆರ್ಥಿಕ ಭದ್ರತೆಗೆ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿವಲಿಂಗ ಎಲ್. ವಿಜಯ, ಹಡಪದ್ ಎ.ಎಂ., ಖಾಜಿ ಬಸವರಾಜ ನೇಗಲೂರು, ಎಚ್.ಎಸ್. ಹೆಡಿಗೊಂಡಮಠ, ಗಣೇಶ ಸೋಮನಕಟ್ಟಿ, ಮೃತ್ಯುಂಜಯ ರಾಮಗುಂಡನಹಳ್ಳಿ, ಚಂದ್ರಶೇಖರ ಹುದ್ದಾರ, ಮಾಲತೇಶ ಎಲ್., ರಘುವೀರ ಬಾಗೋಜಿ, ಆದರ್ಶ ನೆಲೋಗಲ್ ಸೇರಿದಂತೆ ಶಾಖೆಯ ಸಿಬ್ಬಂದಿ, ವಿಮಾ ಪ್ರತಿನಿಧಿಗಳು, ಪಾಲಿಸಿದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 