ಭಾರತ ವಿಕಾಸ ಪರಿಷತ್ ಬೆಳಗಾವಿ ಶಾಖೆಯಿಂದ 64ನೇ ಸ್ಥಾಪನಾ ದಿನಾಚರಣೆ
64th Foundation Day Celebration by the Belagavi Branch of Bharat Vikas Parishad
ಬೆಳಗಾವಿ, 13: ಭಾರತ ವಿಕಾಸ ಪರಿಷತ್ ಬೆಳಗಾವಿ ಶಾಖೆಯ ವತಿಯಿಂದ 64ನೇ ಸ್ಥಾಪನಾ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದೆಹಲಿಯಿಂದ ಆಗಮಿಸಿದ್ದ ಭಾರತ ವಿಕಾಸ ಪರಿಷತ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಶ್ ಜೈನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆರ್. ಎನ್. ಹರಗುಡೆ ಹಾಗೂ ಖ್ಯಾತ ವೈದ್ಯ ಡಾ. ರಮಾಕಾಂತ ನಾಯಕ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಗಣ್ಯರು ದೀಪ ಬೆಳಗಿಸುವ ಮೂಲಕ ಹಾಗೂ ಭಾರತ ಮಾತೆ, ಸ್ವಾಮಿ ವಿವೇಕಾನಂದ ಮತ್ತು ಸಂಸ್ಥೆಯ ಸ್ಥಾಪಕ ಡಾ. ಸೂರಜ್ ಪ್ರಕಾಶ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕ್ಷತಾ ಮೋರೆ ಅವರು ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸಿದರು.
ಭಾರತ ವಿಕಾಸ ಪರಿಷತ್ ಬೆಳಗಾವಿ ಶಾಖೆಯ ಅಧ್ಯಕ್ಷ ವಿನಾಯಕ ಮೋರೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಮಹಿಳಾ ಕಾರ್ಯಕಾರಿ ಸದಸ್ಯೆ ಸ್ವಾತಿ ಘೋಡೆಕರ್ ಅವರು ಸಂಸ್ಥೆಯ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ದಕ್ಷಿಣ ಭಾರತ ವಲಯ ಸೇವಾ ಕಾರ್ಯದರ್ಶಿ ಪಾಂಡುರಂಗ ನಾಯಕ್ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯ ಅತಿಥಿ ಸುರೇಶ್ ಜೈನ್ ಅವರು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ನಿಸ್ವಾರ್ಥ ಸೇವೆ, ರಾಷ್ಟ್ರೀಯ ಏಕತೆ, ಭಾರತೀಯ ಸಂಸ್ಕೃತಿಯ ಸಂರಕ್ಷಣೆ ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ಮಾರ್ಗದರ್ಶನ ನೀಡಿದರು. ವಿಶೇಷವಾಗಿ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು.
ಸ್ಥಾಪನಾ ದಿನದ ಅಂಗವಾಗಿ ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆರ್. ಎನ್. ಹರಗುಡೆ ಹಾಗೂ ಡಾ. ರಮಾಕಾಂತ ನಾಯಕ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಭಾರತ ವಿಕಾಸ ಪರಿಷತ್ನ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪರಿಷತ್ನ ಮಹಿಳಾ ಸದಸ್ಯರಾದ ಸುಖದಾ ದೇಶಪಾಂಡೆ, ಪ್ರೊ. ಅರುಣಾ ನಾಯಕ್, ರಜನಿ ಗುಜ್ಜರ್, ಜಯಾ ನಾಯಕ್ ಹಾಗೂ ಸ್ವಾತಿ ಘೋಡೆಕರ್ ಅವರನ್ನು ಮುಖ್ಯ ಅತಿಥಿ ಸುರೇಶ್ ಜೈನ್ ಅವರು ಸನ್ಮಾನಿಸಿದರು.
ಮಹಿಳಾ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅಗತ್ಯವಿದ್ದ ಮಹಿಳೆಯೊಬ್ಬರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದಿದ್ದರೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸಲು ಆರ್ಥಿಕ ನೆರವು ನೀಡಲಾಯಿತು. ಪ್ರೊ. ಅರುಣಾ ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಪ್ರತಿಭಾ ಹಲ್ಲೆಪ್ಪನವರ ಅವರು ವಂದನಾರೆ್ಣ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಭಾರತ ವಿಕಾಸ ಪರಿಷತ್ನ ಸದಸ್ಯರು ಹಾಗೂ ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 