60ನೇ ವಸಂತದ ಸಂಭ್ರಮ: ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

60ನೇ ವಸಂತದ ಸಂಭ್ರಮ: ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ 60th Vasant Sambandha: Distribution of educational materials to children

ಲೋಕದರ್ಶನ ವರದಿ 

     ಹಾವೇರಿ 16: ಶೈಕ್ಷಣಿಕವಾಗಿ ಉಪಯೋಗಿಸುವ ಪೇನ್,ಪೆನ್ಸಿಲ್ ಹಾಗೂ ನೋಟ್ ಬುಕ್‌ಗಳನ್ನು ವಿತರಣೆ ಮಾಡುವ ಮೂಲಕ  60ನೇ ವರ್ಷದ ಜನ್ಮದಿನವನ್ನು ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣ ಹುಟ್ಟು ಹಬ್ಬ ಆಚರಿಸಿಕೊಂಡ ಘಟನೆ ನಗರದಲ್ಲಿ ಜರುಗಿತು. 

    ಇಲ್ಲಿನ ಇಜಾರಿ ಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಇಲ್ಲಿನ ಶಿವಯೋಗೇಶ್ವರ ನಗರದ 1ನೇ ಕ್ರಾಸ್‌ನಲ್ಲಿರುವ ಶ್ರೀ ಗಣೇಶ ಗ್ಯಾರೇಜ್ ಮಾಲಕರಾದ ಗಣೇಶ ದೇವೇಂದ್ರ​‍್ಪ ತಿಳವಳ್ಳಿ ಅವರು ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಣೆಗೆ ಸಾಕ್ಷಿಯಾಗಿದ್ದಾರೆ. 

      ನಿರಂತರ ಶ್ರಮಿಕರಾದ ಗಣೇಶ ತಿಳವಳ್ಳಿ ಅವರ 60ನೇ ಹುಟ್ಟುವನ್ನು ಮಗ ಕಿರಣ ತಿಳವಳ್ಳಿ ಹಾಗೂ ಕುಟುಂಬ ವರ್ಗದವರು ಸೇರಿಕೊಂಡು ದೇವರ ಸ್ವರೂಪಿ ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಕೇಕ್ ಕತ್ತರಿಸಿ,ಸಿಂಹಿ ಹಂಚಿ ಮಕ್ಕಳಿಗೆ ಶೈಕ್ಷಣಿಕವಾಗಿ ಉಪಯೋಗಿಸುವ ಪೇನ್,ಪೆನ್ಸಿಲ್ ಹಾಗೂ ನೋಟ್ ಬುಕ್‌ಗಳನ್ನು ವಿತರಣೆ ಮಾಡಲಾಯಿತು.ಸೌಮ್ಯ ಸ್ವಭಾವದ ಗಣೇಶ ತಿಳವಳ್ಳಿ ಅವರು ಬಸವೇಶ್ವರ ಕಾಯಕವೇ ಕೈಲಾಸ ತತ್ವದಡಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು.

       ಮುಗ್ಧ ಮನೋಭಾವನೆಯ ಗಣೇಶ ತಿಳವಳ್ಳಿ ಅವರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಅವಳಡಿಸಿಕೊಂಡು ಎಲ್ಲರಿಗೂ ಒಳಿತು ಭಯಸುವ ಗುಣ ಉಳ್ಳವರಾದ ಅವರು ಬುದ್ಧಿಮಾಂದ್ಯ ಮಕ್ಕಳೊಂದಿಗೆ ತಮ್ಮ 60 ವರ್ಷದ ಹುಟ್ಟು ಹಬ್ಬ ಆಚರಣೆ ಅವರ ಸಾರ್ಥಕ ಬದುಕಿನ ಕ್ಷಣವಾಗಿ ಕಂಡು ಬಂದಿತು.ಮಕ್ಕಳು,ಕುಟುಂಬ ವರ್ಗದವರು ಹಾಗೂ ಹಿತೈಷಿಗಳು ಅವರ ಈ ವಿಶಿಷ್ಟ ಅರ್ಥಪೂರ್ಣ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ,ಅವರಿಗೆ ದೇವರು ಆರೋಗ್ಯ,ಆಯುಷ್ಯ ಹಾಗೂ ಸಿರಿ ಸಂಪತ್ತು ನೀಡಲಿ ಎಂದು ಶುಭ ಕೋರಿದರು. 

         ಈ ಸಂದರ್ಭದಲ್ಲಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವಂತಪ್ಪ ಕಾಳಣ್ಣನವರ,ಸುಭಾಷ ತಿಳವಳ್ಳಿ,ಸುಧಾಬಾಯಿ ತಿಳವಳ್ಳಿ,ಪತ್ನಿ ಯಲ್ಲಮ್ಮ ತಿಳವಳ್ಳಿ,ಶೇಕವ್ವ ಫಿಸಾಳೆ,ಕಿರಣ,ಕೀರ್ತಿ ತಿಳವಳ್ಳಿ,ಕುಮಾರ ಪವಾರ, ಚಂದ್ರಕಲಾ ಪವಾರ,ಪ್ರೀತಿ ತಿಳವಳ್ಳಿ,ಹರೀಶ ಬೋಸ್ಲೆ,ಕಾಂತೇಶ ತೆಪ್ಪದ,ವಸತಿ ಶಾಲೆಯ ಶೃತಿ ಪಾಟೀಲ,ಭುವನೇಶ್ವರ ಮತ್ತಿಕಟ್ಟಿ,ಸಂತೋಷ ಸುಂಕಮ್ಮನವರ,ವಿವೇಕಾಂದ ಟಿ,ರಾಮಚಂದ್ರ ಟಿ ಹಾಗೂ ತಿಳವಳ್ಳಿ ಕುಟುಂಬ ವರ್ಗದವರು.ಮೊಮ್ಮಕ್ಕಳು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.