ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 7 ಲಕ್ಷ ಲಾಭ
7 lakh profit for Primary Rural Agricultural Cooperative Society
ಅಥಣಿ, 20 ; ಸಹಕಾರಿ ಧುರೀಣ, ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಶಂಕರಹಟ್ಟಿ ವಿವಿದ್ದೋಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 7 ಲಕ್ಷ 2 ಸಾವಿರ ರೂ. ಗಳಷ್ಟು ನಿವ್ವಳ ಲಾಭವಾಗಿದೆ ಮತ್ತು ಶೇರುದಾರ ಸದಸ್ಯರಿಗೆ 3ಅ ಲಾಭಾಂಶ ಹಂಚಲಾಗುವುದು ಎಂದು ಸಂಘದ ಅದ್ಯಕ್ಷ ಸಂಜಯ ನಾಡಗೌಡ ಹೇಳಿದರು.
ಅವರು ತಾಲೂಕಿನ ಶಂಕರಹಟ್ಟಿ ವಿವಿದ್ದೋಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 49 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ಸಂಘದ ಕಾರ್ಯಕ್ಷೇತ್ರ ಶಂಕರಹಟ್ಟಿ,ಸಪ್ತಸಾಗರ, ಚಿಕ್ಕೂಡ,ಖವಟಕೊಪ್ಪ, ಗ್ರಾಮಗಳಿಗೆ ಸೀಮಿತವಾಗಿದ್ದು ಒಂದೇ ಸೂರಿನಡಿ ಸದಸ್ಯರಿಗೆ ಸಕಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸದಸ್ಯರ ರೈತ ಬಾಂಧವರ ಮಾರ್ಗದರ್ಶನದಲ್ಲಿ ಸಂಘವು ಸಾಧನೆಯತ್ತ ಮುನ್ನಡೆದಿದೆ ಎಂದ ಅವರು 1036 ಸಂಘವು ಸದಸ್ಯರನ್ನು ಹೊಂದಿದ್ದು, 94 ಲಕ್ಷ 7 ಸಾವಿರ ಸದಸ್ಯರ ಶೇರು ಬಂಡವಾಳ ಹೊಂದಿದ್ದು, ಹಾಗೂ 9 ಕೋಟಿ 96 ಲಕ್ಷ ರೂಪಾಯಿ ಸಂಘವು ದುಡಿಯುವ ಹೊಂದಿದೆ ಎಂದ ಅವರು ಅಡಿಟ್ ವರ್ಗಿಕರಣದಲ್ಲಿ ಸಂಘವು ಎಂದರು.
ಸಹಕಾರಿ ಸಂಘ 7 ಕೋಟಿ 15 ಲಕ್ಷ ರೂಪಾಯಿ ಸಾಲ ನೀಡಿದ್ದು, 20 ಲಕ್ಷ 81 ಸಾವಿರ ರೂಪಾಯಿ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ್ದು,13 ಲಕ್ಷ 2 ಸಾವಿರ ರೂಪಾಯಿ ಟ್ಯಾಕ್ಟರ್ ಗಳಿಗೆ ಮಾಧ್ಯಮಿಕ ಸಾಲ ಹಂಚಿಕೆ ಮಾಡಲಾಗಿದೆ ಎಂದ ಅವರು ಸಾಲ ಪಡೆದ ಸಂಘದ ಎಲ್ಲಾ ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿ ಸಂಘದ ಏಳಿಗೆಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು. ಇದೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದ ಸಾಲದ ಪ್ರಮಾಣವನ್ನು 3 ಲಕ್ಷ ದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುಜಬಲ್ಲಿ ವಣಜೋಳ ಮಾತನಾಡಿ, ಸಂಘದ ಸದಸ್ಯರು ಸಾಲ ಪಡೆಯುವ ಜೊತೆಗೆ ಹೆಚ್ಚು ಹೆಚ್ಚು ಠೇವಣಿ ಇಡಬೇಕು ಮತ್ತು ಸಕ್ಕರೆ ಕಾರಖಾನೆಗಳು ಪಾವತಿಸುವ ಕಬ್ಬಿನ ಬಿಲ್ಲನ್ನು ನಮ್ಮ ಸಹಕಾರಿ ಸಂಘದ ಖಾತೆಗೆ ಜಮಾ ಮಾಡುವ ಮೂಲಕ ಸಂಘದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಿ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಗಿರೇಪ್ಪ ಚೌಗಲಾ, ನಿರ್ದೇಶಕರಾದ ಮಲಗೌಡ ಪಾಟೀಲ, ಜಯಕುಮಾರ ದುರ್ಗಣ್ಣವರ, ಕಾಸಪ್ಪ ಬಾಳಿಕಾಯಿ, ಲಕ್ಷ್ಮಣ ಹೊಸುರ, ಶಿವಾನಂದ ಬಿರಾದಾರ,ಶ್ರೀಮತಿ ಸುಶೀಲಾ ಮಾಚಕನೂರ, ಮಹಾನಂದ ಚಣ್ಣನ್ನವರ, ಮುರಗೇಪ್ಪ ಗಡ್ಡಿ, ಸಹದೇವ ಕೋಳಿ, ಮುತ್ತಪ್ಪ ಮಾಂಗ, ಶಂಕರಾನಂದ ಬುದ್ನಿ, ಹಾಗೂ ರೈತರು, ಮುಖಂಡರು ಅನೇಕರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭುಜಬಲ್ಲಿ ವಣಜೋಳ 2024-25 ನೇ ಸಾಲಿನ ಅಢಾವೆ ಪತ್ರಿಕೆ ಓದಿದರು. ಗೋಪಾಲ ಗಿಡ್ಡೂರ ಕಾರ್ಯಕ್ರಮ ನಿರೂಪಿಸಿದರು. 2023-24 ಹಾಗೂ 2024-25 ನೇ ಸಾಲಿನ ಲಾಭಾಂಶವನ್ನು ಸಹಕಾರಿ ಸಂಘಕ್ಕೆ ಬಿಟ್ಟುಕೊಡುವ ನಿರ್ಧಾರ ಸರ್ವ ಸದಸ್ಯರು ಮಾಡಿ, ಈ ನಿಧಿಯನ್ನು ರೈತರ, ಕೃಷಿ ಅಭಿವೃದ್ಧಿಗೆ ಬಳಸಿ ಎಂದು ಸದಸ್ಯರು ಸಲಹೆ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 