ಅ. 06 ರಿಂದ 68 ನೇ ಕಾಮನ್‌ವೆಲ್ತ್‌ ಸಂಸದೀಯ ಸಮಾವೇಶ: ಬಸವರಾಜ ಹೊರಟ್ಟಿ ಭಾಗಿ

ಅ. 06 ರಿಂದ 68 ನೇ ಕಾಮನ್‌ವೆಲ್ತ್‌ ಸಂಸದೀಯ ಸಮಾವೇಶ:  ಬಸವರಾಜ ಹೊರಟ್ಟಿ ಭಾಗಿ 68th Common wealth Parliamentary Conference from October 06: Basavaraja Horatti to participate

ಬೆಂಗಳೂರು/ಹುಬ್ಬಳ್ಳಿ 04 : ಅಕ್ಟೋಬರ್ 06 ರಿಂದ 10 ನೇ ತಾರೀಖಿನವರೆಗೆಕೆರೆಬಿಯನ್ ಪೂರ್ವ ದ್ವೀಪರಾಷ್ಟ್ರವಾಗಿರುವ ಬ್ರಿಟಿಷ್‌ಕಾಮನ್‌ವೆಲ್ತ್‌ನಗಣರಾಜ್ಯವಾಗಿರುವ ಬಾರ್ಬ್‌ಡೋಸ್‌ದೇಶದರಾಜಧಾನಿ ಬ್ರಿಜ್ಡ್‌ಟೌನ್ ನಗರದಲ್ಲಿ ನಡೆಯುವ “68 ನೇ ಕಾಮನ್‌ವೆಲ್ತ್‌ನ ಸಂಸದೀಯ ಸಮಾವೇಶ” ನಡೆಯಲಿದ್ದುಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ  ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.  

ಈ ಸಮಾವೇಶದಲ್ಲಿಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾಧ್ಯಕ್ಷರು, ರಾಜ್ಯಸಭೆಯ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನ ಸಭೆಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು, ಸಚಿವರುಗಳು, ರಾಜಕೀಯತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧಗಣ್ಯರು ಪಾಲ್ಗೊಳ್ಳಲಿದ್ದಾರೆ. 

ನಾಲ್ಕು ದಿನಗಳ ಸಮಾವೇಶದಲ್ಲಿ ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಅರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಹಲವು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳು ಜರುಗಲಿವೆ. 

ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿರುವ ಸಭಾಪತಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿಅವರು ಪ್ರಮುಖ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಲಿದ್ದು “ಪ್ರಜಾಪ್ರಭುತ್ವ ದೃಢಗೊಳಿಸುವಲ್ಲಿ ಶಾಸನ ಸಭೆಗಳ ಪಾತ್ರ”, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹಾಗೂ ಪಾರದರ್ಶಕತೆಯಅವಶ್ಯಕತೆ”, “ಚುನಾವಣೆಗಳಲ್ಲಿ ಆರ್ಥಿಕ ಪಾರದರ್ಶಕತೆ ಮಹತ್ವ” ಹಾಗೂ “ಅತ್ಯುತ್ತಮ ಆಡಳಿತ,ಬಹುಪಕ್ಷೀಯತೆ ಮತ್ತುಅಂತಾರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಕಾಮನ್‌ವೆಲ್ತ್‌ನ ಪಾತ್ರ” ಮುಂತಾದ ವಿಷಯಗಳ ಕುರಿತು ಪ್ರತ್ಯೇಕವಾಗಿತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.  

ಜಗತ್ತಿನಾದ್ಯಂತರಾಜಕೀಯಧುರೀಣರು ಮತ್ತು ನೀತಿ ನಿರೂಪಕರು ಸೇರಿಂದತೆ ಸಾವಿರಾರು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲಿರುವ ವಿಧಾನ ಪರಿಷತ್ತು ಸಭಾಪತಿ  ಬಸವರಾಜ ಹೊರಟ್ಟಿ ಈಗಾಗಲೆ ಪ್ರಯಾಣ ಬೆಳೆಸಿದ್ದು, ಅಕ್ಟೋಬರ್ 05 ರಂದು ನಾಳೆ ಬಾರ್ಬ್‌ಡೋಸ್‌ದೇಶದರಾಜಧಾನಿ ಬ್ರಿಜ್ಡ್‌ಟೌನ್ ನಗರತಲುಪಲಿದ್ದಾರೆ.