ಪಪುವಾ ನ್ಯೂಗಿನಿಯಾದಲ್ಲಿ 6 ತೀವ್ರತೆಯ ಭೂಕಂಪ

ನ್ಯೂಯಾರ್ಕ, ಜ 8 ಪಪುವಾ ನ್ಯೂಗಿನಿಯಾದ ಕಿಂಬೆಯ 131 ಕಿ.ಮೀ ಪೂರ್ವ - ಈಶಾನ್ಯದಲ್ಲಿ 6 ತೀವ್ರತೆಯ ಭೂಕಂಪ ಸಂಭವಿಸಿದೆ. ಮಂಗಳವಾರ ಗ್ರೀನ್ ವಿಚ್ ಕಾಲಮಾನ 19:11:35 ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6 ದಾಖಲಾಗಿತ್ತು ಎಂದು ಅಮೆರಿಕದ ಭೂಗರ್ಭ ಸರ್ವಕ್ಷಣಾಲಯ ತಿಳಿಸಿದೆ. 5.1549 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 151.2578 ಡಿಗ್ರಿ ಪೂರ್ವ ರೇಖಾಂಶದಲ್ಲಿ 116.75 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ಇಲಾಖೆ ತಿಳಿಸಿದೆ. ಯಾವುದೇ ಸಾವು ನೋವಿನ ವರದಿ ಲಭ್ಯವಾಗಿಲ್ಲ.