ಗವಿಮಠದ ಮಹಾದಾಸೋಹಕ್ಕೆ ಮಹಲಿಂಗಪೂರ ಭಕ್ತರಿಂದ 60 ಕ್ವೀಂಟಲ್ ಬೆಲ್ಲ
60 quintals of fenugreek from Mahalingapur devotees for the Mahadasoha of Gavi Math
ಕೊಪ್ಪಳ 25 : ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಪ್ರತಿ ಅನೇಕ ಭಕ್ತಗಣ ವಿವಿಧ ರೀತಿಯ ದಾನ್ಯ, ತರಕಾರಿ, ಸಿಹಿ ತಿನಿಸು, ರೊಟ್ಟಿ ಮುಂತಾದ ದಾಸೋಹ ಸೇವೆಯನ್ನು ಮಹಾದಾಸೋಹಕ್ಕೆ ಸಲ್ಲಿಸುವುದು ಭಕ್ತರ ಸಂಪ್ರದಾಯ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಲಿಂಗಪೂರ ಗ್ರಾಮದ ಭಕ್ತರು ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ 60ಕ್ವೀಂಟಾಲ್ ಬೆಲ್ಲವನ್ನು ಸಲ್ಲಿಸಿದ್ದಾರೆ. ಗವಿಸಿದ್ಧೇಶ್ವರ ಜಾತ್ರೆಯ ಭಕ್ತಾಧಿಗಳಿಗೆ ವಸತಿ ವ್ಯವಸ್ಥೆಯ ಮಾಹಿತಿ ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗಲು ಜಾತ್ರಾ ಮಹೋತ್ಸವದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಗಮಿಮಠದ ಶಾಲಾ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಕಲ್ಯಾಣ ಮಂಟಪ, ಸಭಾಭವನಗಳಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಶ್ರೀ ಗವಿಸಿದ್ಧೇಶ್ವರ 2000 ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಕೊಪ್ಪಳ, ಶಾರದಮ್ಮ ವಿ. ಕೊತಬಾಳ ಬಿಬಿಎಮ್ ಕಾಲೇಜು ಕೊಪ್ಪಳ, ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳ, ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಕೊಪ್ಪಳ, ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ ಕೊಪ್ಪಳ, ಗವಿಸಿದ್ಧೇಶ್ವರ ಪ್ರೌಢ ಶಾಲೆ ಕೊಪ್ಪಳ, ಶಿವಶಾಂತವೀರ ಪಬ್ಲಿಕ್ ಶಾಲೆ ಕೊಪ್ಪಳ, ಕೇತೇಶ್ವರ ಕಲ್ಯಾಣ ಮಂಟಪ ಕೊಪ್ಪಳ. ಪಾಂಡುರಂಗ ದೇವಸ್ಥಾನ, ಸ್ವಾಮಿ ವಿವೇಕಾನಂದ ಸಿಬಿಎಸ್‌ಇ ಗೊಂಡಬಾಳ್ ರೋಡ್, ಕೊಪ್ಪಳ, ವಾಸವಿ ಮಂಗಲ ಭವನ, ಮಧುಶ್ರೀ ಗಾರ್ಡನ್ ರೂಮ್, ಮಾಸ್ತಿ ಪಬ್ಲಿಕ್ ಸ್ಕೂಲ್, ಕೊಪ್ಪಳ. ಬಾಲಾಜಿ ಫಂಕ್ಷನ್ ಹಾಲ್ ಹತ್ತಿರ ರೂಮ್, ಭಾವಸಾರ ಕ್ಷತ್ರೀಯ ಸಮಾಜ ಪಾಂಡುರಂಗ ದೇವಸ್ಥಾನ ಮಾರ್ಕೆಟ್ ಹತ್ತಿರ, ಕೊಪ್ಪಳ ಮಳೇಮಲ್ಲೇಶ್ವರ ಯಾತ್ರಾ ನಿವಾಸ. ಈ ಸ್ಥಳದಲ್ಲಿ ಭಕ್ತರಿಗೆ ಉಚಿತವಾಗಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ ಭಕ್ತಾಧಿಗಳು ಇದರ ಸದುಪಯೋಗ ಪಡೆಯಬಹುದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 