67ನೇ ಆಕಾಶವಾಣಿ ಸಂಗೀತ ಸಮ್ಮೇಳನ: 2025
67th All India Radio Music Conference: 2025
ಶನಿವಾರ 29ನೇ ತಾರೀಖು| ಸಂಜೆ 5.45 ಕ್ಕೆ ‘ಸೃಜನಾ’ ರಂಗಮಂದಿರ
ಧಾರವಾಡ, ನ.26: ಪ್ರಸಾರ ಭಾರತಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಸ್ತುತ ಪಡಿಸುವ, ಆಕಾಶವಾಣಿಯ 67ನೇ ಸಂಗೀತ ಸಮ್ಮೇಳನ -2025, ಶನಿವಾರ 29ನೇ ತಾರೀಖು, ಸಂಜೆ 5.45ಕ್ಕೆ, ನಗರದ ‘ಸೃಜನಾ’ ಅಣ್ಣಾಜಿರಾವ ಸಿರೂರ, ರಂಗಮಂದಿರದಲ್ಲಿ ಆಯೋಜಿತವಾಗಿದೆ.
ಆಕಾಶವಾಣಿ ಮಹಾ ನಿರ್ದೇಶಕರ, ನಿರ್ದೇಶನದನ್ವಯ, ಮೂರು ಸಂಗೀತ ಕಛೇರಿಗಳು, ನಡೆಯಲಿವೆ ಎಂದು, ಆಕಾಶವಾಣಿ ಧಾರವಾಡ ಕೇಂದ್ರದ, ಕಾರ್ಯಕ್ರಮ ಮುಖ್ಯಸ್ಥರಾದ, ಶರಣಬಸವ ಚೋಳಿನ ತಿಳಿಸಿದ್ದಾರೆ.
ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ, ಆಕಾಶವಾಣಿಯ ಉನ್ನತ ಶ್ರೇಣಿ ಕಲಾವಿದ, ಪಂ. ಸೋಮನಾಥ ಮರಡೂರ ಅವರು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಆಕಾಶವಾಣಿ ಸಂಗೀತ ಸಮ್ಮೇಳನಕ್ಕೆ, ಚಾಲನೆ ನೀಡಲಿದ್ದಾರೆ.
ಜನಪದ ಸಂಗೀತ ವಿಭಾಗದಲ್ಲಿ, ಬೆಳಗಾವಿ ಜಿಲ್ಲೆ, ಗೋಕಾಕ ತಾಲೂಕು, ಕಲ್ಲೊಳ್ಳಿಯ, ಮಹಾಂತೇಶ ಹೂಗಾರ ಹಾಗೂ ತಂಡದ ಕಲಾವಿದರು, ಸಂಬಾಳ ವಾದನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಶಾಸ್ತ್ರೀಯ ವಾದ್ಯ ಸಂಗೀತ ವಿಭಾಗದಲ್ಲಿ, ಪುಣೆಯ ಪಂ.ಭೀಮಣ್ಣ ಜಾಧವ ಅವರ ಸುಂದರಿ ವಾದನ ಪ್ರಸ್ತುತ ಪಡಿಸಲಿದ್ದಾರೆ. ಪಂ.ರವಿಕಿರಣ ನಾಕೋಡ, ತಬಲಾ ಸಾಥ್ ನೀಡಲಿದ್ದಾರೆ.
ಕನ್ನಡ ಲಘು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ, ರಾಯಚೂರು ಜಿಲ್ಲೆ, ದೇವದುರ್ಗದ ವೆಂಕಟೇಶ ಅಲ್ಕೋಡ ಹಾಗೂ ಉತ್ತರಕನ್ನಡ ಜಿಲ್ಲೆ, ಶಿರಸಿಯ ಆರಾಧನಾ ಹೆಗಡೆ, ಗಾಯನ ಕಛೇರಿ ನಡೆಸಿಕೊಡಲಿದ್ದಾರೆ. ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಲಿದ್ದು, ರಾಮಚಂದ್ರ ಉಪ್ಪಾರ, ಕೀ ಬೋರ್ಡ್ ನುಡಿಸಲಿದ್ದಾರೆ.
ಆಕಾಶವಾಣಿ, ಧಾರವಾಡ ಕೇಂದ್ರದ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಅರುಣ ಪ್ರಭಾಕರ ಸೇರಿದಂತೆ, ವಿಶೇಷ ಆಹ್ವಾನಿತರು, ಸಂಗೀತ ಕ್ಷೇತ್ರದ ಸಾಧಕರು, ವಿವಿಧ ಕ್ಷೇತ್ರಗಳ ಗಣ್ಯರು, ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸರಿಯಾದ ಸಮಯಕ್ಕೆ, ಕಾರ್ಯಕ್ರಮ ಆರಂಭವಾಗಲಿದ್ದು, ಸರ್ವರಿಗೂ ಆದರದ ಆಮಂತ್ರಣವಿದೆ ಎಂದು, ಆಕಾಶವಾಣಿ ಧಾರವಾಡ ಕೇಂದ್ರದ, ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಪುರಾಣಿಕ ಹಾಗೂ ಆಕಾಶವಾಣಿಯ ನಿಲಯ ಕಲಾವಿದ, ಸಿತಾರ ವಾದಕ, ಉಸ್ತಾದ್ ಶಫೀಕ್ ಖಾನ್ ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 