ನಕಲಿ ದಾಖಲೆ ಸೃಷ್ಟಿಸಿ 68 ಎಕರೆ ಜಮೀನು ನೋಂದಣಿ: 6 ಜನರ ಬಂಧನ
68 acres of land registered by creating fake documents: 6 people arrested
ಹೂವಿನಹಡಗಲಿ 27: ಇಲ್ಲಿನ ಜಮೀನು ಹೊಂದಿ ವಿದೇಶದಲ್ಲಿ ನೆಲೆಸಿರುವವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತಾಲ್ಲೂಕಿನ ಕೊಯಿಲಾರಗಟ್ಟಿ ಗ್ರಾಮದ 68.17 ಎಕರೆ ಜಮೀನನ್ನು ನೋಂದಣಿ ಮಾಡಿಸಿ, ಮೂಲ 2 ಪಟ್ಟಾದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಪೊಲೀಸರು ಸಂಬಂಧಿಸಿದಂತೆ ಆರು ಆರೋಪಿಗಳನ್ನು ಗುರುವಾರ ಆರೋಪಿಗಳಾದ ಬಳ್ಳಾರಿಯ ಮೋಹನ್, ಬಾದನಹಟ್ಟಿಯ - ಟಿ.ರಂಜಿತ್ ಕುಮಾರ್, ಸಿರುಗುಪ್ಪದ ಜಿ. ರಾವಿ ತಿರುಮಲೇಶ, ಬಳ್ಳಾರಿಯಎಸ್.ವಿಜಯಕುಮಾರ ಹಾಗೂ ಹೂವಿನಹಡಗಲಿ ತಾಲ್ಲೂಕು ರಾಜವಾಳದ ಜಾಸ್ತಿ ಶ್ರೀನಿವಾಸರೆಡ್ಡಿ, ಪಟ್ಟಣವಾಸಿ ಲಲಿತಕುಮಾರ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಜಾಮೀನು ನೀಡಿದೆ. ನ್ಯಾಯಾಲಯಪ್ರಕರಣ ವಿವರ ಸದ್ಯ ದುಬೈನಲ್ಲಿರುವ ಬೆಂಗಳೂರು ಮೂಲದ ಥಾಮಸ್ ವಿಜಯನ್, ಅಮೆರಿಕದಲ್ಲಿ ರುವ ರಾಜನ್ ಥಾಮಸ್ ಸಹೋದರರು ಈ ಹಿಂದೆ ತಾಲ್ಲೂಕಿನ ಕೊಯಿಲಾರಗ-ಟ್ಟಿಯಲ್ಲಿ 97 ಎಕರೆ ಜಮೀನು ಖರೀದಿಸಿ, ಅದರ ಮಾಲೀಕತ್ವ ಹೊಂದಿದ್ದರು. ಇವರ ಹೆಸರಿನಲ್ಲಿ ಚುನಾವಣಾ ಗುರುತಿನ ಚೀಟಿ ಮತ್ತು ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ) ಪತ್ರದ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2 ಕೋಟಿ ಮೌಲ್ಯದ 68.17 ಎಕರೆ ಜಮೀನನ್ನು ಆರೋಪಿಗಳು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂ ಡಿದ್ದಾರೆ. ನಂತರ ನಕಲಿ ಜಿಪಿಎ ಪತ್ರ ಆಧಾರದಲ್ಲಿ ಇತರರಿಗೂ ಜಮೀನು ಮಾರಾಟ ಮಾಡಿ ವಂಚಿಸಿದ್ದಾರೆ.ವಿದೇಶದಲ್ಲಿರುವ ಥಾಮಸ್ ಸಹೋದರರ ವ್ಯವಸ್ಥಾಪಕ ಬೆಂಗಳೂರಿನ ಬಿಜುಚಾಕೋ ಎಂಬುವವರು ಕಳೆದ ಮೇ ತಿಂಗಳಲ್ಲಿ ತಮ್ಮ ಮಾಲೀಕರ ಜಮೀನು ವೀಕ್ಷಣೆಗಾಗಿ ಕೊಯಿಲಾರಗಟ್ಟಿ ಗ್ರಾಮಕ್ಕೆ ಬಂದಾಗ ವಂಚನೆ ನಡೆದಿರುವುದು ಗೊತ್ತಾಗಿದೆ. ನಂತರ ಅವರು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ಹೂವಿನಹಡಗಲಿ ಪೋಲಿಸ್ ಠಾಣೆಯು ಲ್ಲಿ ಪ್ರಕರಣ ದಾಖಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 